ಅತ್ಯಾಚಾರ ಆರೋಪ ಕಾನ್ ಸ್ಟೇಬಲ್”ನಾಯಕ್”ಸಹಿತ ಇಬ್ಬರ ಬಂಧನ…!
POWER CTNEWS!

POWWER CITY NEWS :MANGALURU/ಕಾನೂನು ರಕ್ಷಕನಾಗಬೇಕಿದ್ದ ಪೊಲೀಸ್ ಸಿಬ್ಬಂದಿಯೊರ್ವ(police) ಅತ್ಯಾಚಾರ ಆರೋಪದಡಿ ಬಂದಿತನಾಗಿರುವ(arrest) ಘಟನೆ ವರದಿಯಾಗಿದೆ. ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಕಂಕನಾಡಿ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಕಾವೂರು(kavoor) ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಚಂದ್ರ ನಾಯಕ್ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಈತನಿಗೆ ಸಹಕರಿಸಿದ ಎನ್ನುವ ಆರೋಪದಲ್ಲಿ ಸಂತ್ರಸ್ತೆಯ ಪತಿಯನ್ನೂ ಸಹ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಅತ್ಯಾಚಾರದ(attempt) ಬಗ್ಗೆ ಕಾನ್‌ಸ್ಟೇಬಲ್ ಚಂದ್ರ ನಾಯಕ್(chandranayak) ವಿರುದ್ಧ ಮಹಿಳೆಯೊಬ್ಬರು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ(commissioner) ಅವರಿಗೆ ದೂರು ನೀಡಿದ್ದರು. ಅದರಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಆರೋಪಿಗಳಾದ ಪೊಲೀಸ್ ಪೇದೆ ಚಂದ್ರ ನಾಯಕ್ ಮತ್ತು ಸಂತ್ರಸ್ತೆಯ ಪತಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.