ಮಹಿಳೆ ಮತ್ತು ಪುರುಷ ಸಮಾನತೆ ಸಾಧ್ಯವಾದಾಗಲೆ ಸಮೃದ್ಧ ಭಾರತ ನಿರ್ಮಾಣ ಕುಸುಮಾ ಹರಿಪ್ರಸಾದ!
dakhani

POWER CITY NEWS:ಹುಬ್ಬಳ್ಳಿ: ಮಹಿಳೆ ಮತ್ತು ಪುರುಷ ಸಮಾನತೆ ಸಾಧ್ಯವಾದಾಗ ಮಾತ್ರ ಸಮಗ್ರ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬಲ್ಲದು ಎಂದು ನೈಋತ್ಯ ರೈಲ್ವೆ(nwr) ವಲಯದ ಹಣಕಾಸು ಸಲಹೆಗಾರ್ತಿ ಕುಸುಮಾ ಹರಿಪ್ರಸಾದ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಕೇಶ್ವಾಪುರದಲ್ಲಿರುವ ನೈಋತ್ಯ ರೈಲ್ವೆ ಕನ್ನಡ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮೂಲಕ ತೋರಿಸುತ್ತಿದ್ದಾರೆ. ಶಿವಾಜಿಯ ತಾಯಿ ಜೀಜಾಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಕ್ಕ ಮಹಾದೇವಿ, ಕಲ್ಪನಾ ಚಾವ್ಹಾ(KALPANA chavla), ಸುನಿತಾ ವಿಲಿಯಮ್ಸ್(sunitha villiams) ಸೇರಿದಂತೆ ಹಲವು ಮಹಿಳೆಯರು ಇತಿಹಾಸದಲ್ಲಿ ಹೆಸರು ದಾಖಲಿಸಿದ್ದಾರೆ ಎಂದರು. ನೈಋತ್ಯ ರೈಲ್ವೆ ಮಹಿಳಾ ಹಿತರಕ್ಷಣಾ ಸಂಸ್ಥೆಯ(railway human protetcion) ಕಾರ್ಯದರ್ಶಿ ಅನಿತಾ ಶಾಸ್ತ್ರಿ ಮಾತನಾಡಿ, ಮಹಿಳೆ ಎಲ್ಲ ರಂಗದಲ್ಲೂ ಸಾಧನೆ(achievment) ಮಾಡಿದರೂ ಆಕೆಯ ಮೇಲಿನ ಶೋಷಣೆ ನಿಲ್ಲುತ್ತಿಲ್ಲ ಎಂಬುದು ಕಳವಳದ ಸಂಗತಿ. ಕಾನೂನುಗಳ ಅರಿವು ಹೆಣ್ಣುಮಕ್ಕಳಿಗೆ ಇರಬೇಕು ಎಂದರು. ಕೇಂದ್ರೀಯ ರೈಲ್ವೆ ಆಸ್ಪತ್ರೆಯ ಹಿರಿಯ ವಿಭಾಗೀಯ ವೈದ್ಯಾಧಿಕಾರಿ ಡಾ. ತೇಜಸ್ವಿನಿ ಗೌರಿಪುರ ಮಾತನಾಡಿ, ಮಹಿಳೆಯರು ಹಕ್ಕುಗಳನ್ನು ಪಡೆಯಲು ಸಂಘಟನೆ ಬಹಳ ಮುಖ್ಯ. ಎಲ್ಲರೂ ಒಂದಾಗಿ ದೌರ್ಜನ್ಯವನ್ನು ವಿರೋಧಿಸಬೇಕು ಎಂದರು. ನೈಋತ್ಯ ರೈಲ್ವೆ ಕನ್ನಡ ಸಂಘದ ಅಧ್ಯಕ್ಷ ಬಿ.ಎಲ್. ಶಿವಕುಮಾರ, ಪ್ರಧಾನ ಕಾರ್ಯದರ್ಶಿ ಶಂಭುಲಿಂಗ ಬಿರಾದಾರ, ಮೈಲಾರಲಿಂಗ ಕಟ್ಟೂರ, ಮಹಾಂತಪ್ಪ ನಂದೂರ, ಮಹೇಶ ಎ.ಎಸ್., ಸಿ.ಎಂ. ಮುನಿಸ್ವಾಮಿ, ಕಿರಣ ಚಿನ್ನಾ ರಾಠೋಡ, ಜಗದೀಶ ಭಜಂತ್ರಿ, ರಮೇಶ ಚವ್ಹಾಣ, ಆದ ಯ್ಯ ಹಿರೇಮಠ, ಚನ್ನಬಸಪ್ಪ ಚೌಗಲಾ, ಸುರೇಶ ರಾಠೋಡ ಹಾಗೂ ಇತರರು ಇದ್ದರು.