ಸ್ಥಳೀಯ ಸುದ್ದಿ

ದುಬೈನಲ್ಲಿ ಭಾರತದ ಬಾವುಟ ಹಾರಿಸಿದ ಹೆಮ್ಮೆಯ ಭಾರತಿಯನಿಗೆ ತವರು ಜಿಲ್ಲೆ ಧಾರವಾಡದಲ್ಲಿ ಸನ್ಮಾನದ ಗೌರವ

ಧಾರವಾಡ

ದೂರದ ದುಬೈನಲ್ಲಿ ನಡೆದ ಹಿರಿಯರ ಕ್ರೀಡಾಕೂಟದ ರನ್ನಿಂಗ್ ವಿಭಾಗದಲ್ಲಿ ಪಾಲ್ಗೊಂಡಿದ್ದ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಶಿವಪ್ಪ ಸಲಕಿ ಅವರು 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಭಾರತದ ಬಾವುಟ ಹಾರಿಸಿದ್ದಾರೆ. ಅಲ್ಲದೇ ದುಬೈನಲ್ಲಿ ಧಾರವಾಡದ ಕೀರ್ತಿ ಹೆಚ್ಚಿಸಿದ್ದಾರೆ.

ಇವರಿಗೆ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ‌ ಕಾಂಗ್ರೆಸ ಮುಖಂಡೆ ಶ್ರೀಮತಿ ಶಿವಲೀಲಾ ‌ವಿನಯ ಕುಲಕರ್ಣಿ ಸನ್ಮಾನಿಸಿ ಗೌರವಿಸಿದ್ರು.‌

ಮರೇವಾಡ ಊರಿನಲ್ಲಿ ಸನ್ಮಾನಿಸಿ ‌ಗೌರವಿಸಿದ ಶಿವಲೀಲಾ ಕುಲಕರ್ಣಿ ಅವರು ಇಂತಹ ಸಾಧನೆ ಮಾಡಿದ ಹಿರಿಯರಾದ ಇವರು ನಮಗೆಲ್ಲಾ ಮಾದರಿ ಎಂದರು.

ದುಬೈನಲ್ಲಿ ಜುಲೈ.31 ರಿಂದ ಹಿರಿಯರ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಈ ಕ್ರೀಡಾಕೂಟದಲ್ಲಿ ಮರೇವಾಡ ಗ್ರಾಮದ ಶಿವಪ್ಪ ಸಲಕಿ ಕೂಡ ಪಾಲ್ಗೊಂಡಿದ್ದರು. ಶಿವಪ್ಪ ಚಿಕ್ಕವಯಸ್ಸಿನಿಂದಲೇ ಕ್ರೀಡಾಕೂಟದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದರು. 76 ವರ್ಷವಾದರೂ ಅವರಲ್ಲಿ ಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ದೇಶ, ವಿದೇಶಗಳಲ್ಲಿ ನಡೆದ ರನ್ನಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪದಕಗಳಿಗೆ ಮುತ್ತಿಕ್ಕಿದ್ದಾರೆ.

ಇದೀಗ ದುಬೈನಲ್ಲಿ ನಡೆದ ರನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸಿದ್ದ ಅವರಿಗೆ ಹಣಕಾಸಿನ ತೊಂದರೆಯಾಗಿತ್ತು. ಈ ಬಗ್ಗೆ ವಿಸ್ತೃತ ವರದಿಯೊಂದನ್ನು ಪ್ರಕಟ ಮಾಡಿತ್ತು. ಹೀಗಾಗಿ ಶಿವಪ್ಪ ಸಲಕಿ ಅವರಿಗೆ ಅನೇಕರು ಹಣಕಾಸಿನ ನೆರವು ಮಾಡಿದ್ದರು. ಅದೇ ಹಣದಿಂದ ದುಬೈಗೆ ಹಾರಿದ್ದ ಶಿವಪ್ಪ, ದುಬೈನಲ್ಲಿ ನಡೆದ 800 ಮೀಟರ್ ರನ್ನಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. 76ರ ಇಳಿ ವಯಸ್ಸಿನಲ್ಲೂ ಶಿವಪ್ಪ ವೇಗವಾಗಿ ಓಡಬಲ್ಲರು, ಯೋಗಾಸನ ಮಾಡಬಲ್ಲರು. ಇಂತ ವ್ಯಕ್ತಿ ಇದೀಗ ದೂರದ ದುಬೈನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button