ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಪರಿಸರ ನಾಶವೆ ಪ್ರಕೃತಿ ವಿಕೋಪಕ್ಕೆ ಕಾರಣ:ಉಳ್ಳಿಕಾಶಿ!

ಹುಬ್ಬಳ್ಳಿ: “ವಿಶ್ವ ಪರಿಸರ ದಿನಾಚರಣೆ” ಅಂಗವಾಗಿ ವಿವಿಧ ಥಳಿಯ ಸಸಿಗಳನ್ನು ವಿತರಿಸುವ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು .ಶ್ರೀ ಹರಳಯ್ಯ ಸಮಗಾರ ಸಮಾಜ ಅಭಿವೃದ್ದಿ ಮಹಾಮಂಡಳದ ಆವರಣದಲ್ಲಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಗುರುನಾಥ-ಉಳ್ಳಿಕಾಶಿ ಇಂದಿನ ಒತ್ತಡದ ಜೀವನದಲ್ಲಿ ಬುದ್ದಿ ಜೀವಿಯಾದ ಮಾನವ ತನ್ನ ಸ್ವಾರ್ಥಕ್ಕೆ ಪರಿಸರ ನಾಶ ಪಡಿಸುತ್ತಿರುವುದರಿಂದ ನೈಸರ್ಗಿಕವಾಗಿ ಅಸಮತೋಲನ-ತಾಪಮಾನ ಏರಿಕೆ-ಅಕಾಲಿಕ ಮಳೆ -ಪರಿಸರ ಮಾಲಿನ್ಯ – ಕಟ್ಟಡಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿರುವ ಗಿಡ ಮರಗಳು , ನಾಲಾಗಳ ಒತ್ತುವರಿ,ಗಿಡಮರಗಳ ಅಕ್ರಮ ಕಟಾವು-ಹಸಿರೀಕರಣ ಕಡೆಗಣಿಸಿ ನಗರೀಕರಣದತ್ತ ಸಾಗುತ್ತಿರುವುದು,ಹೆಚ್ಚಿನ ವಾಹನಗಳಿಗಾಗಿ ಅಪಾರ ಇಂಧನ ಬಳಕೆ ಯಿಂದಾಗಿ ಅನೇಕ ಸಮಸ್ಯೆಗಳನ್ನ ಈ ಭೂಮಿ ಎದುರಿಸುತ್ತಿದ್ದು ನಮಗಿರುವುದು ಒಂದೇ ಭೂಮಿ ಎಂಬುದನ್ನು ಮರೆತು ಸ್ವಪ್ರತಿಷ್ಡೆ-ವಿಸ್ತಾರವಾದಕ್ಕಾಗಿ ಯುದ್ದ ಗಳಿಂದಾಗಿ ನಾವೆಲ್ಲರರೂ ಮುಂದಿನ ತಲೆಮಾರಿಗೆ ಈಭೂಮಿ ರಕ್ಷಿಸಿಕೊಡುವುದು ಮುಖ್ಯ ಎಂಬುದರ ಕುರಿತು ಕಾಯ್ರಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯ ದರ್ಶಿಗಳಾದ ಬಸವರಾಜ ತೇರದಾಳ ಸೇರಿದಂತೆ ಹಿರಿಯರಾದ ಆನಂದ ಮೊದಲಬಾವಿ,ಧರ್ಮರಾಜ ಸಾಬೋಜಿ,ವಸಂತ ಬೆಟಗೇರಿ, ಉಪಾಧ್ಯಕ್ಷರಾದ ಮಂಜಣ್ಣ ಉಳ್ಳಿಕಾಶಿ, ಕ್ರೀಡಾಪಟುಗಳಾದ ಪಿ.ಮಂಜುನಾಥ, ಮಾಜಿ ಅಧ್ಯಕ್ಷರಾದ ಪ್ರಭು ಅಣ್ಣಿಗೇರಿ, ಖಜಾಂಚಿ ಸುನೀಲ ಮಿರಜಕರ, ಸಂಘಟನಾ ಕಾರ್ಯದರ್ಶಿಗಳಾದ ನಿರ್ಮಲಾ ಮಾನೆ,ಮಂಜುಳಾ ಬೆಣಗಿ,ರತ್ನಾಬಾಯಿ ಗಬ್ಬೂರ,
ಲತಾ ತೇರದಾಳ, ಸಹ ಕಾರ್ಯದರ್ಶಿ ಚಂದ್ರು ಗಡಕರಿ ಕಾರ್ಯಕ್ರಮ ನಿರೂಪಿಸಿದರು,ಸತೀಶ್ ಸಾತಪತಿ,ಮಿರಜಕರ,ಇಮ್ತಿಯಾಜ್ ಬಿಜಾಪುರ,ಹಾಗೂ ಪ್ರಮುಖರು ಉಪಸ್ಥಿತರಿದ್ದು ವನಮಹೋತ್ಸವದ ಮುಖೇನ ಪರಿಸರ ದಿನವನ್ನಾಚರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button