assemblyBELAGAVIBREAKING NEWSJDSPolitical newsVINAYKULKARNIರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಧಾರವಾಢ ಜಿಲ್ಲೆಗೆ ಸಾಹಿತ್ಯ,ಸಂಗೀತ ಹಾಗೂ ಸಾಂಸ್ಕೃತಿಕ ಕೊಡುಗೆ ಅಪಾರ ದಿವ್ಯಪ್ರಭು!

dakhani

POWER CITY NEWS :HUBBALLI/ಧಾರವಾಡ: ಧಾರವಾಡ ಜಿಲ್ಲೆ ಐತಿಹಾಸಿಕ ಜಿಲ್ಲೆಯಾಗಿದೆ. ಧಾರವಾಡ ಕೀರ್ತಿಯನ್ನು ರಾಷ್ಟ್ರೀಯ, ಅಂತರಾಷ್ಟ್ರೀಯಮಟ್ಟಕ್ಕೆ ಎತ್ತರಿಸಿದ ಅನೇಕ ಮಹನೀಯರು ಜಿಲ್ಲೆಯಲ್ಲಿ ಆಗಿ ಹೋಗಿದ್ದಾರೆ. ಕಲೆ, ಚಿತ್ರಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಧಾರವಾಡ ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಮರು ಸೃಷ್ಟಿಸಲು ಎಲ್ಲರ ಸಹಕಾರ, ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.


ನಗರದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಆರು ರಾಷ್ಟ್ರೀಯ ಟ್ರಸ್ಟ್‍ಗಳ ಅಧ್ಯಕ್ಷ ಮತ್ತು ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ಜರಗಿಸಿ, ಮಾತನಾಡಿದರು.
ಡಾ. ಮಲ್ಲಿಕಾರ್ಜುನ ಮನಸೂರ, ಡಾ. ದ.ರಾ.ಬೇಂದ್ರೆ, ಬಸವರಾಜ ರಾಜಗುರು, ಡಿ.ವಿ.ಹಾಲಬಾವಿ, ಡಾ. ಎಂ.ಎಂ. ಕಲಬುರ್ಗಿ ಅವರಂತಹ ಮಹನೀಯರು ಧಾರವಾಡದ ಹೆಸರನ್ನು ಚಿರಾಯು ಆಗಿಸಿದ್ದಾರೆ. ಟ್ರಸ್ಟ್‍ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ಸಮಾಜಕ್ಕೆ ಸಾಹಿತ್ಯ, ಸಂಗೀತ, ಕಲಾ ಕ್ಷೇತ್ರವನ್ನು ವಿಸ್ತರಿಸೋಣ ಎಂದು ಅವರು ಹೇಳಿದರು.
ಪಂಡಿತ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ್, ಸಂತ ಶಿಶುನಾಳ ಶರಿಫರು, ಡಾ. ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಸವಾಯಿ ಗಂದರ್ವರ ಸಂಗೀತೋತ್ಸವದ ಹೆಸರಿನಲ್ಲಿ ಅವಳಿ ನಗರದಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಎಲ್ಲ ಟ್ರಸ್ಟ್‍ಗಳ ಸಹಕಾರದಲ್ಲಿ ಆಯೋಜಿಸೋಣ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಂಗಾಯಣದಿಂದ ಎಲ್ಲ ಟ್ರಸ್ಟ್‍ಗಳ ಸಹಕಾರದಲ್ಲಿ ಮಕ್ಕಳಿಗೆ ಸಾಹಿತ್ಯ, ಸಂಗೀತ, ಕಲೆ ಪೆÇ್ರೀತ್ಸಾಹಿಸುವ ಬೇಸಿಗೆ ಶಿಬಿರ ಮಾಡಲು ರಂಗಾಯಣ ಆಡಳಿತಾಧಿಕಾರಿಗೆ ಕ್ರಿಯಾಯೋಜನೆ ಸಲ್ಲಿಸಲು ಸೂಚಿಸಿ, ರಂಗಾಯಣದ ಕಾರ್ಯ ಚಟುವಟಿಕೆಗಳ ವಿಸ್ತಾರಕ್ಕೆ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ಅನೇಕರು ವ್ಯಕ್ತಪಡಿಸಿದ ಧಾರವಾಡ ಉತ್ಸವ ಆಯೋಜನೆ, ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನ ಪುನರಾರಂಭ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಟ್ರಸ್ಟ್‍ಗಳ ಸಾಹಿತ್ಯ, ಸಂಗೀತ, ಚಿತ್ರಕಲೆಯನ್ನು ವಿಸ್ತರಿಸಬೇಕು ಮತ್ತು ವಿದ್ಯಾರ್ಥಿಗಳು, ಯುವ ಸಮೂಹ ಹೆಚ್ಚು ಭಾಗವಹಿಸುವಂತೆ ಕ್ರಿಯಾಯೋಜನೆ ರೂಪಿಸಬೇಕು. ಸರಕಾರದ ಸಹಾಯಧನದೊಂದಿಗೆ ಸ್ವಂತ ಆದಾಯವನ್ನು ವಿವಿಧ ಶಿಬಿರ, ಪ್ರದರ್ಶನಗಳ ಮೂಲಕ ಸಂಗ್ರಹಿಸಬೇಕು. ಈ ನಿಟ್ಟಿನಲ್ಲಿ ಪ್ರತಿ ಟ್ರಸ್ಟ್‍ದಲ್ಲಿ ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅಧ್ಯಕ್ಷರಿಗೆ ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಸಭೆಯಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಟ್ರಸ್ಟ್ ಸದಸ್ಯರಾದ ಪದ್ಮಶ್ರೀ ಪಂಡಿತ ಎಮ್.ವೆಂಕಟೇಶಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಡಾ.ಡಿ.ವಿ. ಹಾಲಬಾವಿ ಟ್ರಸ್ಟ್ ಸದಸ್ಯ ಡಾ.ಬಿ.ಮಾರುತಿ, ಪಾರ್ವತಿ ಹಾಲಭಾವಿ, ಸದಸ್ಯರಾದ ಶಂಕರ ಕುಂಬಿ, ಬಸವರಾಜ ರಾಜಗುರು ಟ್ರಸ್ಟ್ ಸದಸ್ಯ ನಿಜಗುಣಿ ರಾಜಗುರು, ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ, ಸದಸ್ಯರಾದ ಡಾ. ಜಿ.ಎಂ.ಹೆಗಡೆ, ಡಾ. ಶಶಿಧರ ತೋಡಕರ, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ, ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಟ್ರಸ್ಟ್ ಸದಸ್ಯ ದೀಪಕ ಆಲೂರು ಸೇರಿದಂತೆ ಅನೇಕರು ಮಾತನಾಡಿ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳ ವಿಸ್ತರಿಸಲು ಸಲಹೆ, ಸೂಚನೆಗಳನ್ನು ನೀಡಿದರು.
ಬಸವರಾಜ ರಾಜಗುರು ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟೆ ಅವರು ಸಭೆಯಲ್ಲಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಭೆ ನಿರ್ವಹಿಸಿದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ಬೇಂದ್ರೆ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ವಂದಿಸಿದರು.
ಸಭೆಯಲ್ಲಿ ಭಾರತಿದೇವಿ ರಾಜಗುರು, ನೀಲಮ್ಮ ಕೊಡ್ಲಿ, ಬಾಳಣ್ಣ ಶೀಗಿಹಳ್ಳಿ, ಸುರೇಶ ಹಾಲಭಾವಿ ಸೇರಿದಂತೆ ಎಲ್ಲ ಟ್ರಸ್ಟ್‍ಗಳ ಸದಸ್ಯರು ಭಾಗವಹಿಸಿದ್ದರು.
ಟ್ರಸ್ಟ್‍ಗಳಿಗೆ ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಮಧ್ಯಾಹ್ನ ಡಾ. ಮಲ್ಲಿಕಾರ್ಜುನ ಮನಸೂರ ಟ್ರಸ್ಟ್, ಡಾ.ದ.ರಾ.ಬೇಂದ್ರೆ ಅವರ ಮನೆ ಮತ್ತು ಟ್ರಸ್ಟ್ ಕಚೇರಿ, ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಅವರ ಮನೆ, ಡಾ.ಎಂ.ಎಂ.ಕಲಬುರ್ಗಿ ಅವರ ಮನೆ, ಶ್ರೀ ಬಸವರಾಜ ರಾಜಗುರು ಅವರ ಮನೆ, ಶ್ರೀ. ಡಿ.ವಿ.ಹಾಲಭಾವಿ ಅವರ ಮನೆಗಳಿಗೆ ಹಾಗೂ ಟ್ರಸ್ಟ್ ಕಚೇರಿಗಳಿಗೆ ಖುದ್ದು ಭೇಟಿ ನೀಡಿ, ಕುಟುಂಬ ಸದಸ್ಯರಿಂದ, ಟ್ರಸ್ಟ್‍ಗಳಿಂದ ಮಾಹಿತಿ ಪಡೆದುಕೊಂಡರು.

Related Articles

Leave a Reply

Your email address will not be published. Required fields are marked *