ಸ್ಥಳೀಯ ಸುದ್ದಿ
ಉಚಿತ ನೇತ್ರ ಚಿಕಿತ್ಸಾ ಶಿಬಿರಕ್ಕೆ ಶ್ರೀಮತಿ ಶಿವಲೀಲಾ ಕುಲಕರ್ಣಿ ಚಾಲನೆ

ಧಾರವಾಡ
ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರಕ್ಕೆ ಮಾನ್ಯ ಶಾಸಕರಾದ ಶ್ರೀ ವಿನಯ ಕುಲಕರ್ಣಿ ಅವರ ಪತ್ನಿ ಶ್ರೀಮತಿ ಶಿವಲೀಲಾ ಕುಲಕರ್ಣಿ ಅವರು ಚಾಲನೆ ನೀಡಿದ್ರು.

ಶ್ರೀ ಶೀಗಿ ಬಸವೇಶ್ವರ ಟ್ರಸ್ಟ್ ಕಮೀಟಿ ಹಾಗೂ ಡಾ. ಎಂ.ಎಂ.ಜೋಶಿ ಆಸ್ಪತ್ರೆಯ ಸಹೋಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಗ್ರಾಮಸ್ಥರು ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿದ್ರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅವರು, ಕಣ್ಣು ಅತೀ ಸೂಕ್ಷ್ಮವಾಗಿದ್ದು, ವೈದ್ಯರ ಸಲಹೆಯಂತೆ ಕಣ್ಣಿನ ಆರೈಕೆಗೆ ಅತಿ ಹೆಚ್ಚಿನ ಕಾಳಜಿವಹಿಸಿಕೊಂಡು, ಆರೋಗ್ಯದ ಕಡೆ ಗಮನ ಕೊಡಿ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಅಧ್ಯಕ್ಷತೆಯನ್ನು ತಡಕೋಡ ಗ್ರಾಮದ ಹಿರಿಯರಾದ ಭೀಮಪ್ಪ ಕಸಾಯಿ ವಹಿಸಿದ್ದರು.
ಧಾರವಾಡ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ್ ಶಿವಳ್ಳಿ , ಮಡಿವಾಳಪ್ಪ ಉಳವಣ್ಣವರ , ಫಕ್ಕಿರ ಸಬರದ ಹಾಗೂ ಸಚಿನ್ ಅಸುಂಡಿ ಉಪಸ್ಥಿತರಿದ್ದರು