ಕೆ ಎಸ್ ಆರ್ ಟಿ ಸಿ ಚಾಲಕನ ಹತ್ಯೆ…?ಅನುಮಾನ..!

POWER CITY NEWS:ಧಾರವಾಡ: ವ್ಯಕ್ತಿಯೊಬ್ಬನ ಸಾವಿನ ಕುರಿತು ಇದೀಗ ಹಲವೇಡೆ ಅನುಮಾನ ವ್ಯಕ್ತಪಡಿಸಿ ಚರ್ಚೆಗಳು ಆರಂಭಗೊಂಡಿವೆ. ಧಾರವಾಡ ಶಹರದ ಮಾಳಾಪುರ ನಿವಾಸಿಯಾಗಿದ್ದರು ಎನ್ನಲಾದ ಕೆ ಎಸ್ ಆರ್ ಟಿಸಿ ವಿಭಾಗದಲ್ಲಿ ಚಾಲಕನಾಗಿ ಕರ್ತವ್ಯ ನಿರ್ಹಿಸುತ್ತಿದ್ದ ವ್ಯಕ್ತಿ ಕಳೆದ 10/11/2025ರ ರಾತ್ರಿ ಮಲಗಿದ ವ್ಯಕ್ತಿ ಮರುದಿನ ಹಾಸಿಗೆಯಲ್ಲೇ ಶವವಾಗಿದ್ದ ಘಟನೆ ನಡೆದಿದೆ.
ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಮೃತ ವ್ಯಕ್ತಿಯ ಸಾವಿನ ಕುರಿತು ಆತನ ತಂದೆ ತಾಯಿ ಸೇರಿದಂತೆ ಶವ ನೋಡಿದ್ದ ಅನೇಕ ಜನ ಸಂಶಯ ವ್ಯಕ್ತ ಪಡಿಸಿದ್ದಾರೆ.
ಆತನ ಸಾವಿನ ಕುರಿತು ಮಾಹಿತಿ ನೀಡುವ ಆತನ ಪತ್ನಿಯ ಹೇಳಿಕೆಗೂ ಶವಕ್ಕೂ ಒಂದಕ್ಕೊಂದು ಸಂಭಂಧವೆ ಇಲ್ಲದ್ದಾಗಿದೆ. ಇದೆ ಹೇಳಿಕೆಯಿಂದಲೇ ಇದೀಗ ಆತನ ಸಹೋದರ ತಂದೆ ತಾಯಿಯ ನೆಮ್ಮದಿ ಕೆಡಸಿದೆ.
ಇದೀಗ ಸಾರ್ವಜನಿಕ ವಲಯದಲ್ಲಿ ಸಂಶಯಗಳು ಬಲಗೊಂಡಿದ್ದರ ಹಿನ್ನೆಲೆಯಲ್ಲಿ ಆತನ ಕುಟುಂಸ್ಥರು ಕಳೆದ ಒಂದು ತಿಂಗಳಿನಿಂದ ಸಂಭಂಧಪಟ್ಟ ಪೊಲೀಸ್ ಠಾಣೆಗೆ ಪಿರ್ಯಾದಿ ನೀಡಲು ಅಲೆಯುತ್ತಿದ್ದರು ಸಹ ಇದುವರೆಗೂ ರೆಸ್ಪಾನ್ಸ್ ಸಿಗುತ್ತಿಲ್ಲ ಎಂದು ಅಳಲು ತೊಡಿಕೊಂಡಿದ್ದಾರೆ.
ಹಾಗಾದ್ರೆ ಆತನ ಸಾವಿನ ಕುರಿತು ಇರುವ ರಹಸ್ಯವಾದ್ರೂ ಎನು..? ಎನ್ನುವುದನ್ನ ಪೊಲೀಸ್ ಇಲಾಖೆಯ ನಿಷ್ಪಕ್ಷಪಾತ ತನಿಖೆಯಿಂದಲೇ ಹೊರ ಬರಬೇಕಿದೆ.
