ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಚಿಗರಿ ಹೊಡೆತಕ್ಕೆ ಆಸ್ಪತ್ರೆ ಸೇರಿದ ಎನ್‌ಫಿಲ್ಡ್ ಸವಾರ!

POWERCITY NEWS:

Hubli

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅವಳಿನಗರದ ಬಿಆರ್‌ಟಿಎಸ್‌ ಬಸ್ ಸಂಚಾರಿ ರಸ್ತೆಯಲ್ಲಿ ನಿರ್ಮಾಣ ಗೊಂಡಿರುವ ಅವೈಜ್ಞಾನಿಕ ತಿರುವುಗಳಿಂದ ಒಂದಿಲ್ಲ ಒಂದು ಅಪಘಾತಗಳು ಸಂಭವಿಸುತ್ತಲೆ ಇವೆ.

ಇಂದು ಸಹ ಬಿ.ಆರ್.ಟಿ.ಎಸ್ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಪಿಎಂಸಿಯ ಮೂರನೇ ಕ್ರಾಸ್ ಬಳಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ವಯಕ್ತಿಕ ಕೆಲಸದ ನಿಮಿತ್ತ ರಾಯಲ್ ಎನ್‌ಫಿಲ್ಡ್ ಬೈಕ್ ತೆಗೆದುಕೊಂಡು ಹೋಗುತಿದ್ದ ಬೈಕ್ ಸವಾರ ಹಾಗೂ ಬಿ.ಆರ್.ಟಿ.ಎಸ್ ಬಸ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ.

ಇನ್ನೂ ಸ್ಥಳೀಯರು ಬಿ.ಆರ್.ಟಿ.ಎಸ್ ಬಸ್ ತಡೆದು ಪ್ರತಿಭಟನೆ ನಡೆಸಿದ್ದು, ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ. ದುರದೃಷ್ಟಕರ ವೆಂದರೆ ಚಿಗರಿ ಓಟಕ್ಕೆ ಒಂದಿಲ್ಲ ಒಂದು ಸಮಸ್ಯಗಳು ಎದುರಾಗುತ್ತಲೆ ಇವೆ.

Related Articles

Leave a Reply

Your email address will not be published. Required fields are marked *

Back to top button