ಸ್ಥಳೀಯ ಸುದ್ದಿ

ರಾಜಕೀಯ ಹಾಗೂ ಸಾಮಾಜಿಕ‌ ಕ್ಷೇತ್ರದ ಸಾಧನೆಗೆ ವಿಶೇಷ ಸನ್ಮಾನ

ಧಾರವಾಡ

ವಿದ್ಯಾರ್ಥಿ ಜೀವನ ಅತಿ ಅಮೂಲ್ಯವಾದದ್ದು, ಕಲಿತಿರುವ ಕಾಲೇಜಿಗೆ ವಾಪಸ್ ಮರಳಿ ಏನನ್ನಾದ್ರೂ ಕೊಡಬೇಕು ಎಂದ್ರೆ ಅದು ಸಾಧನೆ ಮೂಲಕ ಮಾತ್ರ ಸಾಧ್ಯ .‌ಹೀಗಾಗಿ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡು ಜೀವನದಲ್ಲಿ ಅತ್ಯುನ್ನತ ಸ್ಥಾನ ಗಳಿಸಿಕೊಳ್ಳಬೇಕೆಂದು ಕಾಂಗ್ರೆಸ್ ಮುಂಖಡೆ ಹಾಗೂ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಹೇಳಿದ್ರು.

ಧಾರವಾಡದ ಕಿಟೆಲ್ ಕಲಾ ಮಹಾವಿದ್ಯಾಲಯದಲ್ಲಿ ಜುಲೈ 31 ರಿಂದ ಆಗಸ್ಟ್ 5 ರವರೆಗೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ *fun week ಹಾಗೂ ಕಿಟೆಲ್ ಫೆಸ್ಟ್” ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ್ರು.

ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರತಿ ನಿತ್ಯವೂ ಒಬ್ಬೊಬ್ಬ ಸಂಪನ್ಮೂಲ ವ್ಯಕ್ತಿಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ವಿಭಿನ್ನತೆಯ ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ಷೇತ್ರ, ಆರೋಗ್ಯ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ರಾಜಕೀಯ ಕ್ಷೇತ್ರದ ಸಾಧಕರನ್ನು ಗುರುತಿಸಲಾಗಿದೆ. ಇಂತಹ ಸಾಧಕರ ಸಾಲಿನಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಿದ್ದರಾಮಯ್ಯಾ ಅವರು ಈ ಹಿಂದೆ ‌ಬಾಲವಿಕಾಸ ಅಕ್ಯಾಡೆಮಿಯಲ್ಲಿ ವೈಶುದೀಪ ಫೌಂಡೇಶನನಿಂದ ಮಾಡಿದ ಕೆಲಸ ಗುರುತಿಸಿ ಸನ್ಮಾನಿಸಿದ್ದರು. ಈಗ ಅದೇ ರೀತಿಯ ಗೌರವ ಸಿಕ್ಕಿದೆ. ಈ ಗೌರವಕ್ಕೆ ಯಾವತ್ತಿಗೂ ಚಿರಋಣಿ ಎಂದರು.

ಈ ಸಂದರ್ಭದಲ್ಲಿ ಕಿಟೆಲ್ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯೆ‌ ಶ್ರೀಮತಿ ರೇಖಾ ಜೋಗುಳ, ಕಾಲೇಜಿನ ಶಿಸ್ತಿನ ಬಗ್ಗೆ ಹಾಗೂ ವಿದ್ಯಾರ್ಥಿಗಳು ಗುಣಮಟ್ಟದ ಜೀವನಶೈಲಿ ಯಾವ ರೀತಿ ರೂಢಿಸಿಕೊಂಡು ಭವಿಷ್ಯದ ಉತ್ತಮ ನಾಗರಿಕರಾಗಬೇಕೆಂದು ಪ್ರಾಸ್ತಾವಿಕವಾಗಿ ಮಾತನಾಡಿದ್ರು.

Related Articles

Leave a Reply

Your email address will not be published. Required fields are marked *

Back to top button