ಸ್ಥಳೀಯ ಸುದ್ದಿ

ಸಚಿವ ಸಂತೋಷ ಲಾಡ ಕ್ಷೇತ್ರದಲ್ಲಿ ಕಾಂಗ್ರೆಸ ತೆಕ್ಕೆಗೆ ನಿಗದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

ಧಾರವಾಡ

ಕಲಘಟಗಿ ತಾಲೂಕಿನ ನಿಗದಿ ಮತಕ್ಷೇತ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ 11 ಸ್ಥಾನಗಳಿಗಾಗಿ ಚುನಾವಣೆ ನಡೆದಿದ್ದು, 11 ಸ್ಥಾನಗಳಲ್ಲಿಯೂ ಕೈ ಪಕ್ಷ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಪಾರುಪಥ್ಯ ಮೆರೆದಿದೆ.

11 ಸ್ಥಾನಗಳ ಪೈಕಿ, 3 ಮಂದಿ ಮಹಿಳೆಯರು( ಕಾಂಗ್ರೆಸ್ ಬೆಂಬಲಿತರು) ಅವಿರೋಧವಾಗಿ ಆಯ್ಕೆಯಾದ್ರೆ, ಉಳಿದ 8 ಸ್ಥಾನಗಳ ಪೈಕಿ 16 ಮಂದಿ ಚುನಾವಣೆಗೆ ನಿಂತಿದ್ದರು. ಇದರಲ್ಲಿ 8 ಮಂದಿಯೂ ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾಗಿದ್ದಾರೆ.

ಅ- ವರ್ಗ 1 ಸ್ಥಾನಕ್ಕೆ – 2 ನಾಮಪತ್ರ ಸಲ್ಲಿಸಿದ್ದರೆ, ಬ – ವರ್ಗ 1 ಸ್ಥಾನಕ್ಕೆ – 2 ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ sc ವರ್ಗ1 ಕ್ಕೆ- ಇಬ್ಬರು ನಾಮಪತ್ರ ಸಲ್ಲಿಸಿದ್ರು.

ಈ ಹಿಂದೆ ನಿಗದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ ಬೆಂಬಲಿತ ಪ್ರತಿನಿಧಿಗಳು ಸಮಬಲ ಸಾಧಿಸಿದ್ದರು.‌

ಆದ್ರೆ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸ್ವ ಕ್ಷೇತ್ರದಲ್ಲಿ ಕೈ ಪಕ್ಷದ ಅಭ್ಯರ್ಥಿಯಾಗಿ ‌ಪ್ರಾಥಮಿಕ ಸಂಘಕ್ಕೆ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿ ಗೆಲುವಿನ‌ ನಗೆ‌ ಬೀರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button