ಕಲ್ಬುರ್ಗಿರಾಜಕೀಯರಾಜ್ಯಸ್ಥಳೀಯ ಸುದ್ದಿ

ಜನಪರ ಅಭಿವೃದ್ಧಿ ಕೆಲಸಗಳೆ ನನಗೆ ಗೆಲುವಿನ ಮೆಟ್ಟಿಲುಗಳು – ಮಾಲಿಕಯ್ಯಾ ಗುತ್ತೇದಾರ!

powercity news /ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಅಫಜಲಪೂರ ಪಟ್ಟಣದಲ್ಲಿ ಇಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು ಮತ್ತು ಬಿಜೆಪಿ ಅಭ್ಯರ್ಥಿ ಶ್ರೀ ಮಾಲಿಕಯ್ಯಾ ಗುತ್ತೇದಾರರು ಈ ಬಾರಿ ಅಫಜಲಪೂರ ಮತಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸುವುದು ಖಚಿತ ಎಂದರು.

ಕೆಂದ್ರ ಸರ್ಕಾರದ ಹಲವಾರು ಯೋಜನೆಗಳು ನನಗೆ ಶ್ರೀರಕ್ಷೆ ಮತ್ತು ತಾಲ್ಲೂಕಿನಲ್ಲಿ ನಾನು ಮಾಡಿದ ಹಲವಾರು ಜನಪರ ಅಭಿವೃದ್ಧಿ ಕೆಲಸವನ್ನು ಮತದಾರರು ನೋಡಿದ್ದಾರೆ. ನನ್ನ ಕ್ಷೇತ್ರದಲ್ಲಿನ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡಿರುವ ಜನ ಇ ಬಾರಿ ಬಹುಮತಗಳಿಂದ ನನ್ನನ್ನು ಜಯಶಾಲಿಯಾಗಿ ಮಾಡುತ್ತಾರೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ಅಮರನಾಥ ಪಾಟೀಲ ಶ್ರೀ ಮಾಲಿಕಯ್ಯಾ ಗುತ್ತೇದಾರ ಅಂತಹ ಹಿರಿಯ ವ್ಯಕ್ತಿಗಳು ಈ ಅಫಜಲಪೂರ ತಾಲ್ಲೂಕಿಗೆ ಬಹಳ ಅವಶ್ಯಕತೆ ಇದೆ ಈ ಬಾರಿ ಕಮಲದ ಹೂವಿಗೆ ಮತ ಹಾಕಿ ಇವರನ್ನು ವಿಧಾನಸಭೆಗೆ ಕಳುಹಿಸಿ ಅಫಜಲಪೂರ ಇನ್ನೂ ಎತ್ತರಕ್ಕೆ ಬೆಳೆದು ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

Related Articles

Leave a Reply

Your email address will not be published. Required fields are marked *

Back to top button