BREAKING NEWSCITY CRIME NEWSDHARWADHubballiLife StyleTWINCITYರಾಜಕೀಯರಾಜ್ಯ

ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಲುಕಾನೂನು ಕ್ರಮ ಅಗತ್ಯ:ಬಂಡು ಕುಲಕರ್ಣಿ!

POWER CITY KANNADA :ನವಲಗುಂದ: ಪತ್ರಕರ್ತರು ಸಾಮಾಜಿಕ ಕಾಳಜಿ ಸಹಿತ ಜವಾಬ್ದಾರಿಗಳನ್ನು ನಿಭಾಯಿಸುವುದು ಅಗತ್ಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಹೇಳಿದರು.

ಪತ್ರಕರ್ತರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳನ್ನು ಶೋಷಣೆಗೆ ಒಳಪಡಿಸುತ್ತಿರುವವರ ವಿರುದ್ದ ಕ್ರಮ ಜರುಗಿಸಲು ಮುಂದಾಹಬೇಕಾದ ಅಗತ್ಯವಿದೆ.

ನಕಲಿ ಪತ್ರಕರ್ತರ ಹಾವಳಿಯಿಂದಾಗಿ ನೈಜ ಪತ್ರಕರ್ತರಿಗೆ ಮಜುಗುರ..

ಪಟ್ಟಣದ ಅಣ್ಣಿಗೇರಿ ರಸ್ತೆಯ ಪ್ರವಾಸಿಮಂದಿರದಲ್ಲಿ (IB)ಏರ್ಪಡಿಸಿದ್ದ ತಾಲೂಕಾ ಸಂಘಕ್ಕೆ ನೂತನವಾಗಿ(NEW) ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು ಸಮಾಜದಲ್ಲಿ ಪತ್ರಕರ್ತ(journalist) ವೃತ್ತಿಗೆ ಗೌರವದ ಸ್ಥಾನವಿದ್ದು ಯಾವುದೇ ಆಮಿಷಗಳಿಗೆ(accpetation) ಬಲಿಯಾಗದೇ ನಿಷ್ಟೂರತೆಯಿಂದ ವರದಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವಂತೆ ಬದುಕಬೇಕೆಂದು ಸಲಹೆ ನೀಡಿದರಲ್ಲದೆ ತಾಲೂಕಾ ಸಂಘದಿಂದ ಸಮಾಜಕ್ಕೆ (social)ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಸದಾ ಚಟಿವಟಿಕೆಯಿಂದಿರಬೇಕು ಇಂತಹ ಕಾರ್ಯಗಳಿಗೆ ಜಿಲ್ಲಾ ಸಂಘವು ಸದಾ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.

ರಾಜ್ಯ ಕಾರ್ಯಕಾರಣಿ(political) ಸಮಿತಿ ಸದಸ್ಯ ರಾಜು ಬಿಜಾಪೂರ(rajubijapur) ಮಾತನಾಡಿ ಇಂದಿನ ದಿನಮಾನಗಳಲ್ಲಿ ನಕಲಿ ಪತ್ರಕರ್ತರ ಹಾವಳಿಯಿಂದಾಗಿ ನೈಜ ಪತ್ರಕರ್ತರು ಮುಜುಗುರಕ್ಕೊಳಗಾಗುವ ಪರಿಸ್ಥಿತಿ ಬಂದೊದಗಿದ್ದು ಇವೆಲ್ಲವನ್ನು ಮೀರಿ ವೃತ್ತಿ ಘನತೆ ಕಾಪಾಡಿಕೊಳ್ಳುವ ಮೂಲಕ ನಕಲಿ ಪತ್ರಕರ್ತರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳನ್ನು ಶೋಷಣೆಗೆ ಒಳಪಡಿಸುತ್ತಿರುವವರ ವಿರುದ್ದ ಕ್ರಮ ಜರುಗಿಸಲು ಮುಂದಾಹಬೇಕಾದ ಅಗತ್ಯವಿದೆ. ಇದರಿಂದಾಗಿ ಸಮಾಜದಲ್ಲಿ ನೈಜ ಪತ್ರಕರ್ತರಿಗೆ ಮಜುಗುರ ತಪ್ಪಿದಂತಾಗುತ್ತದೆ ಎಂದ ಅವರು ಶೀಘ್ರದಲ್ಲಿಯಯೇ ಜಿಲ್ಲಾ ಸಂಘವು ನಕಲಿ ಪತ್ರಕರ್ತರ(fake journalist) ಹಾವಳಿ ತಡೆಗಟ್ಟಲು ಜಿಲ್ಲಾಧಿಕಾರಿಗಳೊಂದಿಗೆ(dc) ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದೆಂದರು.

ಇದೇ ಸಂದರ್ಭದಲ್ಲಿ ತಾಲೂಕಾ ಪತ್ರಕರ್ತರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಇಸ್ಮಾಯಿಲ್ ನದಾಫ, ಕಾರ್ಯದರ್ಶಿ ಈಶ್ವರ ಲಕ್ಕುಂಡಿ ಹಾಗೂ ಖಜಾಂಚಿ ಶಂಕರ ಸುಬೇದಾರಮಠ ಅವರಿಗೆ ಜಿಲ್ಲಾಧ್ಯಕ್ಷರಾದ ಬಂಡು ಕುಲಕರ್ಣಿ ಪ್ರಮಾಣ ಪತ್ರ ವಿತರಿಸಿದರು.

ಹಿರಿಯ ಪತ್ರಕರ್ತ ಹುಚ್ಚಪ್ಪ ಭೋವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹೇಮರಡ್ಡಿ ಸೈದಾಪೂರ, ಮಹೇಶ ನರೇಗಲ್,
ಚಂದ್ರು ಕೊಟಗಿ, ಪುಂಡಲೀಕ ಮುಧೋಳೆ, ಬಾಬಾಜಾನ ಶಿರಕೋಳ, ಮೆಹಬೂಬ ಅಣ್ಣಿಗೇರಿ, ಸಂಜು ಗುರಿಕಾರ, ಸಮಿರ ಇಂಜನೀಯರ, ಗಂಗಾಧರ ಕತ್ತಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಶ್ರೀಕಾಂತ ಮನ್ವಾಚಾರ್ಯ ಸ್ವಾಗತಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *