ಕ್ರಿಕೆಟ್ ಪಂದ್ಯ ಹಾಗೂ ಮಿಷನ್ ಆದಿತ್ಯ ಯಶಸ್ವಿಗೆ : ಪ್ರಾರ್ಥಿಸಿದ ಕರವೇ!

POWERCITY NEWS:
ಹುಬ್ಬಳ್ಳಿ: ಕ್ರಿಕೆಟ್ ಆಟ ನಿಜಕ್ಕೂ ಎಲ್ಲರಲ್ಲೂ ಒಂದು ಉತ್ಸಾಹ ಮನರಂಜನೆ ನೀಡುವ ಆಟ. ಅದರಲ್ಲೂ ಭಾರತ, ಪಾಕಿಸ್ತಾನ ಆಟ ಅಂದ್ರೆ ಅದೊಂದು ದೇಶ ದೇಶಗಳ ನಡುವೆ ಪ್ರತಿಷ್ಠೆಯ ಪ್ರಶ್ನೆಯನ್ನು ತಂದೊಡ್ಡುವ ಸ್ಪರ್ಧೆ. ಈ ನಿಟ್ಟಿನಲ್ಲಿ ಭಾರತ, ಪಾಕಿಸ್ತಾನ್ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿ ಎಂಬುವಂತಹ ಸದುದ್ದೇಶದಿಂದ ಹುಬ್ಬಳ್ಳಿಯಲ್ಲಿ ಪೂಜೆ ಪುನಸ್ಕಾರ ಜೋರಾಗಿಯೇ ನಡೆದಿದೆ.

ಇಂದು ನಡೆಯಲಿರುವ ಭಾರತ ಕ್ರಿಕೇಟ್ ತಂಡದ ಗೆಲುವಿಗಾಗಿ ಹುಬ್ಬಳ್ಳಿಯ ಗಣೇಶಪೇಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಸಾಂಪ್ರದಾಯಿಕ ಎದುರಾಳಿ ಪಾಕ್ ಎದುರು ಭಾರತ ತಂಡದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯಂಜುನಾಥ ಲೂತಿಮಠ ಅವರಿಂದ ಹುಬ್ಬಳ್ಳಿಯ ಶ್ರೀ ಆಂಜನೇಯ ದೇವರಿಗೆ ಪೂಜೆ ನೆರವೇರಿಸಿದ್ದು, ಭಾರತ ಕ್ರಿಕೆಟ್ ಟೀಮ್ ಸದಸ್ಯರ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಿದ ಕ್ರೀಡಾಭಿಮಾನಿಗಳು, ಇಸ್ರೋದ ಮಿಷನ್ ಆದಿತ್ಯ ಕೂಡ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
