armyHAASANhasanKalghatagiPolitical newsRainsoldiersTechರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ದೈತ್ಯಾಕಾರದ ಒಂಟಿಸಲಗ ಮಾಡಿದ್ದೇನು?

POWER CITYNEWS:HASAN/ಹಾಸನ: ಒಂಟಿ ಸಲಗವೊಂದು (Elephant) ರಸ್ತೆಗೆ ಅಡ್ಡಲಾಗಿ ಮರ ಬೀಳಿಸಿ ವಾಹನ ಸವಾರರು ಪರದಾಡುವಂತೆ ಮಾಡಿದ ಘಟನೆ ಸಕಲೇಶಪುರದ (Sakleshpura) ಹಳ್ಳಿಬೈಲು ಗ್ರಾಮದ ಬಳಿ ನಡೆದಿದೆ.

ಗುರುವಾರ ರಾತ್ರಿ, ಗ್ರಾಮದ ಬಳಿ ದೈತ್ಯಾಕಾರದ ಒಂಟಿಸಲಗ ಬೈನೆ (TREE)ಮರವನ್ನು ನೆಲಕ್ಕುರುಳಿಸಿ ಆರಾಮಾಗಿ ತಿನ್ನುತ್ತಾ ನಿಂತಿತ್ತು. ಇದರಿಂದ ಕೆಲಕಾಲ ಹಲವಾರು ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದವು. ಕೆಲಕಾಲ ವಾಹನ ಸವಾರರು ಇದರಿಂದ ಪರದಾಡಿದ್ದಾರೆ. ಬಳಿಕ ವಿಡಿಯೋ ಮಾಡಿ ಅರಣ್ಯ(forest) ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವಂತೆ ಚಾಲಕರು ಒತ್ತಾಯಿಸಿದ್ದರು.ಸ್ಥಳಕ್ಕೆ ಇಟಿಎಫ್ (etf)ಸಿಬ್ಬಂದಿ ಬಂದು ಪಟಾಕಿ ಸಿಡಿಸಿ ಸಲಗವನ್ನು ಕಾಡಿಗೆ ಓಡಿಸಿದ್ದಾರೆ. ಬಳಿಕ ಸುರಿಯುತ್ತಿರುವ ಮಳೆಯಲ್ಲಿಯೇ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವು ಮಾಡಿ, ವಾಹನ ಸಂಚಾರಕ್ಕೆ(traffic) ಅನುವು ಮಾಡಿಕೊಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *