BREAKING NEWSCITY CRIME NEWSDHARWADHubballiPolicePolitical newsProtest

ಸಿ ಎಂ,ಡಿಸಿಎಂ ಗೆ ಅವಹೇಳನ ಆರ್ ಅಶೋಕ ಸೇರಿದಂತೆ ಹಲವರ ವಿರುದ್ಧ ದೂರು!

Protest against bjp !

POWER CITYNEWS : HUBBALLI

ಹುಬ್ಬಳ್ಳಿ

ವಿರೋಧ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿಯ ಶಹರ ಪೊಲಿಸ್ ಠಾಣೆ ಎದುರು ರೌಡಿ ಶೀಟರ್ ಗೆ ಬಿಜೆಪಿ ನಾಯಕರು ಬೆಂಬಲಿಸುತ್ತ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿ ಪ್ರತಿಭಟಿಸಿ ಆರ್ ಅಶೋಕ ,ಶಾಸಕ ಮಹೇಶ್ ಟೆಂಗಿನಕಾಯಿ,ಅರವಿಂದ ಬೆಲ್ಲದ್, ಲಿಂಗರಾಜ್ ಪಾಟೀಲ್, ಪ್ರದೀಪ್ ಶೆಟ್ಟರ್ ಸೇರಿದಂತೆ ಬಿಜೆಪಿಯ ಮಹೀಳಾ ಸದಸ್ಯರ ವಿರುದ್ಧ ದೂರು ನೀಡಿದರು.

ಇ ವೇಳೆ ಕಾಂಗ್ರೆಸ್‌ ಮುಖಂಡ ಸದಾನಂದ ಡಂಗನವರ ಮಾತನಾಡಿ ವಿರೋಧ ಪಕ್ಷದ ಜವಾಬ್ದಾರಿಯುತ ನಾಯಕರಾದ ಆರ್ ಅಶೋಕವರು ಹುಬ್ಬಳ್ಳಿಯ ಶಹರ ಪೊಲಿಸ್ ಠಾಣೆಯ ಎದುರು ಎಲ್ಲ ಬಿಜೆಪಿ ನಾಯಕರೊಂದಿಗೆ ಸಲ್ಲದ ಗದ್ದಲ ಹೂಡಿ ಸ್ಥಳೀಯ ಬಡ ವ್ಯಾಪರಸ್ಥರ ನಿಜ ಜೀವನಕ್ಕೆ ಅಡ್ಡಿ ಪಡಿಸಿದ್ದು ಭಯದ ವಾತಾವರಣ ನಿರ್ಮಿಸಿದ್ದ ಖಂಡನೀಯ ಹೀಗಾಗಿ ಕಾಂಗ್ರೆಸ್ ಘಟಕದ ವತಿಯಿಂದ ಬಿಜೆಪಿ ವಿರುಧ್ಧ ದೂರು ನೀಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಪ್ ಹಳ್ಳೂರು ಮಾತನಾಡಿ ಶ್ರೀಕಾಂತ ಪೂಜಾರಿ ಮೇಲೆ ಈಗಾಗಲೇ ಹದಿನೈದರಿಂದ-ಹದಿನೇಳು ಕ್ರಿಮಿನಲ್ ಕೇಸ್ ಗಳಿವೆ ಅದನ್ನ ಗಮನಿಸಿದೆ ಆದರೂ ಸಹ ಬಿಜೆಪಿಯ ಪ್ರಮುಖ ನಾಯಕರು,ಶಾಸಕರು ಸೇರಿಕೊಂಡು ಸಾರ್ವಜನಿಕ ಶಾಂತಿ ಭಂಗ ಮಾಡಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ ಮಾನ್ಯ ಮುಖ್ಯಮಂತ್ರಿ ಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು ಹಾಗೂ ಸಿದ್ಧರಾಮಯ್ಯ ನವರನ್ನ “ಸಿದ್ಧಮುಲ್ಲಾ” ಎಂದು ಕರೆದು ಅಪಹಾಸ್ಯ ಮಾಡಿದ್ದನ್ನು ಇಡೀ ರಾಜ್ಯ ಕಾಂಗ್ರೆಸ್ ಘಟಕ ಖಂಡಿಸುತ್ತದೆ ಎಂದರು. ಕಳೆದ ಬಾರಿ 40% ಪರ್ಸಂಟೇಜ್ ಬಿಜೆಪಿ ಸರ್ಕಾರವಿದ್ದುದನ್ನ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜನ ಬದಲಾಯಿಸಿದ್ದಾರೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಭಿವೃದ್ದಿ ಪರ ಮುನ್ನುಗ್ಗುತ್ತಿದೆ. ಇದನ್ನು ಸಹಿಸದ ಬಿಜೆಪಿ ಸಾಮರಸ್ಯದ ಜನಜೀವನದಲ್ಲಿ ಕೊಮು ಗಲಭೆ ದಳ್ಳೂರಿ ಎಬ್ಬಿಸುವುದಕ್ಕೆ ಹುನ್ನಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನಮ್ಮ ಜೊತೆಗೂ ರಾಮ ಭಕ್ತರಿದ್ದಾರೆ ಅವರು ಕೂಡ ಹಿಂದೂಗಳು ಎನ್ನುವುದನ್ನ ಬಿಜೆಪಿ ಅರಿತು ಕೊಳ್ಳ ಬೆಕಿದೆ. ಅಷ್ಟಕ್ಕೂ ಬಿಜೆಪಿ ಸರ್ಕಾರದ ಸಮಯದಲ್ಲಿ ರೈತರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಇದುವರೆಗೂ ಹುತಾತ್ಮ ರೈತರ ಕುಟುಂಬಗಳಿಗೆ ಬಿಜೆಪಿ ಪರಿಹಾರ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೆ ವೇಳೆಗೆ ದಲಿತ ಮುಖಂಡ ಗುರುನಾಥ ಉಳ್ಳಿಕಾಶಿ ಪ್ರತಿಭಟನೆಗೆ ಸಾಥ್ ನೀಡಿದ್ದು. ಆರ್ ಅಶೋಕ ಅವರು ನಿನ್ನೆ ಶಹರ ಪೊಲಿಸ್ ಠಾಣೆ ಎದುರು ಸೇರಿಕೊಂಡು ಕಾನೂನು ಬಾಹಿರವಾಗಿ ಆರೋಪಿಯ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ಸಂವಿಧಾನ ಹಾಗೂ ಕಾನೂನಾತ್ಮಕವಾಗಿ ವಿರೋಧ ವಿದ್ದರು ಒತ್ತಾಯಿಸಿದ್ದು ಮೂರ್ಖತನ ಮಾಡಿದೆ.
ಈಗಾಗಲೇ ಶ್ರಿಕಾಂತ ಪೂಜಾರಿ ಮೇಲೆ ಕೆಲವೊಂದು ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪೊಲಿಸ್ ಇಲಾಖೆಯು ಅಪರಾಧ ಪಟ್ಟಿ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ನಿನ್ನೆ ನಡೆದ ಬಿಜೆಪಿ ಪ್ರತಿಭಟನಾಕಾರು ಒಂಬತ್ತನೆ ತಾರಿಖಿನೊಳಗೆ ಬಿಡುಗಡೆ ಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಪೊಲಿಸ್ ಇಲಾಖೆಗೆ ನೀಡುವ ಎಚ್ಚರಿಕೆಗಳನ್ನು ದಲಿತ ಸಂಘಟನೆಗಳು ಖಂಡಿಸುತ್ತವೆ ಒಂದುವೇಳೆ ಬಿಜೆಪಿ ಇಂತಹ ಉದ್ಧಟತನೆ ಮೆರೆದರೆ ದಲಿತ ಸಂಘಟನೆಗಳು ಕೂಡ ಬಿಜೆಪಿ ವಿರುದ್ಧ ಪ್ರತಿಭಟನೆಯ ಹಾದಿ ತುಳಿಯಬೆಕಾಗುತ್ತದೆ ಎಂದು ಬಿಜೆಪಿಗೆ ಎಚ್ಚರಿಸಿದರು.
ಇದೆ ವೇಳೆಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ ಹಾಗೂ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಅವರಿಂದ ಬಿಜೆಪಿ ನಾಯಕರ ವಿರುಧ್ಧ ಪ್ರತ್ಯೇಕ ದೂರು ದಾಖಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button