ಹುಬ್ಬಳ್ಳಿ ಧಾರವಾಢ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಖೊಟ್ಟಿ ದಾಖಲೆಗಳು ವೈರಲ್: ಆಯಕ್ತರು silent!
POWER CITY NEWS

POWERCITY NEWS:HUBBALLI/ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೂಲ ಫಲಾನುಭವಿಗಳಿಗೆ ಹಂಚಿಕೆಯಾಗಬೇಕಿದ್ದ ಸೈಟ್‌ಗಳು ಅಧಿಕಾರಿಗಳ ಸಮ್ಮುಖದಲ್ಲೇ ಖೊಟ್ಟಿ ಆಧಾರ ದಾಖಲೆಗಳನ್ನ ಸೃಷ್ಟಿ ಮಾಡಿದ್ದಲ್ಲದೆ ವ್ಯವಸ್ಥಿತವಾಗಿ ನಗರಾಭಿವೃದ್ಧಿ ಪ್ರಾಧಿಕಾರವನ್ನೇ ರಿಯಲ್ ಎಸ್ಟೇಟ್ ಕಚೇರಿಯಾಗಿ ಬಳಸಿ ಕೊಳ್ಳುತ್ತಿರುವ ಗುಟ್ಟು ರಟ್ಟಾಗಿದೆ.
ಇ ಹಿಂದೆಯೂ ಹುಬ್ಬಳ್ಳಿಯ ಗೋಕುಲ ರಸ್ತೆಯ ನಿವಾಸಿ ಮನೋಜ್‌ಕುಮಾರ ತೋಟಗೇರ ಖೊಟ್ಟಿ ದಾಖಲೆ ಸೃಷ್ಟಿಸಿ ಹಲವರಿಗೆ ಮೋಸ ವೆಸಗಿದ ಆರೋಪದಲ್ಲಿ ಆತ ಮತ್ತು ಆತನಿಗೆ ಸಹಕರಿಸಿದ ಹಲವರ ಮೇಲೆ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲು ಪಾಲಾಗಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಬಹುತೇಕ ಹೆಚ್ಚಿನ ಸೈಟಗಳನ್ನು ಹೊಂದಿರುವ ಲೋಹಿಯಾನಗರ ಇದೀಗ ಭೂಗಳ್ಳರ ಪಾಲಾಗಿವೆ. ಅಲ್ಲದೆ ಪವರ್ ಸಿಟಿ ನ್ಯೂಸ್ ಇ ಹಿಂದೆಯೂ ಕೂಡ ಖೊಟ್ಟಿ ದಾಖಲೆಗಳ ಕುರಿತು ಹುಢಾ ಆಯುಕ್ತ ಬಿರಾದಾರ ಅವರಿಗೂ ಕೂಡ ಹಲವು ಸೈಟ್‌ಗಳ ಖೊಟ್ಟಿ ದಾಖಲೆ ಸೃಷ್ಟಿಸಿ ಶುದ್ಧಕ್ರಯಪತ್ರ ಮಾಡಿಸಿಕೊಂಡು ವಂಚನೆ ನಡೆಸಿರುವ ಕುರಿತು ಮುಕ್ತವಾಗಿಯೆ ಗಮನಕ್ಕೆ ತಂದರು ಇದುವರೆಗೂ ಯಾರ ಮೇಲು ಕ್ರಮ ಕೈಗೊಳ್ಳದೆ ಇರೋದನ್ನ ಕಂಡ್ರೆ ಇಲ್ಲಿ “ದಾಲ್ ಮೆ ಕುಚ್ ಕಾಲಾ ಹೈ”.