ಧಾರವಾಡ

ಅಪಘಾಕ್ಕೀಡಾದ ಕಾರು ಮಹಿಳೆಗೆ ಗಾಯ

ಧಾರವಾಡ

ಕಾರೊಂದು ಅಪಘಾಕ್ಕಿಡಾದ ಪರಿಣಾಮ ಓರ್ವ ಮಹಿಳೆ ಗಾಯಗೊಂಡ ಘಟನೆ ಎಸಡಿಎಂ ಆಸ್ಪತ್ರೆಯ ಎದುರು ನಡೆದಿದೆ .

ಬೆಳಗಾವಿ ಮೂಲದ ಶೋಯೇಬ್ ನಧಾಫ ಎಂಬುವವರಿಗೆ ಸೇರಿದ ಕಾರು ಇದಾಗಿದೆ. ಇದರಲ್ಲಿ ಮಹ್ಮದಲಿ ನದಾಫ್ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದರು.

ನವಲಗುಂದದ ಸಂಬಂಧಿಕರ ಗೃಹ ಪ್ರವೇಶ ಮುಗಿಸಿಕೊಂಡು ಧಾರವಾಡದ ಕಡೆ ಪ್ರಯಾಣ ಬೆಳೆಸಿದ್ದರು. ಆದರೆ ಎಸ ಡಿ ಎಂ ಆಸ್ಪತ್ರೆಯ ಎದುರು ಕಾರಿನ ಬಲಗಡೆಯ ಟಯರ್ ಬ್ಲಾಸ್ಟ್ ಆದ ಕಾರಣ ಬಲಬದಿಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಚಕ್ರ ತುಂಡಾಗಿದೆ. ಅದೃಷ್ಟ ವಶಾತ್ ಯಾವುದೆ ಹೆಚ್ಚಿನ ಪ್ರಾಣ ಹಾನಿಯಾಗದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜೈಬುನ್ ತರ್ಲಘಟ್ಟ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.


ಇದರಿಂದ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಆದರೆ ಇನ್ನೂ ಘಟನಾ ಸ್ಥಳಕ್ಕೆ ತಡವಾಗಿ ಆಗಮಿಸಿದ ಸಂಚಾರಿ ಪೊಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button