ಸ್ಥಳೀಯ ಸುದ್ದಿ

ಬೆಳ್ಳಂಬೆಳ್ಳಿಗ್ಗೆ ಮೇಯರ್ ರೌಂಡ್ಸ- ಪೌರ ಕಾರ್ಮಿಕರಿಗೆ ಕೊಡುವ ಕಳಪೆ ಗುಣಮಟ್ಟದ ಆಹಾರ ತಯಾರಿಕೆ ಘಟಕಕ್ಕೆ ಭೇಟಿ

ಧಾರವಾಡ

ಪೌರ ಕಾರ್ಮಿಕರಿಗೆ ನೀಡುತ್ತಿರುವ ಬೆಳಗಿನ ಉಪಹಾರದ ಗುಣಮಟ್ಟದ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ, ಇಂದು ಬೆಳಿಗ್ಗೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು, ಹುಬ್ಬಳ್ಳಿಯಲ್ಲಿರುವ ಆಹಾರ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನಾ ನಡೆಸಿದ್ರು.

ಈ ಸಂದರ್ಭದಲ್ಲಿ ಮೊಟ್ಟ ಮೊದಲಿಗೆ ಪಾಲಿಕೆಯ ಪರವಾನಿಗೆ ಪತ್ರವನ್ನು ಪಡೆಯದೇ ಆಹಾರ ಸರಬರಾಜು ಮಾಡುತ್ತಿರುವ ಬಗ್ಗೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಸೂಕ್ತವಲ್ಲದ ಆಹಾರ ತಯಾರಿಕಾ ಘಟಕವನ್ನು ನೋಡಿ ಅಸಮಾಧಾನ ವ್ಯಕ್ತ ಪಡಿಸಿದರು. ಆಹಾರ ತಯಾರಿಕೆಗೆ ಬಳಸುವ ಪದಾರ್ಥಗಳ ಗುಣಮಟ್ಟ, ತಯಾರಿಸುವ ಮುನ್ನ ಕೈಗೊಳ್ಳಬೇಕಾದ ಸ್ವಚ್ಛತಾ ಕ್ರಮಗಳು, ಕಾರ್ಮಿಕರ ನೈರ್ಮಲ್ಯತೆ, ಹಾಗೂ ಇನ್ನೂ ಅನೇಕ ವಿಷಯಗಳ ಅನುಸಾರ ತಯಾರಿಕಾ ಘಟಕವನ್ನು ಬಳಸದೆ ಇರುವ ಬಗ್ಗೆ ದೂರನ್ನು ವ್ಯಕ್ತಪಡಿಸಿದರು.

ಶೀಘ್ರದಲ್ಲಿ ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಪಾಲಿಕೆಯ ಅಧಿಕಾರಿಗಳಿಗೆ ಆದೇಶಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಶ್ರೀ ವಿಜಯಾನಂದ ಶೆಟ್ಟಿ ರವರು, ಶ್ರೀ ರಾಜಣ್ಣ ಕೊರವಿ ರವರು, ಶ್ರೀ ಉಮೇಶಗೌಡ ಕೌಜಗೇರಿ ರವರು, ಪಾಲಿಕೆಯ ಅಧಿಕಾರಿಗಳಾದ ಶ್ರೀ ಫಕ್ಕಿರಪ್ಪಾ ಇಂಗಳಗಿ ರವರು, ಶ್ರೀ ಸಂತೋಷ ಯರಂಗಳಿ ರವರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button