ಉದ್ಯಮಿ ಬರೆದ’TILES & STONES’ಪುಸ್ತಕ ಬಿಡುಗಡೆ.
dakhani

power citynews : hubballi/ಹುಬ್ಬಳ್ಳಿ: ಸ್ಥಳೀಯ ಉದ್ಯಮಿ ಅಭಿಷೇಕ ಮಲಾನಿ ಬರೆದಿರುವ ‘ಟೈಲ್ಸ್ ಆ್ಯಂಡ್ ಸ್ಟೋನ್ಸ್’ ಪುಸ್ತಕವನ್ನು ಸೋಮವಾರ ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ಬಿಡುಗಡೆ ಮಾಡಲಾಯಿತು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಪ್ರೊ ಚಾನ್ಸಲರ್ ಅಶೋಕ ಶೆಟ್ಟರ್, ‘ಮನೆ ನಿರ್ಮಾಣದ ಕನಸು ಹೊತ್ತವರಿಗೆ ಎದುರಾಗುವ ಸಮಸ್ಯೆಗಳೇನು, ಅವುಗಳಿಗೆ ಪರಿಹಾರವೇನು ಎನ್ನುವುದನ್ನು ಈ ಪುಸ್ತಕ ತಿಳಿಸಿಕೊಡುತ್ತದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಪರೂಪದ ಹೊತ್ತಿಗೆ ಇದಾಗಿದೆ’ ಎಂದರು.
ಕೃತಿಕಾರ ಅಭಿಷೇಕ ಮಲಾನಿ ಮಾತನಾಡಿ, ‘ಅಭಿವೃದ್ಧಿ, ಉದ್ಯಮ ಮತ್ತು ಶ್ರಮದ ಸಂಕಲನವಾಗಿರುವ ಎವಿಎಂ ಗ್ರಾನೈಟ್ ಸಂಸ್ಥೆಯಲ್ಲಿ ಕಲಿತ ಬದುಕಿನ ಪಾಠಗಳನ್ನು ಈ ಪುಸ್ತಕದಲ್ಲಿ ತಿಳಿಸಿದ್ದೇನೆ. ಮನೆ ನಿರ್ಮಿಸುವವರು ಎದುರಿಸುವ ತೊಂದರೆಗಳಿಗೆ ದಾರಿ ತೋರಿಸಬಹುದಾದ ಪುಸ್ತಕ ಇದಾಗಿದೆ ಎಮದು ಭಾವಿಸಿದ್ದೇನೆ. ಅದಕ್ಕೆ ಅಕ್ಷರ ರೂಪ ಕೊಡಬೇಕೆಂಬ ಸಂಕಲ್ಪದಿಂದ ಪುಸ್ತಕ ರಚಿಸಿದ್ದೇನೆ’ ಎಂದು ಹೇಳಿದರು.
‘ಮನೆ ನಿರ್ಮಾಣದ ಉದ್ಯಮದಲ್ಲಿರುವ ಡಿಸೈನರ್, ಬಿಲ್ಡರ್, ಎಂಜಿನಿಯರ್‌ಗಳಿಗೆ ಇದು ಉಪಯೋಗವಾಗಬಹುದು. ಕಾಮಗಾರಿ ಸಂದರ್ಭ ಎದುರಾಗು ನೈಜ್ಯ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಪರಿಣಾಮಕಾರಿ ಅಂಶಗಳನ್ನು ಒಳಗೊಂಡಿದೆ’ ಎಂದರು.
ಎವಿಎಂ ಗ್ರಾನೈಟ್ಸ್ ಸಂಸ್ಥೆ ಭಾಸ್ಕರ್ ಮಲಾನಿ, ಮುಕುಂದ ಮಲಾನಿ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು. ಪುಸ್ತಕಕ್ಕೆ ₹399 ಇದ್ದು, ಪೆನ್‌ಡೌನ್‌ಪ್ರೆಸ್ ಪ್ರಕಾಶನ ಹೊರತಂದಿದೆ.