BREAKING NEWSCITY CRIME NEWSPoliceRainTechTWINCITY

ಮಗನ ಹಿಂದೆಯೇ ತಂದೆಯೂ ಇಹಲೋಕದತ್ತ ಪಯಣ!

crime news

POWER CITYNEWS:DHARWAD/ಧಾರವಾಡ: ಥಿನ್ನರ್ ಬಾಟಲಿ ಜಾರಿ ಬಿದ್ದು ಮಗು ಸಾವನ್ನಪ್ಪಿದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ತಂದೆಯೂ ಚಿಕಿ-ಫಲಕಾರಿಯಾಗದೇ ಆಸ್ಪತ್ರೆಯಲ್ಲಿಂದು ಮೃತಪಟ್ಟಿದ್ದಾರೆ.

ಚಂದ್ರಕಾಂತ್‌ ಮಾಶ್ಯಾಳ ಮೃತ ದುರ್ದೈವಿಯಾಗಿದ್ದು. ಧಾರವಾಡದ (Dharwad) ಸಂತೋಷ್ ನಗರದಲ್ಲಿನ ಮನೆಯೊಂದರಲ್ಲಿ ಕಳೆದ ಶುಕ್ರವಾದ (ಆ.15) ಬೆಂಕಿ ಕಾಯಿಸಿಕೊಳ್ಳಲೆಂದು ಕೃತಕ ಒಲೆ ಇಡಲಾಗಿತ್ತು. ಈ ವೇಳೆ ಸಮೀಪದಲ್ಲಿ ಆಟವಾಡುತ್ತಿದ್ದ 4 ವರ್ಷದ ಅಗಸ್ತ್ಯ ಎಂಬ ಬಾಲಕ ಬಣ್ಣಕ್ಕೆ ಬಳಸುವ ಥಿನ್ನರ್ ಬಾಟಲಿಯನ್ನು ಅಚಾನಕ್ಕಾಗಿ ಕೆಡವಿದ್ದಾನೆ. ಈ ವೇಳೆ ಥಿನ್ನರ್‌ಗೆ ವೇಗದಲ್ಲಿ ಬೆಂಕಿ ತಗುಲಿದ್ದು ಬೆಂಕಿಯ ಕೆನ್ನಾಲಿಗೆಗೆ ಬಾಲಕನ ದೇಹ ಭಾಗಶಃ ಸುಟ್ಟು ಹೋಗಿತ್ತು. ಮಗನನ್ನು ಕಾಪಾಡಲು ಹೋಗಿದ್ದ ತಂದೆ ಚಂದ್ರಕಾಂತನಿಗೂ ಸಹ ಗಂಭೀರವಾದ ಸುಟ್ಟ ಗಾಯಗಳಾಗಿದ್ದವು. ಕೂಡಲೆ ಮನೆಯವರು ತಂದೆ, ಮಗ ಇಬ್ಬರನ್ನೂ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ಅಷ್ಟರಲ್ಲಾಗಲೇ ಬಾಲಕ ಅಗಸ್ತ್ಯ ಮೃತಪಟ್ಟಿದ್ದ.

ಇನ್ನೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ಚಂದ್ರಕಾಂತ್ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೀಗ ತಂದೆ, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Related Articles

Leave a Reply

Your email address will not be published. Required fields are marked *