ಧಾರವಾಡ

ಧಾರವಾಡ ಜಿಲ್ಲೆಗೆ ಆ ಪ್ರಾಣಿ ತಂದಿದೆ ಆತಂಕ

ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಚಿರತೆ ಬಂತೊಂದು ಚಿರತೆ ಎನ್ನುವ ಆತಂಕ ಜಿಲ್ಲೆಯ ಜನರಲ್ಲಿ ಕಾಡುತ್ತಿದೆ. ಅದರಲ್ಲೂ ಚಿರತೆಯೊಂದು ಇಬ್ಬರು ಮಹಿಳೆಯರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದೆ ಎಂದು ಆಸ್ಪತ್ರೆಗೆ ದಾಖಲಾದ ಮಹಿಳೆಯರು ಹೇಳುತ್ತಿದ್ದಾರೆ. ಆದ್ರೆ ಅರಣ್ಯ ಇಲಾಖೆ ಮಾತ್ರ ಇದು ಚಿರತೆನೆ ಅಲ್ಲಾ ಸ್ವಾಮಿ ಇದೊಂದು ಕಾಡು ಪ್ರಾಣಿ ಅಂತಾ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಾಣಿ ದಾಳಿಗೆ ಗಾಯಗೊಂಡು‌ ಚಿಕೆತ್ಸೆ ಪಡೆಯುತ್ತಿರುವ ಮಹಿಳೆಯರು
ಯಶಪಾಲ್ ಕ್ಷೀರಸಾಗರ (ಉಪ ಅರಣ್ಯ ಸಂರಕ್ಷಾಧಿಕಾರಿ)

ಇಂದು ಬೆಳಿಗ್ಗೆ ಸೋಮವಾರ ಜನೇವರಿ 31 ರಂದು ಗೋವನಕೊಪ್ಪದ ಇಬ್ಬರು ಮಹಿಳೆಯರ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಗಾಯಗೊಂಡವರು ಹೇಳುತ್ತಿದ್ದಾರೆ. ಗೋವನಕೊಪ್ಪದ ಬಸವಣ್ಣೆವ ಕುಲಕರ್ಣಿ ಹಾಗೂ ಮಂಜುಳಾ ಎನ್ನುವರು ಜಿಲ್ಲಾಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದು, ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು ಇಬ್ಬರ ಆರೋಗ್ಯವನ್ನು ವಿಚಾರಣೆ ಮಾಡಿದ್ದಾರೆ.

ಇತ್ತೀಚಿಗೆ 2 ತಿಂಗಳ ಹಿಂದೆಯಷ್ಟೇ ಸೆಪ್ಟೆಂಬರ್​ ತಿಂಗಳಲ್ಲಿ ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿತ್ತು, ನಂತರ ಅದಾದ ಬಳಿಕ ಕವಲಗೇರಿ ಹಾಗೂ ಗೋವನಕೊಪ್ಪದಲ್ಲಿ ಕಾಣಿಸಿಕೊಂಡಾಗ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಯಶಸ್ವಿ ಕಾರ್ಯಾಚರಣೆಯಿಂದ ಚಿರತೆಯನ್ನು ಸೆರೆಹಿಡಿದು ಕಾಡಿಗೆ ಬಿಟ್ಟು ಬರಲಾಗಿತ್ತು.

ಧಾರವಾಡ ತಾಲೂಕಿನ ಗೋವನಕೊಪ್ಪ, ದಂಡಿಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ತಂಡಗಳು ಕಾರ್ಯಚರಣೆ ನಡೆಸಿವೆ. ಕೆಲವರು ಚಿರತೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಚಿರತೆಯೋ, ತೋಳ ಅಥವಾ ಬೇರೆ ಯಾವುದೇ ಕಾಡು ಪ್ರಾಣಿ ಎಂಬುದು ಕಾರ್ಯಾಚರಣೆ ನಂತರ ತಿಳಿಯಲಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಜನೇವರಿ 31 ರ ರಾತ್ರಿಯಿಂದಲೇ ಜಿಲ್ಲಾಡಳಿತ ಹಾಗೂ ಪೊಲೀಸ ಇಲಾಕೆಯಿಂದ ಅಗತ್ಯ ಸಿಬ್ಬಂದಿ ನೆರವು ಪಡೆದುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಯಾರೂ ಕೂಡ ಸುಳ್ಳು ಸುದ್ದಿ ಹಬ್ಬಿಸಬಾರದು, ರಾತ್ರಿ ವೇಳೆಯಲ್ಲಿ ಹೊರಗಡೆ ಒಬ್ಬೊಬ್ಬರಾಗಿ ತಿರುಗಾಡಬಾರದು ಎಂದು ಧಾರವಾಡ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button