
POWER CITY NEWS:HUBBALLI/ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕೊಡ ಮಾಡುವ ಪ್ರತಿಷ್ಠಿತ ರಾಜ್ಯೋತ್ಸವ ಧೀಮಂತ ಪ್ರಶಸ್ತಿ ಹಿರಿಯ ಪತ್ರಕರ್ತ ಮೆಹಬೂಬ ಮುನವಳ್ಳಿ ಅವರಿಗೆ ಒಲಿದು ಬಂದಿದೆ.
ಮೂಲತಃ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಮೆಹಬೂಬ ಮುನವಳ್ಳಿ ಅವರು ಎರಡು ದಶಕದಿಂದ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತವರಿಗೆ ಪ್ರಶಸ್ತಿ ನೀಡುವ ಮೂಲಕ ಧೀಮಂತ ಪ್ರಶಸ್ತಿ ಗೌರವ ಇಮ್ಮಡಿಸಿದಂತಾಗಿದೆ.
ಹುಬ್ಬಳ್ಳಿಯ ಸಿಟಿವಿ, ಉಷಾಕಿರಣ ಪತ್ರಿಕೆ, ಸಂಜೆ ದರ್ಪಣ, ಟಿವಿ 9, ಜನಶ್ರೀ ಟಿವಿ, ಹಲವು ರಿಯಾಲಿಟಿ ಶೋದಲ್ಲಿ ಕಾರ್ಯ ನಿರ್ವಹಿಸಿದ್ದು, ಇದೀಗ ಬಿಟಿವಿ ಉತ್ತರ ಕರ್ನಾಟಕದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

