ಸ್ವಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಿಎಮ್!
dakhani

POWER CITY NEWS:HUBBALLI/ಹುಬ್ಬಳ್ಳಿ: ಹನಿಟ್ರ್ಯಾಪ್'(honytrap)ನಂತಹ ವಿಚಾರ ಹೊಸದೇನಲ್ಲ, ವಿರೋಧ ಪಕ್ಷದವರು ಇಂತಹ ವಿಷಯಗಳನ್ನು ಹುಡುಕುತ್ತಲೇ ಇರುತ್ತಾರೆ. ಅವರ ಪ್ರಚೋದನೆಗೆ ಯಾರೂ ಒಳಗಾಗಬಾರದು ಎಂದು ಮಾಜಿ ಸಿಎಂ(XCM) ವೀರಪ್ಪ ಮೋಯ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ವಿರೋಧ ಪಕ್ಷದವರ ವರ್ತನೆ ಸರಿಯಲ್ಲ, ಇದು ಸಭ್ಯತೆಯ ಲಕ್ಷಣವಲ್ಲ ಅವರ ಅಸಭ್ಯತೆಯಿಂದಲೇ ಅಮಾನತ್ತು ಮಾಡಲಾಗಿದೆ. ಅವರ ವರ್ತನೆ ವಿಕೋಪಕ್ಕೆ ಹೋದ ಹಿನ್ನೆಲೆ ವಿರೋಧ ಪಕ್ಷದ ಶಾಸಕರನ್ನ(MLA) ಅಮಾನತ್ತು ಮಾಡಲಾಗಿದೆ ಎಂದರು.
ಸದನದಲ್ಲಿ “ಹನಿಟ್ರ್ಯಾಪ್” ಬಗ್ಗೆ ಚರ್ಚೆಯನ್ನ ಹುಟ್ಟು ಹಾಕಿದ್ದೇ ನಮ್ಮ ಪಕ್ಷದವರು, ನಮ್ಮ ಪಕ್ಷದ ಮಂತ್ರಿಗಳು ಇದನ್ನ ಆಂತರಿಕವಾಗಿ ಚರ್ಚೆ ಮಾಡಬೇಕಿತ್ತು. ಆದ್ರೆ ಬಹಿರಂಗವಾಗಿ ಸದನದಲ್ಲಿ ಆ ಬಗ್ಗೆ ಚರ್ಚೆ ಮಾಡಬಾರದಿತ್ತು. ಇದರಿಂದಾಗಿ ಪಕ್ಷಕ್ಕೆ ಮುಜುಗರ, ಅಭದ್ರತೆ ಹೆಚ್ಚಾಗುತ್ತೆ ಎಂದರು.
ಕಾಂಗ್ರೆಸ್(CONGRESS) ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ವಿಚಾರವಾಗಿ ಮಾತನಾಡಿ, ಪಕ್ಷದಲ್ಲಿ ಪವರ್ ಶೇರಿಂಗ್ ವಿಚಾರ ಚರ್ಚೆಗಳಾಗಬಾರದು. ಇಂತಹ ಚರ್ಚೆಗಳಿಂದ ಸರ್ಕಾರಕ್ಕೆ ಅಭದ್ರತೆ ಕಾಡುವುದು ನಿಶ್ಚಿತ, ವಿರೋಧ ಪಕ್ಷದವರು ಅದನ್ನೇ ಅಸ್ತ್ರವನ್ನಾಗಿ ಬಳಕೆ ಮಾಡುತ್ತಾರೆ. ವಿರೋಧ ಪಕ್ಷದವರಿಗೆ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳುವುದು ಸರಿಯಲ್ಲ ಎಂದರು.
ಪವರ್ ಶೇರಿಂಗ್(powersharing) ವಿಚಾರವಾಗಿ ಮಾತನಾಡಿ, ಈ ಮೊದಲೇ ನಿರ್ಣಯವಾಗಿದೆಯೋ ಗೊತ್ತಿಲ್ಲ, ಆ ಬಗ್ಗೆ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತೆ, ಆದ್ರೆ ಪಕ್ಷದಲ್ಲಿ ಈ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದು ಸೂಕ್ತವಲ್ಲ ಎಂದು ಸ್ವಪಕ್ಷದವರ ನಡೆ ವಿರುದ್ಧವೇ ವೀರಪ್ಪ ಮೋಯ್ಲಿ ಅಸಮಾಧಾನ