ರಾಜ್ಯಸ್ಥಳೀಯ ಸುದ್ದಿ

ವಿದ್ಯುತ್ ಶಾಕ್ ತಗುಲಿ ಬಾಲಕನೋರ್ವನ ಧಾರುಣ ಸಾವು!

Power city news/ಗದಗ: ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಜನತಾ ಪ್ಲಾಟ್ ಬಳಿ
ಆಟ ಆಡುತ್ತಿರುವಾಗ ವಿದ್ಯುತ್ ಶಾಕ್ ತಗುಲಿ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ.

ಪಂಕಜ್ ರಾಮು ಕಲಾಲ್ (12) ಎಂಬಾತ ಸಾವಿಗೀಡಾದ ಬಾಲಕ. 367 ರಾಷ್ಟ್ರೀಯ ಹೆದ್ದಾರಿಯ ಗಜೇಂದ್ರಗಡ ಹಾಗೂ ಯಲಬುರ್ಗಾ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಆಟ ಆಡುತ್ತಿದ್ದ ಈತ ಅಕಸ್ಮಾತ್ ಆಗಿ ಹೆದ್ದಾರಿ ಪಕ್ಕದ ವಿದ್ಯುತ್​ ಕಂಬವನ್ನು ಸ್ಪರ್ಶಿಸಿದ್ದು, ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾನೆ.

ಬಾಲಕ ಕಂಬದಲ್ಲಿನ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button