ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಕುಂದಗೋಳ ಶಾಸಕರಿಗೆ ಶಿಕ್ಷಕರಿಂದ ಸನ್ಮಾನ!

Power city news ಹುಬ್ಬಳ್ಳಿ:

ಕುಂದಗೋಳ: ಕುಂದಗೋಳ ವಿಧಾನಸಭಾ ಮತಕ್ಷೇತ್ರದ ನೂತನ ಶಾಸಕ ಎಮ್.ಆರ್.ಪಾಟೀಲ್ ಅವರನ್ನು ಕುಂದಗೋಳ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಮುಂದಿನ ಐದು ವರ್ಷ ಸಮರ್ಥವಾಗಿ ಆಡಳಿತ ನಡೆಸುವಂತೆ ಶುಭ ಹಾರೈಸಲಾಯಿತು. ಬಳಿಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡಿ, ಕ್ಷೇತ್ರದ ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲೆ-ಕಾಲೇಜುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಐ.ಆರ್.ಕೊಡ್ಲಿ, ಸಂಘಟನಾ ಕಾರ್ಯದರ್ಶಿ ಎಲ್.ಎ.ನದಾಫ್, ಎಮ್.ಹೆಚ್.ರಟ್ಟಿಗೇರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಮ್.ಎಮ್.ಘೋಡಕೆ, ಎಸ್.ಬಿ
ಕೋರಿ,‌ ಬಿ.ಹೆಚ್.ಪಾಟೀಲ್, ಎಸ್.ಎನ್.ಸೋಮರಡ್ಡಿ, ಸಿ.ವಾಯ್. ಹೊಸಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button