BREAKING NEWSCITY CRIME NEWSKMC HOSPITALPoliceಅಣ್ಣಿಗೇರಿಧಾರವಾಡನವಲಗುಂದಹುಬ್ಬಳ್ಳಿ
ವ್ಯಕ್ತಿಯೋರ್ವನ ಸಂಶಯಾಸ್ಪದ “ಶವ”ಪತ್ತೆ?
DAKHANI

POWER CITY NEWS: ANNIGERI/ಅಣ್ಣಿಗೇರಿ : ಸಂಶಯಾಸ್ಪದ ರೀತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾದ ಘಟನೆ ಅಣ್ಣಿಗೇರಿ ತಾಲ್ಲೂಕಿನ ಭದ್ರಾಪೂರ ಗ್ರಾಮದ ಬಳಿ ನಡೆದಿದೆ.
ಮೃತ ವ್ಯಕ್ತಿ ಅಂದಾಜು 58-65 ವರ್ಷದೊಳಗಿನ ವ್ಯಕ್ತಿಯಾಗಿದ್ದಾನೆ.ಮುಖದ ಮೇಲೆ ಗಂಭೀರ ಸ್ವರೂಪದ ಗಾಯಗಳಿದ್ದು ಭಾಗಶಃ ಕೊಲೆಯೋ ಅಥವಾ ಅಪಘಾತವೋ ಎಂಬುದು ಪೊಲೀಸರ ತನಿಖೆಯಿಂದಷ್ಟೆ ತಿಳಿಯಬೇಕಿದೆ.
ಮೃತ ವ್ಯಕ್ತಿಯು ಚಕ್ಸ್ ಲುಂಗಿ,ಬಾದಾಮಿ ಬಣ್ಣದ ಅಂಗಿ,ಬಿಳಿ ಬಣ್ಣದ ಟವಲ್,ಹಾಗೂ ಒಳ ಉಡುಪಾಗಿ ನಿಲಿ ಬಣ್ಣದ ಟಿ ಶರ್ಟ್ ಕೂಡ ಧರಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಮೃತ ವ್ಯಕ್ತಿ ಯಾರು?ಏಕೆ ಇಲ್ಲಿ ಹೆಣವಾದ ಎನ್ನುವುದು ಸ್ಥಳೀಯ ನಿವಾಸಿಗಳ ಮನದಲ್ಲಿರುವ ಪ್ರಶ್ನೆಯಾಗಿದೆ.
ಸದ್ಯಕ್ಕೆ ಅಣ್ಣಿಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.