ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ರಾಜ್ಯದಲ್ಲಿ MES ನಿಷೇಧಿಸುವಂತೆ ಆಗ್ರಹಿಸಿ ಕರವೆ ಸ್ವಾಭಿಮಾನಿ ಬಣದಿಂದ :ಕೇಂದ್ರ ಸಚಿವರಿಗೆ ಮನವಿ!

ಹುಬ್ಬಳ್ಳಿ

ಕಳೆದ ಹಲವು ವರ್ಷಗಳಿಂದಲೂ ಬೆಳಗಾವಿಯಲ್ಲಿ ಕನ್ನಡಾಂಬೆಗೆ ಅವಮಾನಿಸುತ್ತಲೇ ಬರುತ್ತಿರುವ ” ಮಹಾರಾಷ್ಟ್ರ ಎಕೀಕರಣ ಸಮೀತಿ ” ಯನ್ನು ರಾಜ್ಯವ್ಯಾಪ್ತಿಯಲ್ಲಿ ನಿಷೇಧಿಸಿ‌ ಗಡಿ ಜಿಲ್ಲೆಯ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೆಕೆಂದು ಆಗ್ರಹಿಸಿ ಕರವೆ ಸ್ವಾಭಿಮಾನಿ ಬಣದ ತಾಲೂಕು ಅಧ್ಯಕ್ಷರಾದ ರವಿ ಬೇಜವಾಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಮನ ಸಲ್ಲಿಸಿದರು.

ಮಹಾರಾಷ್ಟ್ರ ಎಕಿಕರಣ ಸಮೀತಿಯ ಕಾರ್ಯಕರ್ತರು ಕನ್ನಡಿಗರ ಮೇಲೆ ಗೂಂಡಾವರ್ತನೆ ಮಾಡುತ್ತಿದ್ದು. ಕನ್ನಡ ನೆಲ ಜಲದ ಬಗ್ಗೆ ಅವಹೇಳನ ಕಾರಿ ಧಿಕ್ಕಾರದ ಕೂಗುಗಳನ್ನ ಬಹಿರಂಗವಾಗಿ ಮತ್ತು ಸಾಮಾಜಿಕ ಜಾಲತಾಣಹಳಲ್ಲಿ ಹರಿಬಿಡುವುದುರ ಮೂಲಕ ಕೋಮುಗಲಭೆ ಸೃಷ್ಟಿಸಲು ಸಂಚು ನಡೆಸಿದ್ದಾರೆ. ಈಗಾಗಲೇ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿಚಾರದ ಕುರಿತಾದ ವ್ಯಾಜ್ಯ ಕೋರ್ಟಲ್ಲಿರುವಾಗಲೇ ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದಾರೆ ಕೂಡಲೇ ಕ್ರಮ ಗೈಗೊಳ್ಳದಿದ್ದರೆ ಕನ್ನಡಿಗರು ತಾಳ್ಮೇ ಕಳೆದುಕೊಳ್ಳುವಂತಾಗುತ್ತದೆ ಎಂದು ಎಮ್ ಇ ಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇ ಸಂಧರ್ಭದಲ್ಲಿ. ಕರವೆ ತಾಲ್ಲೂಕ ಅಧ್ಯಕ್ಷ ರವಿ ಬೆಜವಾಡ್,ರಾಜ್ಯ ಉಪಾದ್ಯಕ್ಷ ರಾಮು ತಳವಾರ, ಪ್ರೇಮ ಗುಡಿ,ರಾಜಪ್ಪ ಅರಹುಣಸಿ, ಬೆಳಗಾವಿ ಘಟಕದ ರಾಜು ರಾಣೆ ಇರ್ಫಾನ್ ಕಮಾನಗಾರ್ ಸೇರಿದಂತೆ ಸಂಘಟನೆಯ ಅನೇಕ ಕಾರ್ಯಕರ್ತರು ಇದ್ದರು.

Related Articles

Leave a Reply

Your email address will not be published. Required fields are marked *

Back to top button