BREAKING NEWSCITY CRIME NEWSHubballiPolicePolitical news

ಇವನಿಗೆ“ವಿಐಪಿ ರೂಂ”: ತರ್ಲೆ ನನ್‌ಮಗ!

Circuit house!

POWER CITYNEWS : HUBBALLI

ಹುಬ್ಬಳ್ಳಿ

ಹುಬ್ಬಳ್ಳಿ : ಇಲ್ಲಿನ ಸರ್ಕ್ಯೂಟ್ ಹೌಸ್‌ಗೆ ಪಾನಮತ್ತರಾಗಿ ಬಂದು ಪದೆ ಪದೆ ರೂಂ ನಿಡುವಂತೆ ಒತ್ತಾಯಿಸಿದ ಯುವಕರಿಬ್ಬರು ರೂಂ ನೀಡದೆ ಇದ್ದಾಗ ನಾನು ಕಾಂಗ್ರೆಸ್ ಎಮ ಎಲ್ ಎ ಆಪ್ತ ಬ್ಯಾಹಟ್ಟಿ ಪಂಚಾಯ್ತಿ ಮೆಂಬರ್ರು ಅಂದ್ಕೊಂಡು ಆವಾಜ್ ಹಾಕಿದ ಘಟನೆ ಉಪನಗರ ಪೊಲಿಸ್ ಠಾಣೆ ವ್ಯಾಪ್ತಿಯ ಸರ್ಕ್ಯೂಟ್ ಹೌಸ್ ನಲ್ಲಿ ನಡೆದಿದೆ.

ಹೌದು ನಿನ್ನೆ ರಾತ್ರಿ ಬೈಕ್ ಮೇಲೆ ಬಂದಿದ್ದ ಇಬ್ಬರು ಯುವಕರು ರೂಂ ನಿಡುವಂತೆ ಒತ್ತಾಯಿಸಿದ್ದಾರೆ. ಆದರೆ ಸಿಬ್ಬಂದಿಗಳು‌ ಅಧಿಕೃತ ಪಾಸ್ ಗಳು ಇದ್ದರೆ ಮಾತ್ರ ರೂಂ ನೀಡುವುದಾಗಿ ತಿಳಿಸಿದ್ದಾರೆ. ಕುಪಿತಗೊಂಡ ಯುವಕರಿಬ್ಬರು ಐಬಿ ಸಿಬ್ಬಂದಿ ಗಳ ಜೊತೆಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಎಲ್ಲ ಸಂಭಂದ ಪಟ್ಟ ಅಧಿಕಾರಿಗಳನ್ನ ಅವ್ಯಾಚ್ಯವಾಗಿ ನಿಂದಿಸಿದ್ದಾನೆ. ಘಟನಾ ಸ್ಥಳದಲ್ಲಿದ್ದ ಕಾನ್ಸ್ಟೇಬಲ್ ಇವರನ್ನು ಪ್ರಶ್ನಿಸುತ್ತಿದ್ದಂತೆಯೆ ಸ್ಥಳದಿಂದ ತಂದಿದ್ದ ಬೈಕ್ ಸಮೇತ ಕಾಲ್ಕಿತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸರ್ಕ್ಯೂಟ್ ಹೌಸ್ ಗೆ ಕೆಲವರು ರಾಜಕೀಯ ನಾಯಕರ ಹಾಗೂ ಸಂಘಟನಾ ಹೆಸರಲ್ಲಿ ಬೇಕಾಬಿಟ್ಟಿ ರೂಂ ಗಳನ್ನು ಪಡೆಯುವುದಲ್ಲದೆ ಸಿಬ್ಬಂದಿಗಳಿಗೂ ಅವಾಜ್ ಹಾಕುತ್ತಿರುವ ಘಟನೆ ಇದೀಗ ಸರ್ಕ್ಯೂಟ್ ಹೌಸ್ ನಲ್ಲಿ ಸರ್ವೆ ಸಾಮಾನ್ಯವಾಗಿದೆ.

ಕೂಡಲೆ ಸಂಭಂದ ಪಟ್ಟ ಅಧಿಕಾರಿಗಳು ಇ ಬಗ್ಗೆ ಎಚ್ಚರ ವಹಿಸದಿದ್ದರೆ ಸರ್ಕ್ಯೂಟ್ ಹೌಸ್ ಅಕ್ಷರಶಃ ಅಕ್ರಮ ಚಟುವಟಿಕೆಗಳ ತಾಣ ವಾಗುವುದರಲ್ಲಿ ಯಾವುದೆ ಸಂದೇಹವಿಲ್ಲ.

Related Articles

Leave a Reply

Your email address will not be published. Required fields are marked *

Back to top button