POWER CITYNEWS : HUBLI
ಹುಬ್ಬಳ್ಳಿ: ಮಾದಕ ವಸ್ತುಗಳ ಮಾರಾಟ ಹಾಗೂ ಸೆವನೆಗೆ ಮುಂದಾಗುವವರ ವಿರುದ್ಧ ಸಮರ ಸಾರಿರುವ ಅವಳಿನಗರದ ಪೊಲೀಸರ ಬಲೆಗೆ ಇಂದು ಅಂತರರಾಜ್ಯ ಮಾದಕ ವಸ್ತುಗಳ ನಂಟಿರುವ ಪೆಡ್ಲರ್‌ಗಳು ಎನ್ನಲಾದ ಮೂವರನ್ನ ಇಂದು ಹಳೇಹುಬ್ಬಳ್ಳಿಯ ಪೊಲೀಸರು ತಿಮ್ಮಸಾಗರ ರಸ್ತೆಯ ಪಾಳು ಬಿದ್ದ ಕಟ್ಟಡವೊಂದರ ಮೇಲೆ ದಾಳಿ ನಡೆಸಿದ ವೇಳೆ ಹೊರರಾಜ್ಯದಿಂದ ಬಂದು ಸ್ಥಳೀಯವಾಗಿ ಅಫೀಮ್ ಮಾರಾಟ ಮಾಡಲು ಯತ್ನಿಸುತ್ತಿದ್ದ. ಗುಂಪಿನ ಮೇಲೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ PI ನೇತೃತ್ವದ ತಂಡ ಯಶಸ್ವಿಯಾಗಿದೆ.
ರಾಜಸ್ಥಾನ ಮೂಲದ ವಿಕಾಸ್ ಬಿಷ್ಣೊಯ್, ಜೈಸಾರಾಮ್ ಚೌದರಿ, ರಾಮರಾಮ ಬಿಷ್ಣೊಯ್ ಎಂಬ 03 ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತರಿಂದ 23,500/-ರೂ ಮೌಲ್ಯದ 46 ಗ್ರಾಂ ಅಫೀಮು, ಒಂದು ದ್ವಿಚಕ್ರ ವಾಹನ, ಮೂರು ಮೊಬೈಲ್ ಗಳು, ಸೇರಿದಂತೆ ಒಟ್ಟು 1,29,500/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿರುತ್ತಾರೆ.