ಸಹಜ ಸಾವೋ…ಕೊಲೆಯೋ…?ಸ್ಮಶಾನ ಪರೀಕ್ಷೆ..!

POWER CITY KANNADA:DHARWAD/ಧಾರವಾಡ : ಸರ್ಕಾರಿ ಬಸ್ ಚಾಲಕನ ಸಾವಿನ ಕುರಿತು ಕುಟುಂಬಸ್ಥರ ಅನುಮಾನದ ಹಿನ್ನೆಲೆ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ (case)ದಾಖಲಾಗಿದೆ.
ಕೆ ಎಸ್ ಆರ್ ಟಿಸಿ ಬಸ್ ಚಾಲಕನಾಗಿ(bus driver0 ಎರಡು ದಶಕಗಳ ಕಾಲ ಧಾರವಾಡ ಭಾಗದಲ್ಲಿ ಸೇವೆ ಸಲ್ಲಿಸಿದ್ದ ಭದ್ರಾಪೂರ ಗ್ರಾಮದ ಬಾಬಾಜಾನ ಚಿನ್ನೂರ(44) ಕಳೆದ ಮೂರ್ನಾಲ್ಕು ವರ್ಷಗಳಿಂದ ಧಾರವಾಡದ ಮಾಳಾಪುರದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.
ಆದರೆ 10/11/2025 ರಂದು ಊಟ ಮಾಡಿ ಮಲಗಿದ ವ್ಯಕ್ತಿ ಮರುದಿನ 11/11/2025 ರಂದು ಸಾವನ್ನಪ್ಪಿದ್ದರು. ಇ ಹಿನ್ನೆಲೆಯಲ್ಲಿ ಮೃತನ ತಂದೆ ತಾಯಿ ಹಾಗೂ ಸಂಬಂಧಿಕರು ಮೃತನ ಮುಖದ ಮೇಲೆ ಆದ ಗಾಯ ಹಾಗೂ ರಕ್ತದ ಕಲೆಗಳನ್ನು ಕಂಡು ಆತನ ಪತ್ನಿ, ಹಾಗೂ ಪತ್ನಿಯ ಸಹೋದರರನ್ನು ವಿಚಾರಿಸಿದಾಗ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಮಗನ(son) ಸಾವಿನ ಕುರಿತು ಕಾರಣ(reson) ತಿಳಿಸಿದ್ದರು. ಆದರೆ ಮೃತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.ಇನ್ನೂ ಮರಣದ ದಿನದಂದೆ ಮರಣೋತ್ತರ ಪರೀಕ್ಷೆಗೆ(examination) ಕೆಲವರು ಮುಂದಾದರೆ ಇನ್ನೂ ಕೆಲವರು ಬೇಡವೆಂದು “ಮಹಾನ್” ವ್ಯಕ್ತಿಗಳು ನಿರ್ಲಕ್ಷ ಮಾಡಿದರು ಎನ್ನಲಾಗಿದೆ. ಮೃತನ ಅಂತ್ಯಕ್ರಿಯೆ ಮಾತ್ರ ಅಣ್ಣಗೇರಿ ತಾಲೂಕಿನ ಭದ್ರಾಪೂರ ಗ್ರಾಮದಲ್ಲಿಯೇ ನೆರವೆರಿಸಿದ್ದರು.
ಕುಟುಂಬಸ್ಥರ ಅನುಮಾನ ಹಾಗೂ ಕೆಲವು ಸಾಕ್ಷಿಗಳ ಆಧಾರದ ಹಿನ್ನಲೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಉಪನಗರ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದು ಹಲವು ಅನುಮಾನಸ್ಪದ ಸಾಕ್ಷಿಗಳು ದೊರೆತಿವೆ ಎನ್ನಲಾಗಿದೆ. ಸದ್ಯಕ್ಕೆ ಪೊಲೀಸರು ಪುನಃ ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದು ತನಿಖೆ ಮುಂದುರೆದಿದೆ.
