ತೀರ್ಪನ್ನು ತೀವ್ರವಾಗಿ ಖಂಡಿಸಿದ ಸಮತಾಸೇನಾ ಕರ್ನಾಟಕ!
dakhani

POWER CITY NEWS : hubballi/ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯ ಪಟಿಯಾಲಿ ಪೊಲೀಸ್ ಠಾಣೆ ಪ್ರದೇಶಕ್ಕೆ ಸಂಬಂಧಿಸಿದ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎನ್ನಲಾದ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರ ಪೀಠವು, ಸಂತ್ರಸ್ತೆಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮದ ದಾರವನ್ನು ಕತ್ತರಿಸಿ ಅದನ್ನು ಎಳೆಯಲು ಪ್ರಯತ್ನಿಸುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಾಗುವುದಿಲ್ಲ. ಇದು ಗಂಭೀರ ಲೈಂಗಿಕ ದೌರ್ಜನ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶಕ್ಕೂ ಕಾರಣವಾಗಿದೆ.

ಪ್ರಕರಣದ ವಿವರ ಎನು?
ಇದು ಕಾಸ್ಗಂಜ್ ಜಿಲ್ಲೆಯ ಪಟಿಯಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದ್ದು ಆರೋಪಿಗಳಾದ ಪವನ್ ಹಾಗೂ ಆಕಾಶ್ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ ಎಂದು ಆರೋಪದ ಪ್ರಕರಣ ದಾಖಲಾಗಿತ್ತು.
ಈ ಸಮಯದಲ್ಲಿ, ಆಕಾಶ್ ಸಂತ್ರಸ್ಥೇಯ ಪೈಜಾಮಾದ ದಾರ ಕತ್ತರಿಸಿ ಎಳೆಯಲು ಯತ್ನಿಸಿದ್ದಾನೆ. ಈ ವೇಳೆ ದಾರಿಹೋಕರು ಬರುತ್ತಿದ್ದಂತೆಯೇ ಅವರು ಅಲ್ಲಿಂದ ಪಲಾಯನಗೊಂಡಿದ್ದರು. ಇಬ್ಬರ ವಿರುದ್ಧ ಅಂದು ಪೊಲೀಸ್ ದೂರು ದಾಖಲಿಸಲಾಗಿತ್ತು.
ಇನ್ನೂ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಂತೆ ಅತ್ಯಾಚಾರ ಯತ್ನ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣವೆಂದು ಪರಿಗಣಿಸಿ ವಿಚಾರಣಾ ನ್ಯಾಯಾಲಯವು ಸಮನ್ಸ್ ಹೊರಡಿಸಲಾಗಿತ್ತು. ಆದರೆ, ಆರೋಪಿಗಳು ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದರು, ದೂರಿನ ಆಧಾರದ ಮೇಲೆ ಪ್ರಕರಣವು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಬರುವುದಿಲ್ಲ ಮತ್ತು ಸೆಕ್ಷನ್ 354 (ಬಿ) ಐಪಿಸಿ ಮತ್ತು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಮಾತ್ರ ಬರಬಹುದು ಎಂದು ವಾದಿಸಿದ್ದರು.

ತೀರ್ಪನ್ನು ತೀವ್ರವಾಗಿ ಖಂಡಿಸಿದ ಸಮತಾಸೇನಾ ಕರ್ನಾಟಕ! ಆದರೆ ಅಲಹಾಬಾದ್ ಹೈಕೋರ್ಟನ ಆದೇಶವು ದೇಶದ ಮಹಿಳಾ ಪ್ರಾಧಾನ್ಯತೆಯನ್ನೇ ಪ್ರಶ್ನಿಸಿದಂತಾಗಿರುವುದಲ್ಲದೆ ಅಸಮಾಧಾನ ಉಂಟುಮಾಡುವಂತಹ ಮತ್ತು ಭಾರತೀಯ ಯುವ ಸಮೂಹದಲ್ಲಿ ತಪ್ಪು ಸಂದೇಶ ರವಾನಿಸುವುದಲ್ಲದೆ, ಮನುವಾದವನ್ನ ಮೂಡಿಸುವಂತಹ ಸಂವಿಧಾನ ವಿರೋಧ, ಮಹಿಳಾ ವಿರೋಧಿಯಾಗಿದ್ದು. ಕೇವಲ ಪುರುಷಪ್ರಧಾನ ತೀರ್ಮಾನದಂತಿದ್ದು ರಾಷ್ರ್ಟೀಯ ಮಹಿಳಾ ಆಯೋಗ ಮತ್ತು ಘನ ಸರ್ವೋಚ್ಛ ನ್ಯಾಯಾಲಯ ತಕ್ಷಣ ಈ ತಿರ್ಪಿನ ವಿರುದ್ಧ ಮಧ್ಯ ಪ್ರವೇಶಿಸುವ ಮೂಲಕ ಇಂತಹ ಗೊಂದಲ ಮತ್ತು ತಪ್ಪು ಭಾವನೆಗಳನ್ನ ಮೂಡಿಸುವ ಆದೇಶಗಳಿಗೆ ಕಡಿವಾಣಹಾಕುವ ಮೂಲಕ ಮಹಿಳಾ ಗೌರವ ಜೊತೆಗೆ ರಕ್ಷಣೆ ನೀಡಲು ನ್ಯಾಯಾಂಗದಿಂದಲೆ ಸಾಧ್ಯವೆಂದು ದೇಶಕ್ಕೆ ಸಾರಲು ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಗುರುನಾಥ ಉಳ್ಳಿಕಾಶಿ ತೀವ್ರ ಆಕ್ಷೇಪ ಮತ್ತು ವಿರೋಧದ ಮೂಲಕ ಆಗ್ರಹಿಸಿದ್ದಾರೆ.