ಮರಗಳ ಅಕ್ರಮ ತೆರವು ಗೃಹ ಸಚಿವರಿಗೆ ದೂರು ನೀಡಿದ ತಿಮ್ಮಕ್ಕ!
DAKHANI

POWER CITYNEWS:BENGALURU/ಬೆಂಗಳೂರು: ತಾವು ನೆಟ್ಟಿದ್ದರು ಎನ್ನಲಾದ ಇನ್ನೂರಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ತೆರವು ಮಾಡಿದ್ದಾರೆಂದು ಆರೋಪಿಸಿ ತಹಸಿಲ್ದಾರ್ ವಿರುದ್ಧ ಗೃಹಸಚಿವ ಜಿ ಪರಮೇಶ್ವರ್ (G Parameshwar) ಅವರಿಗೆ ಸಾಲು ಮರದ ತಿಮ್ಮಕ salumarad timmakka) ದೂರು ನೀಡಿದ್ದಾರೆ.
ಹಾಸನದ, ಬೇಲೂರು ತಾಲೂಕು ಕಚೇರಿ ಹಿಂಭಾಗದಲ್ಲಿ ಸಾಲು ಮರದ ತಿಮ್ಮಕ್ಕ ನೆಟ್ಟಿದ್ದ ಮರಗಳನ್ನು ಕರಿ ಪ ಮಾಡಲಾಗಿದೆ. ಸುಮಾರು ಇನ್ನೂರಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ತೆರವು ಮಾಡಿದ್ದಾರೆ ತ ಎಕು ತಹಶೀಲ್ದಾರ್ (Belur Tahsildar) ಶ್ರೀಧರ್ ಕಂಕನವಾಡಿ ವಿರುದ್ಧ ಆರೋಪ ಕೇಳಿಬಂದಿದೆ. ಈ ಬಗ್ಗೆ ತಹಶಿಲ್ದಾರ ವಿರುದ್ಧ ಗೃಹ ಸಚಿವರಿಗೆ ಸಾಲು ಮರದ ತಿಮ್ಮಕ್ಕ ದೂರು ಕೊಟ್ಟಿದ್ದಾರೆ.ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಅವರ ಪರಿಸರ ಪ್ರೇಮವನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವರು ರಸ್ತೆ ಬದಿಯಲ್ಲಿ ನೂರಾರು ಮರಗಳನ್ನು ನೆಟ್ಟು, ಅವುಗಳಿಗೆ ನೀರುಣಿಸಿ ಪೋಷಿಸಿ ವೃಕ್ಷಮಾತೆಯೆಂದೇ ಖ್ಯಾತಿಗಳಿಸಿದ್ದರು. ಮಕ್ಕಳು ಇಲ್ಲವೆನ್ನುವ ಕಾರಣಕ್ಕೆ ರಸ್ತೆ ಬದಿಯ ಆಲದ ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಬೆಳೆಸಿ, ಪೋಷಿಸಿ ಪರಿಸರ ಉಳಿಸಿ ಎಂದು ಲೋಕಕ್ಕೆ ಸಾರಿದ್ದಾರೆ.