Uncategorized

ಈದ್ಗಾದಲ್ಲಿ ಗಣೇಶ ಪ್ರತಿಷ್ಠಾನ ಖಾಯಂ ಗೊಳಿಸಿದ ಪಾಲಿಕೆ : ಹಿಂದೂಪರ ಸಂಘಟನೆಗಳ ಮುಗಿಲು ಮುಟ್ಟಿದ ಸಂತಸ!

POWER CITY NEWS: ಹುಬ್ಬಳ್ಳಿ

ರಾಜಕೀಯ ಬೆಳವಣಿಗೆ ಪಡೆದಿದ್ದ ಹುಬ್ಬಳ್ಳಿಯ ಈದ್ಗಾ ಗಣೇಶನ ಪ್ರತಿಷ್ಠಾನಕ್ಕೆ ಕೊನೆ ಘಳಿಗೆಯಲ್ಲಿ ಪಾಲಿಕೆ ಅಸ್ತು ಎಂದಿದೆ.

ನಿನ್ನೆ ರಾತ್ರಿಯಿಂದಲೇ ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಗೆ ಫಲ ಸಿಕ್ಕಂತಾಗಿದೆ.
ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಹಾನಗರ ಪಾಲಿಕೆಯ ಠರಾವಿನಂತೆ ಆಯುಕ್ತರು ಗಣೇಶ ಪ್ರತಿಷ್ಠಾಪನೆಗೆ ಸಹಮತಿ ಆದೇಶ ಪತ್ರ ನೀಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ರವರ ಸತತ ಪ್ರಯತ್ನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಈದ್ಗಾದಲ್ಲಿ ಶ್ರೀ ಗಜಾನನ ಪ್ರತಿಷ್ಠಾಪನೆ ಸತತ ಎರಡನೆ ಬಾರಿಗೆ ಜರುಗಲಿದೆ.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ,ಮಹೇಶ ಟೆಂಗಿನಕಾಯಿ, ಮಾಜಿ ಮಹಾಪೌರ ಈರೇಶ ಅಂಚಟಗೇರಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ,ತಿಪ್ಪಣ್ಣ ಮಜ್ಜಗಿ ಜಯತೀರ್ಥ ಕಟ್ಟಿ ದತ್ತಮೂರ್ತಿ‌ಕುಲಕರ್ಣಿ ಸಂತೋಷ ಚವ್ಹಾಣ ಶಿವು ಮೆಣಸಿನಕಾಯಿ ಪಾಲಿಕೆ ಸದಸ್ಯರು ಹಾಗೂ ಹಿಂದೂ ಪರ ಕಾರ್ಯಕರ್ತರು ಉಪಸ್ಥಿತರಿದ್ದರು.

POWERCITY NEWS HUBBALLI.

Related Articles

Leave a Reply

Your email address will not be published. Required fields are marked *

Back to top button