ರಾಜ್ಯ

ಅದ್ದೂರಿ ಸ್ವಾತಂತ್ರ್ಯ ದಿನಾಚರಣೆಗೆ ಸಾಕ್ಷಿಯಾದ ಸುರಭಿನಗರ!

Power city news: ದೇಶಾದ್ಯಂತ ಆಗಷ್ಟ್ 15 ರ ಸ್ವಾತಂತ್ರ್ಯ ಸಂಭ್ರಮ “ಹರ್ ಘರ್ ತಿರಂಗ” ಎಂಬ ಅಭಿಯಾನದಡಿ ಅದ್ದೂರಿಯಾಗಿ ಆಚರಿಸಲಾಯಿತು.

ಅದರಂತೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಸುರಭಿನಗರದ ನಿವಾಸಿಗಳು ಕೂಡ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಅಚರಿಸಿದ್ದಾರೆ.

ಸುರಭಿನಗರದ ಉದ್ಯಾನವನದಲ್ಲಿ ಪ್ರತಿವರ್ಷದಂತೆ ಇ ವರ್ಷವು ಕೂಡ ಕಾಲೂನಿಯ ಮಹೀಳೆಯರು ಮಕ್ಕಳು ಹಾಗೂ ಎಲ್ಲ ವರ್ಗದ ನಿವಾಸಿಗಳು ಧ್ವಜ ಸ್ಥಂಬದ ಎದುರು ಕೇಸರಿ ಬಿಳಿ ಹಸಿರು ಬಣ್ಣದ ರಂಗೋಲಿಯ ಚಿತ್ತಾರ ಹಾಕಿದ್ದಲ್ಲದೆ. ಪ್ರತಿಯೊಬ್ಬ ಕಾಲೊನಿಯ ನಿವಾಸಿಗಳು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವ ಮೂಲಕ ರಾಷ್ಟ್ರ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದು ಎಲ್ಲರ ಸಂತಸ ಮುಗಿಲು ಮುಟ್ಟಿತ್ತು.

ಇನ್ನೂ ಇದೆ ಸಂಧರ್ಭದಲ್ಲಿ ಧ್ವಜಾರೋಹಣವನ್ನು ಹಿರಿಯರಾದ ವೆಂಕಟೇಶ ಕುಂದಗೋಳ ನೆರವೆರಿಸಿದರು . ಇ ವೇಳೆ ಎಸ್.ವಿ.ಚಂದರಗಿ ಮಾತನಾಡಿ ಕಾಲೋನಿಯ ಸ್ವಾತಂತ್ರ ತಂದುಕೊಟ್ಟ ಹುತಾತ್ಮರ ನೆನೆದು ಅವರ ತ್ಯಾಗ ಬಲಿದಾನಗಳನ್ನು ಕೊಂಡಾಡಿದರು.

ನವಸುರಭಿನಗರ ನಿವಾಸಿಗಳ ಸಂಘದ ಅಧ್ಯಕ್ಷ ಶ್ರೀ ಎಸ್.ಹೆಚ್.ಭೋಸಲೆ ವಂದಿಸಿದರು , ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಎಸ್.ಇನಾಮತಿ ಕಾರ್ಯಕ್ರಮ ನಡೆಸಿಕೊಟ್ಟರು.

Related Articles

Leave a Reply

Your email address will not be published. Required fields are marked *

Back to top button