ಸ್ಥಳೀಯ ಸುದ್ದಿ

ಸತ್ಯಕ್ಕೆ ಜಯ ಸಿಗುತ್ತೆ ಆದ್ರೆ ತಡವಾಗುತ್ತೆ-ವಿನಯ ಕುಲಕರ್ಣಿ‌ ವಿಶ್ವಾಸ

ಕಿತ್ತೂರು

ಮಾಜಿ ಸಚಿವ ವಿನಯ ಕುಲಕರ್ಣಿ ರಾಜ್ಯದಲ್ಲಿ ಆಗಿರುವ ಪಿಎಸ್ಐ ಹಗರಣದ ಬಗ್ಗೆ ಮತನಾಡಿದ್ದು, ಹಗರಣದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ದೊಡ್ಡ‌ದೊಡ್ಡ ವ್ಯಕ್ತಿಗಳು ಇದಾರೆ.

ಕಿತ್ತೂರಿನಲ್ಲಿ ಮಾತನಾಡಿದ ಮಾಜಿ ಸಚಿವರು ಧಾರವಾಡ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸಿಗುತ್ತಿಲ್ಲಾ ಸರಿಯಾಗಿ. ಹೊಸ ಕಂಪನಿಗಳು ಶುರುವಾಗಿಲ್ಲಾ ಎಂದರು.‌

ಗ್ರಾಮೀಣ ಕ್ಷೇತ್ರಕ್ಕೆ 1700 ಕೋಟಿ ಅನುದಾನ ತಂದಿದ್ದೇವೆ. ಅದರಲ್ಲಿ ಅವ್ಯವಹಾರ ಆಗಿದ್ದರೆ, ಸಿಬಿಐ ತನಿಖೆಗೆ ಹಾಗೂ ಅಮೇರಿಕದ ಎಫಬಿಐ ತನಿಖೆಗೂ ಸಿದ್ದ ಎನ್ನುತ್ತಿರುವ ಹಾಲಿ‌ ಶಾಸಕರು ತನಿಖೆ ಸಿದ್ಧರಾಗಬೇಕು.

ಹಾಗೂ ಕೋಟೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷನ ಪ್ರವೀಣ ಕಮ್ಮಾರ ಕೊಲೆ‌ಕೇಸ ಕೂಡ ಸಿಬಿಐ ತನಿಖೆ ಆಗಿ ಯಾರು ಯಾರು ಶಾಮೀಲಾಗಿದ್ದಾರೆ ಎನ್ನುವುದು ಬಯಲಾಗುತ್ತೆ ಎಂದು ವಾಗ್ದಾಳಿ‌ ನಡೆಸಿದ್ರು.

ಈ ಬಾರಿ‌ನಾನು‌ಕ್ಷೇತ್ರದಿಂದ ಹೊರಗೆ ಇರುವೆ ಆದ್ರೂ ಕೂಡ ಜನರಿಂದ ಉತ್ತಮ ರೆಸ್ಪಾನ್ಸ ಬರ್ತಾ ಇದೆ.

ನನಗೆ ನ್ಯಾಯಾಲಯದ ಮೇಲೆ‌ ವಿಶ್ವಾಸ ಇದೆ . ಸತ್ಯಕ್ಕೆ ತಡವಾಗಿದ್ರೂ ಜಯ ಸಿಗುತ್ತೆ. ಸ್ವಲ್ಪ ವಿಳಂಭವಾಗುತ್ತೆ.

ನಮಗೆ ನಾವೇ ಸ್ಟಾರ್ ಪ್ರಚಾರಕರು. ಕ್ಷೇತ್ರದ ಜನರು ನಾನು ಮಾಡಿರುವ ಅಭಿವೃದ್ಧಿ ‌ಬಗ್ಗೆ ಹೇಳ್ತಾರೆ. ನಾನು ಮಾತನಾಡುವುದಿಲ್ಲಾ ಎಂದರು.

Related Articles

Leave a Reply

Your email address will not be published. Required fields are marked *

Back to top button