ರಾಷ್ರ್ಟೀಯ

ಮನುಷ್ಯರಿಗಿಂತ ಹೆಚ್ಚು ಮೂಕ ಪ್ರಾಣಿಗಳಿಗೆ ಇದೆ ಪ್ರೀತಿ- ವಿಶ್ವಾಸ

ಸ್ಪೇನ್

ಮನುಷ್ಯರಾದ ನಾವು ಮೇಲು- ಕೀಳು , ಬಡವ ಶ್ರೀಮಂತ ಎನ್ನುವ ಹಮ್ಮಿನಲ್ಲಿ ಪ್ರೀತಿ- ವಿಶ್ವಾಸ, ನಂಬಿಕೆ ಹಾಗೂ ಮಾನವೀಯತೆಯ ಪ್ರಶ್ನೆ ಬಂದಾಗ ಒಂದಿಲ್ಲಾ ಒಂದು ಕಡೆ ಜಾರಿಕೊಳ್ತೇವಿ.

ಆದ್ರೆ ಮೂಕಪ್ರಾಣಿಗಳು ವಿಷಯದಲ್ಲಿ ಈ ಮಾತು ಸುಳ್ಳಾಗುತ್ತೆ.

ತನನ್ನು ಸಾಕಿ ಸಲುಹಿದ ಹಿರಿಯರನ್ನು ಅನಾಥಾಶ್ರಮಕ್ಕೆ ಕಳುಹಿಸುವ ಈಗಿನ ಕಾಲದಲ್ಲಿ ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ಒಂದು ಇಂಟರೆಸ್ಟಿಂಗ್ story ತೊರಸ್ತೀವಿ ನೋಡಿ…

ಮಾನವನಿಗೆ ಸಂಬಂಧಿಕರು,ಸಂಬಂಧಗಳು ಅನ್ನೋದು ಹುಟ್ಟಿಕೊಂಡಿದ್ದು ತನ್ನಿಂದ ತಾನಾಗೆ ಬೆಸೆದಿರುವ ಭಾವನೆಗಳನ್ನ ನೋಡೊದಕ್ಕೆ ಸಿಗೋದು ಕೇವಲ ಮನುಷ್ಯನಲ್ಲಿ.

ಆದರೆ ಮನುಷ್ಯ ಕೆಲವೊಂದು ಬಾರಿ ತಾನು ವಾಸಿಸುವ ವಾತವರಣದಲ್ಲಿ ಪ್ರಾಣಿ,ಪಕ್ಷಿಗಳಿಗೂ ತನ್ನ ಅಮೂಲ್ಯ ಪ್ರೀತಿ ವಿಶ್ವಾಸ ಹಂಚಿ ಕೊಳ್ಳುತ್ತಾನೆ.

ಕೆಲವೊಂದು ಬಾರಿ ಯಾರು ಇಲ್ಲದವರಿಗೆ ದೇವರೆ ಆಸರೆ ಆಗುತ್ತಾನೆ ಎನ್ನುವುದಾದರೆ.
ಸ್ಪೇನ್ ದೇಶದ ಆ ತಾಯಿ ಅತಿ ಕ್ರೂರವೆನಿಸಿ ಕೊಂಡ ಪ್ರಾಣಿಗಳಲ್ಲಿಯೂ ಸಹ ಪ್ರೀತಿ ಭಾಂಧವ್ಯಗಳನ್ನ ಅವುಗಳಲ್ಲಿ ಹಂಚುತ್ತಾಳೆ. ಆದರೆ ಕಾರಣಾಂತರಗಳಿಂದ ಅವುಗಳನ್ನು ಜೂ ಗೆ ಕೂಡ ಬಿಟ್ಟು ಬರ್ತಾಳೆ, ಕೆಲವು ವರ್ಷಗಳ ನಂತರ ಮಕ್ಕಳಂತೆ ಸಾಕಿದ್ದ ಆ ಸಿಂಹಗಳನ್ನ ನೋಡಲು ಹೋಗಿದ್ದ ಮಹೀಳೆ ತಾನೂ ಊಹಿಸದಷ್ಟು ಮುದ್ದಾಡಿದ ಸಿಂಹಗಳ ಆ ಅಕ್ಕರೆಯ ಆ ಅಪ್ಪುಗೆ ಅಲ್ಲಿ ನೆರೆದ ಅಧಿಕಾರಿಗಳಲ್ಲು ಸಹ ಕಣ್ಣೀರ ಹರಿಸಿದೆ.

ಇದೊಂದು ಡಿಫರೆಂಟ್ ಸೆಂಟಿಮೆಂಟ್ ಸ್ಟೋರಿ. ತನನ್ನ ಸಾಕಿ ಸಲುಹಿದ ಮನೆಯ ಯಜಮಾನಿಗೆ ವಿಶ್ವಾಸ, ನಂಬಿಕೆ ಮಾನವೀಯತೆ ಹಾಗೂ ಪ್ರೀತಿ ತೋರಿದ ಸುದ್ದಿ ಇದು.

ಸ್ಪೇನ್ ದೇಶದಲ್ಲೊಬ್ಬ ಮಹಿಳೆ ತನ್ನ ಮನೆಯಲ್ಲಿ 2 ಸಿಂಹಗಳನ್ನು ಸಾಕಿದ್ದರು. ಕಾನೂನಿನ ಪ್ರಕಾರ ಇದು ಅಪರಾಧ ಎಂದು ಸ್ಪೇನ್ ದೇಶದ ಅರಣ್ಯ ಇಲಾಖೆ ಅಧಿಕಾರಿಗಳು ಆ ಸಿಂಹಗಳನ್ನು zoo ದಲ್ಲಿ ಇಟ್ಟಿದ್ದರು.

ಇದಾದ ಬಳಿಕ ಬರೊಬ್ಬರಿ 7 ವರ್ಷಗಳ ಬಳಿಕ ಅವುಗಳನ್ನು ಸಾಕಿದ ಮಹಿಳೆ zoo ಗೆ ಹೋಗಿ ನೋಡಿದಾಗ ತನ್ನ ಯಜಮಾನಿಯನ್ನು ಕಂಡು ಓಡೋಡಿ ಬಂದು ತಬ್ಬಿಕೊಂಡು ತಮ್ಮದೇ ರೀತಿಯಲ್ಲಿ ದುಃಖವನ್ನು ವ್ಯಕ್ತಪಡಿಸಿದವು ಆ 2 ಸಿಂಹಗಳು.

ನೀಜಕ್ಕೂ ಈ ದೃಶ್ಯಗಳನ್ನು ನೋಡಿದಾಗಲೇ ಗೊತ್ತಾಗೊದು ಮನುಷ್ಯರಲ್ಲಿ ಇಲ್ಲದ ಅತಿಯಾದ ಕಾಳಜೀ, ಮಾನವೀಯತೆ ಹಾಗೂ ಪ್ರೀತಿ, ಮಾತು ಬಾರದ ಪ್ರಾಣಿಗಳಲ್ಲಿ ಇರುತ್ತೆ ಅಂತಾ…

Related Articles

Leave a Reply

Your email address will not be published. Required fields are marked *

Back to top button