ಧಾರವಾಡರಾಜ್ಯಹುಬ್ಬಳ್ಳಿ

ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ 55 ಸಾವಿರ ದಂಡ ವಿಧಿಸಿದ ವಿಶೇಷ ನ್ಯಾಯಾಲಯ

ಧಾರವಾಡ

ಅಪ್ರಾಪ್ತಳಿಗೆ ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಆರೋಪ ಸಾಬೀತಾದ ಹಿನ್ನೆಲೆ 10 ವರ್ಷ ಕಠಿಣ ಶಿಕ್ಷೆ ಹಾಗೂ 55 ಸಾವಿರ ದಂಡ ವಿಧಿಸಿ
2ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಧಾರವಾಡ ಉಪನಗರ ಠಾಣೆಯಲ್ಲಿ ಕ್ರೈಂ ನಂಬರ್ (99/2018)ಅಡಿ
ಕಲಂ: 376, 506, 366, 343 IPC & 6 Pocso Act. ದಾಖಲಾಗಿತ್ತು.

SPL SC No: 41/2018.
ನೇದ್ದರಲ್ಲಿ ಆರೋಪಿತನಾದ ಸೈಯ್ಯದ ಸಾಜೀದಹುಸೇನ ತಂದೆ‌ ಸೈಯ್ಯದ ಸಮಿವುದ್ದಿನ ಸುಲೇದಾರ ಇತನು ಆರೋಪ ಎಸಗಿದ ಬಗ್ಗೆ ರುಜುವಾತ ಆಗಿದ್ದರಿಂದ
ಇತನಿಗೆ ಮಾನ್ಯ 2ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಧಾರವಾಡದ ನ್ಯಾಯಾಧೀಶರಾದ ಗೌ: ಶ್ರೀ ಕೆ.ಸಿ. ಸದಾನಂದಸ್ವಾಮಿ ರವರು
ಕಲಂ: 366 IPC ಪ್ರಕಾರ
7 ವರ್ಷ ಕಠಿಣ ಶಿಕ್ಷೆ. ಮತ್ತು 10.000/- ರೂ ದಂಡ.
ಕಲಂ: 376 IPC ಪ್ರಕಾರ 10 ವರ್ಷ ಕಠಿಣ ಶಿಕ್ಷೆ ಮತ್ತು 20.000/- ರೂ ದಂಡ.
ಕಲಂ: 6 POCSO Act ಪ್ರಕಾರ 10 ವರ್ಷ ಕಠಿಣ ಶಿಕ್ಷೆ ಮತ್ತು 20.000/- ರೂ ದಂಡ.
ಕಲಂ: 343 IPC ಪ್ರಕಾರ 1 ವರ್ಷ ಸಾದಾ‌ ಶಿಕ್ಷೆ ಮತ್ತು 2.500/- ರೂ ದಂಡ.
ಕಲಂ: 506 IPC ಪ್ರಕಾರ 1 ವರ್ಷ ಸಾದಾ ಶಿಕ್ಷೆ ಮತ್ತು 2.500/- ರೂ ದಂಡ.
ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಎಲ್ಲ ಶಿಕ್ಷೆಯನ್ನು ಏಕ ಕಾಲಕ್ಕೆ ಜಾರಿಗೊಳಿಸಿ ಮತ್ತು ಒಟ್ಟು ದಂಡದ ಮೊತ್ತ 55.000/- ರೂ ಗಳಲ್ಲಿ 50.000/- ರೂ ಗಳನ್ನು ನೊಂದ ಬಾಲಕಿಗೆ ಮತ್ತು ಉಳಿದ 5.000/- ರೂ ಗಳನ್ನು ಸರಕಾರಕ್ಕೆ ಕಟ್ಟಬೇಕು ಅಂತಾ‌ ಆದೇಶಿಸಿದ್ದಾರೆ.

ಸದರ ಪ್ರಕರಣದಲ್ಲಿ ಶ್ರೀಮತಿ ಗಿರಿಜಾ ತಮ್ಮಿನಾಳ ಸರ್ಕಾರಿ ಅಭಿಯೋಜಕರು ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ್ದರು.
ಮತ್ತು ಸದರ ಪ್ರಕರಣದಲ್ಲಿ ಶ್ರೀ ಮೋತಿಲಾಲ ಪವಾರ ಪಿ.ಐ ಉಪನಗರ ಪೊಲೀಸ ಠಾಣೆ ಧಾರವಾಡ ರವರು ಆರೋಪಿತನ ವಿರುದ್ದ‌ ಮಾನ್ಯ‌‌ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ‌ ಸಲ್ಲಿಸಿದ್ದರು.

ಪ್ರಕರಣದ ಸಂಕ್ಷಿಪ್ತ ವಿವರ
ಈ ಕೆಳಗಿನಂತಿದೆ.‌

ಧಾರವಾಡ ಉಪನಗರ ಪೊಲೀಸ‌ ಠಾಣೆ ವ್ಯಾಪ್ತಿಯ ಸಪ್ತಾಪುರ ಸರ್ಕಲ‌ ಹತ್ತಿರ ಇರುವ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾದ ಬಾಲಕಿಗೆ‌ ಸದರ ಕಾಲೇಜ‌ ಹತ್ತಿರದಿಂದ ಆರೋಪಿತನಾದ‌ ಸೈಯ್ಯದ ಸಾಜೀದಹುಸೇನ ತಂದೆ ಸೈಯ್ಯದ ಸಮಿವುದ್ದಿನ ಸುಲೇದಾರ ಇತನು ದಿನಾಂಕ: 21/08/2018 ರಾತ್ರಿ 07.30 ಗಂಟೆ ಸುಮಾರಿಗೆ ಕೊಲೆ‌ ಮಾಡುವುದಾಗಿ ಬೆದರಿಕೆ‌ ಹಾಕಿ ಅಪಹರಿಸಿಕೊಂಡು ಹೋಗಿ ಧಾರವಾಡದ ನ್ಯಾಶನಲ ಲಾಡ್ಜದಲ್ಲಿ ಅಕ್ರಮ‌ ಬಂದನದಲ್ಲಿಟ್ಟು ಅವಳ‌ ಮೇಲೆ ಬಲಾತ ಸಂಬೋಗ ಮಾಡಿ ನಂತರ ದಿನಾಂಕ: 22/08/2018 ರಂದು ತನ್ನೊಂದಿಗೆ‌ ಬರದಿದ್ದರೆ ನೊಂದ‌ ಬಾಲಕಿಗೆ ಮತ್ತು ಅವಳ‌ ತಂದೆ ತಾಯಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಧಾರವಾಡದಿಂದ ಬೆಂಗಳೂರಿಗೆ ಅಪಹರಿಸಿಕೊಂಡು ಹೋಗಿ ಬೆಂಗಳೂರಿನ‌‌ ನ್ಯೂ ಮೈಕೋ ಲೇಔಟ್ ಹೊಂಗ ಸಂದ್ರ, ರಾಘವೇಂದ್ರ ಕಾಲೋನಿಯ ಆರೋಪಿ ವಾಸ ಇರುವ ಬಾಡಿಗೆ ಮನೆಯಲ್ಲಿ ದಿನಾಂಕ: 23/08/2018 ರಿಂದ ದಿನಾಂಕ: 27/08/2018 ರ ವರೆಗೆ ಅಕ್ರಮ ಬಂದನದಲ್ಲಿರಿಸಿ ನೊಂದ ಬಾಲಕಿ ವಿರೋದಿಸಿದರೂ ಕೂಡಾ ಅವಳಿಗೆ ಜೀವದ ಬೆದರಿಕೆ ಹಾಕಿ ನಿರಂತರವಾಗಿ ಅವಳ‌ ಮೇಲೆ‌ ಬಲಾತ‌ ಸಂಬೋಗ ಮಾಡಿದ‌ ಅಪರಾಧ ಇದಾಗಿದೆ.‌

Related Articles

Leave a Reply

Your email address will not be published. Required fields are marked *

Back to top button