assemblyBREAKING NEWSCITY CRIME NEWSHubballiL&TNAVANAGARPolicePolitical newsProtestSportsTechTWINCITYರಾಜಕೀಯರಾಜ್ಯಹುಬ್ಬಳ್ಳಿ

ರಸ್ತೆ ಅಪಘಾತ ಬಾರದ ಲೋಕಕ್ಕೆ ತಾಯಿ-ಮಗ!

POWER CITYNEWS: DHARWADಧಾರವಾಡ: ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ತೇಗೂರು ಬಳಿಯಿರುವ ಮುಲ್ಲಾ ದಾಬಾ ಸಮೀಪ ಭಾನುವಾರ ತಡರಾತ್ರಿ ಸಂಭವಿಸಿದೆ.

ಗದಗ ಮೂಲದ ಸುರೇಶ ತುಪ್ಪದ (52) ಹಾಗೂ ಮಹಾಂತಮ್ಮ ತುಪ್ಪದ (65) ಎಂಬುವವರೇ ಈ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು.

ಕ್ರೂಸರ್ ವಾಹನ ತೆಗೆದುಕೊಂಡು ಸುಮಾರು 10-12 ಜನ ಕೊಲ್ಲಾಪುರದ ದೇವಸ್ಥಾನಕ್ಕೆ ತೆರಳಿ ವಾಪಸ್ ಗದಗ ಕಡೆಗೆ ಬರುತ್ತಿದ್ದರು. ಈ ವೇಳೆ ಮುಲ್ಲಾ ದಾಬಾ ಸಮೀಪ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *