ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

BJPಯ ಹೀನಾಯ ಸೋಲಿಗೆ ಅಂಶಗಳನ್ನು ಹುಡುಕಿದ: ಉಳ್ಳಿಕಾಶಿ!

ಬಿಜೆಪಿ ಸೋತು,ರಾಜ್ಯದಲ್ಲಿ ಕಾಂಗ್ರೆಸ ಸರ್ಕಾರ ಬರಲು ಪ್ರಮುಖ ಕಾರಣಗಳನ್ನು ಬಿಚ್ಚಿಟ್ಟ ದಲಿತ ಮುಖಂಡ ಗುರುನಾಥ ಉಳ್ಳಿಕಾಶಿ!

೧) ದೃಶ್ಯ ಮಾಧ್ಯಮದವರು ಮತ್ತು ಪತ್ರಿಕೋದ್ಯಮಗಳು ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕೆ ನಿಂತದ್ದು!

೨) ಮನಕೀ ಬಾತನಲ್ಲಿ ಜನಕೀ ಬಾತ್ ಕೇಳದಿರುವುದು.

೩) ರೋಡ್ ಶೋ,ಸಾರ್ವಜನಿಕರ ಹಣ ಬೇಕಾಬಿಟ್ಟಿ ಖರ್ಚು, ಹಾಗೂ ಪ್ರಧಾನಿ ಖುರ್ಚಿಯ ಘನತೆ ಗೌರವ ಕಾಪಾಡುವಲ್ಲಿ ವಿಫಲವಾಗಿರುವ ಸಾಧ್ಯತೆ.

೪) ಲಿಂಗಾಯತ ಧರ್ಮದ ಜನರನ್ನು ಬಿಜಪಿಯವರು ಬಳಸಿ ಬಿಸಾಡುತ್ತಾರೆ ಎಂಬ ಆತಂಕ ಹಲವಾರು ಘಟನೆಗಳಿಂದ ಪದೆ ಪದೇ ಸತ್ಯ ಅನಿಸಿದ್ದು.

೫) ಜೈ ಭಜರಂಗಬಲಿ, ಜೈ ಹನುಮಾನ, ಜೈ ಶ್ರೀರಾಮ ಎಂಬ ಜೈಘೋಷ ಬರೀ ಚುನಾವಣಾ ತಂತ್ರ ಎಂಬುದು ಪ್ರಜ್ಙಾವಂತ ನಾಗರಿಕರ ಅರಿವಿಗೆ ಬಂದದ್ದು.

೬) ಭ್ರಷ್ಟಾಚಾರ, ದುರಂಹಕಾರದ ಸಚಿವರುಗಳ ವರ್ತನೆಗಳು.

೭) ಬಿಜೆಪಿ ಬ್ರಾಹ್ಮಣ್ಯದ ಹಿತ ಕಾಯುವ ಪಕ್ಷ ಎಂದು ಜಗಜ್ಜಾಹೀರು ಆದದ್ದು

೮) ಪಠ್ಯ ಪುಸ್ತಕದಲ್ಲಿ ಇತಿಹಾಸ ತಿದ್ದಿದ್ದು. ಬಸವ ಕನಕ ಅಂಬೇಡ್ಕರರ ಸಂಗತಿ ತಿರುಚಿದ ಮಾಡಿದ ಮಹಾಪರಾಧ.

೯) ಯಡಿಯೂರಪ್ಪ ಹಾಗೂ ಅವರ ಮಕ್ಕಳನ್ನು, ಜಗದೀಶ್ ಶೆಟ್ಟರ, ಲಕ್ಷ್ಮಣ ಸೌದಿ ಅವರನ್ನು ನಡೆಸಿಕೊಂಡ ರೀತಿ ಕರ್ನಾಟಕದ ಜನ ಸೂಕ್ಷ್ಮವಾಗಿ ಗಮನಿಸಿದರು.

೧೦) ಪಕ್ಷದ ಪ್ರಣಾಳಿಕೆಯ ಬಗ್ಗೆ ಮಾತಾಡದೆ ಹುಸಿ ದೇಶ ಪ್ರೇಮ,ಲವ್ ಜಿಹಾದ್, ಹಿಜಾಬ ಕುರಿತ ಅನಾವಶ್ಯಕ ಚಕಮಕಿಗಳು.

೧೧) ಲಿಂಗಾಯತ ಪಂಚಮಸಾಲಿ ಜನಾಂಗವನ್ನು ಒಡೆಯಲು ಯತ್ನಿಸಿ, ಆ ಚಳುವಳಿ ವಿಫಲವಾಗುವಂತೆ ವ್ಯವಸ್ಥಿತ ಪಿತೂರಿ ನಡೆಸಿದ ಸರಕಾರ ಧೋರಣೆಗಳು

೧೨) ಪ್ರಧಾನಿ, ಗ್ರಹ ಮಂತ್ರಿ ಹೇಳಿದ್ದೆಲ್ಲ ದೇವರ ಹೇಳಿಕೆ ಎಂಬಂತೆ ಸ್ವೀಕರಿಸಿದ ಕರ್ನಾಟಕ ಸರಕಾರ ಧೋರಣೆಗಳು

೧೩) ಕರ್ನಾಟಕದ ಮುಖ್ಯ ಮಂತ್ರಿ ಸಂಘಟನೆಯೊಂದರ ಕೈಗೊಂಬೆಯಂತೆ ವರ್ತಿಸುವ ರೀತಿ – ನೀತಿಗಳನ್ನು ಮತದಾರ ಜಾಗ್ರತೆಯಿಂದ ನೋಡಿದ್ದು

೧೪) ರಾಜ್ಯದ ಮುಖ್ಯಮಂತ್ರಿ ಮತ್ತುಕೇಂದ್ರ ಸಚಿವರು ಪೊಲೀಸ್ ಇಲಾಖೆಯನ್ನ ದುರ್ಬಳಕೆ ಮಾಡಿ KP ACT 1963 ಮತ್ತು 1985ರ ಗೂಂಡಾಕಾಯ್ದೆಯನ್ನು ದುರ್ಬಳಕೆಮಾಡಿ ಅಮಾಯಕರ ಮೇಲೆ ಪ್ರಯೋಗಿಸಿ ಗೂಂಡಾ ವರ್ತನೆ ತೋರಿದ್ದು

೧೫) ED-IT-CBI-ಖೊಟ್ಟಿ ಪ್ರಕರಣಗಳ ಭಯದ ವಾತಾವರಣದ ಸ್ರಷ್ಟಿ ಸಹ ಸರ್ಕಾರದ ಪತನಕ್ಕೆ ಪ್ರಮುಖ ಕಾರಣವಾಗಿದೆ

೧೬)ಎಲ್ಲ ಇಲಾಖೆಗಳಲ್ಲೂ ತಾಂಡವವಾಡುತ್ತಿದ್ದ ೪೦%ಕಮೀಷನನ ಅವ್ಯವಹಾರ ಬಯಲಾಗಿದ್ದು

೧೭)COVID ಮಾದರಿಯಲ್ಲೇ ರಾಜ್ಯಕ್ಕೆ BJP ಸರ್ಕಾರ ಬಹುದೊಡ್ಡ ವೈರಸ್ ಆಗಿ ಕಾಡಿದ್ದು ಸತ್ಯ

೧೮)ಕೇವಲ ಕೇಸರಿಯನ್ನ ಕೇಸರಿ ಧ್ವಜವನ್ನ ಚುನಾವಣೆಯಲ್ಲಿ ಬಳಸಿ ತಾವು ಮಾತ್ರ ಹಿಂದುಗಳೆಂಬಂತೆ ಬಿಂಬಿಸೋ ನಾಟಕವಾಡಿದ್ದು.

೧೯)ಯು.ಎ.ಪಿ.ಐ ಕಾಯ್ದೆಯನ್ನ ಕೇವಲ ಮುಸ್ಲೀಂರ ವಿರುದ್ದ ಬಳಸಿದ್ದು,ಯಾವುದೋ ಚಿಲ್ಲರೇ
ಪ್ರಕರಣಗಳನ್ನು ಬಳಸಿ ಮುಸ್ಲೀಂರನ್ನು ಜೈಲಿನಲ್ಲಿಟ್ಟಿದ್ದು

೨೦)ದಲಿತರನ್ನ ಸುಳ್ಳು ಪ್ರಕರಣಗಳಡಿ ನಿರಂತರ ಸಿಲುಕಿಸಿ ದಬ್ಬಾಳಿಕೆ ಮಾಡಿದ್ದು

೨೧)ಸಿಟಿ ರವಿ ಯತ್ನಾಳರಂತವರು ಹೀನ ಮನಬಂದಂತೆ ನಾಲಿಗೆ ಹರಿಬಿಟ್ಟಿದ್ದು

೨೨)ವೀಪರೀತವಾಗಿ ದೇಶದ ಪ್ರಧಾನಿ ಎಂಬುದನ್ನು ಮರೆತು ನಿರಂತರ ರೋಡಶೋ ನಡೆಸಿದ ಮೋದಿ ಶಾ ನಡೆ

೨೩)ಬಿ.ಎಲ್.ಸಂತೋಷ -ಜೋಷೀಯವರ ಒಳನಡೆ ಮತ್ತು ಲಿಂಗಾಯತ ವಿರೋಧಿ ಮಾತುಗಳು

೨೪)ರಾಹುಲ್ ಭಾರತ ಜೋಡೊ ಯಾತ್ರೆ

೨೫)ದೇಶಭಕ್ತಿ ಮತ್ತು ಸಂಘಟನಾ ಚತುರತೆ ಬಿಟ್ಟು ಹಣ ಹಂಚಿ ಕುಲಗೆಟ್ಟ ಭಾ.ಜ.ಪ.ತನ್ನ ತನ ಕಳೆದುಕೊಂಡ ಸಂಘ

೨೬) ಕೇಂದ್ರದ ನಾಯಕರ ಅವಲಂಬನೆಯ ತೀವ್ರತೆ

೨೭)ರಾಹುಲಗಾಂಧಿ ಯವರನ್ನ ಸಂಸದ ಸ್ಥಾನದಿಂದ ರಾತ್ರೋರಾತ್ರಿ ಅಮಾನತ್ತು ನಿವಾಸ ತೆರವಿನ ತೀವ್ರತೆಯ ಕ್ರಮ ಸಹ ಭಾಜಪ ಪತನಕ್ಕೆ ಕಾರಣವಾಗಿದೆ

೨೮)ರಾಮ ಮತ್ತು ಬಜರಂಗಬಲಿ ಹೆಸರಿನಲ್ಲಿ ಮತ್ತು ಈ ಬಗ್ಗೆ ನಡೆಸಿದ ದುರಾಢಳಿತ

೩೦)ವಿರೋಧಪಕ್ಷವನ್ನ ಇಲ್ಲವಾಗಿಸಿಬಿಡುವ ಬಿಜೆಪಿ ನಾಯಕರ ಜನವಿರೋಧಿ ನಿಲುವು

೩೧)ಕ್ರಿಮಿನಲ್ ಗಳಿಗೆ ಟಿಕೆಟ್ ನೀಡಿ ಸಭ್ಯತೆಕಳೆದುಕೊಂಡ ಬಿಜೆಪಿ

೩೨)ಸಾವಿನಲ್ಲೂ ರಾಜಕಾರಣ ಮಾಡಿದ ಬಿಜೆಪಿ ನಡೆ

೩೩)ಮೀಸಲಾತಿ ಹೆಚ್ಚಳದ ಸುಳ್ಳು ಹೇಳಿಕೆ ಮತ್ತು ಉಪಸದನ ಸಮಿತಿಯ ಅವೈಜ್ಙ್ಯಾನಿಕ ಮೀಸಲಾತಿ ಹಂಚಿಕೆಯ ದೊಡ್ಡ ಸುಳ್ಳು

೩೪)SCP &STP ಹಣದ ದುರ್ಬಳಕೆ

೩೫)ಹಲಾಲ-ಜಟ್ಕಾ-ಹಿಜಾಬ್ ನಂತಹ ಅಸಂವಿಧಾನಿಕ ವಿದ್ಯಾರ್ಥಿಗಳನ್ನು ಬಿಡದೆ ಕಾಡಿದ ದುಷ್ಟನಡೆಯನ್ನು ಬೆಂಬಲಿಸಿದ ಬಿಜೆಪಿಯ ನಡೆ
೩೬) ಪೆಟ್ರೋಲ್-ಇಂಧನ- ಅಡುಗೆ ಅನಿಲ- ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿಸಿ ಅಚ್ಛೇದಿನ” ಎಂದು ಜಾತಿ ಕಲಹದ ರಾಜಕಾರಣ ಮಾಡಿದ್ದು

೩೭)ಕಾಂಗ್ರೆಸ್ ನ ೫ ಪ್ರಮುಖ ಜನಪರ ಗ್ಯಾರಂಟಿಗಳ ಕುರಿತು ಸಹ ಜನರ ಉಸ್ತುಕತೆ ಮತ್ತು ಯುವ ಸಮುದಾಯದ ಮನಬದಲಿಸುವಲ್ಲಿ ಮಹಿಳೆಯರಲ್ಲಿ ಹೆಚ್ಚಿದ ನಂಬಿಕೆ

೩೮)DSS -ಸಮತಾ ಸೇನಾ -ದಲಿತ ಅಹಿಂದ ಸಂಘಟನೆಗಳು BJPಯ ವಿರುದ್ದ ವಾಗಿ ಮತ್ತು ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದ್ದು ಪ್ರಮುಖವಾದ ವಿಚಾರವಾಗಿದೆ

೩೯) ಮುಸಲ್ಮಾನರ -ದಲಿತರ-(ಅಹಿಂದ) ಲಿಂಗಾಯತ ಸಮುದಾಯದ ಮತ ಕ್ರೂಢೀಕರಿಸಿದ ಕಾಂಗ್ರಸ್ ಪಕ್ಷದ ಜೊತೆಯಾಗಿದ್ದು

೪೦)ಹಲವೆಡೆ ಬ್ರಾಹ್ಮಣ ಸಮುದಾಯ ಮತ್ತು ಮಾಧ್ಯಮ/ಪತ್ರಿಕೆಗಳು ಪ್ರಮುಖರು ಸಹ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿ ಸಹಕರಿಸಿದ್ದು

ಹೀಗೆಪಟ್ಟಿ ಬಹುದೊಡ್ಡದಾಗಿದ್ದು,(ಇನ್ನೂ ಇವೆ) ಈ ಎಲ್ಲಾ ಸಂಗತಿಗಳಿಂದ ಭಾಜಪ ರಾಜ್ಯದಲ್ಲಿ ಸೋಲಿಗೆ ಶರಣಾಗಿದ್ದು ನಿಜವಾಗಿದ್ದು,ಮತ್ತು ಹೆಚ್ಚಿನ ಮತ ಗಳಿಸುವುದಿಲ್ಲವೆಂದು ಜನಪರ ಹೋರಾಟದ ಸಂಧರ್ಭದಲ್ಲಿಯೇ ನನಗೆ ಮನವರಿಕೆ ಆಗಿದ್ದು, ನಿಮಗೆ ಇದಕ್ಕಿಂತಲೂ ಹೆಚ್ಚು ಕಾರಣ ಗೊತ್ತಿದ್ದರೆ, ಈ ಪಟ್ಟಿಗೆ ಸೇರಿಸಬಹುದು

ಗುರುನಾಥ ಉಳ್ಳಿಕಾಶಿ
ಸಮತಾ ಸೇನಾ ಕರ್ನಾಟಕ
#9448564586

Related Articles

Leave a Reply

Your email address will not be published. Required fields are marked *

Back to top button