ಟೆಸ್ಟ್ ಪಂದ್ಯದಿಂದ ಸಾಯಿ ಸುದರ್ಶನ್ ಹೊರಕ್ಕೆ!
SPORTS NEWS

POWER CITY NEWS : ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೆಯಲಿರುವ ಕ್ರೀಕೇಟ್ ಪಂದ್ಯದಲ್ಲಿ ಇಂಗ್ಲೆಂಡ್(england) ವಿರುದ್ಧದ ಎರಡನೇ ಟೆಸ್ಟ್ (test)ಪಂದ್ಯಕ್ಕಾಗಿ ಭಾರತ(India) ಕ್ರಿಕೆಟ್ ತಂಡವು ಆಡುವ ಹನ್ನೊಂದು ಕ್ರೀಡಾ ಪಟುಗಳಲ್ಲಿ(911 PLAYERS) ಸಧ್ಯಕ್ಕೆ ಬದಲಾವಣೆಗಳು ಕಾಣಲಿವೆ. ಮೊದಲ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಟಗಾರ ಸಾಯಿ ಸುದರ್ಶನ್(SAI SUDARSHAN) ಎರಡನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ತಂಡದ ಆಡಳಿತ ಮಂಡಳಿಯು ಆಲ್‌ರೌಂಡರ್ ಆಯ್ಕೆಗಳನ್ನು ತಂಡಕ್ಕೆ ಕರೆತರುವ ಮತ್ತು ಸರಣಿಯ ಆರಂಭಿಕ ಪಂದ್ಯದಲ್ಲಿ ತನಗೆ ದೊರೆತ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾದ ಸುದರ್ಶನ್ ಅವರನ್ನು ಕೈಬಿಡುವ ಬಗ್ಗೆ ನಿರ್ಣಯಕ್ಕೆ ಬಂದಿದೆ ಎನ್ನಲಾಗಿದೆ.
ಒಂದುವೇಳೆ ಈ ಸರಣಿಯಲ್ಲಿ ಸಾಯಿ ಸುದರ್ಶನ್ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಅದು ಅವರ ಚೊಚ್ಚಲ ಪಂದ್ಯವಾಗಿರುವುದರಿಂದ ಅಂತಹ ಬದಲಾವಣೆಯು ಟೀಕೆಗೆ ಗುರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಪ್ರಕಾರ, ಸಾಯಿ ಸುದರ್ಶನ್ ಅವರ ಸ್ಥಾನವನ್ನು ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್(WASHINGTON) ಸುಂದರ್ ವಹಿಸಿಕೊಳ್ಳುವ ಸಾಧ್ಯತೆಯಿದೆ. ಅವರನ್ನು ಪ್ಲೇಯಿಂಗ್ ಇಲೆವೆನ್(PLAING11) ಭಾರವಾಗಿಸಲು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೆಚ್ಚು ಉತ್ಸುಕರಾಗಿದ್ದಾರೆ. ಆದರೆ, ಸುದರ್ಶನ್ ಅವರ ಬಗ್ಗೆ ನಿರ್ಧಾರವನ್ನು ಪ್ರದರ್ಶನದ ದೃಷ್ಟಿಕೋನದ ಬದಲಿಗೆ ತಂಡದಲ್ಲಿ ಸಮತೋಲನ ಸಾಧಿಸಲು ಪರಿಗಣಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಸುದರ್ಶನ್ ಅವರನ್ನು ನಿಜವಾಗಿಯೂ ಕೈಬಿಟ್ಟರೆ, ಕರುಣ್ ನಾಯರ್ ಅವರನ್ನು ನಂ. 3 ಸ್ಥಾನಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ. ನಾಯಕ ಶುಭಮನ್ ಗಿಲ್ ತಂಡದಲ್ಲಿ 4ನೇ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎನ್ನಲಾಗಿದೆ.