ಜನಮನ ಸೆಳೆದ ವಿವಿಧ ರಾಜ್ಯಗಳ ದೇಸಿ ಕ್ರೀಡೆಗಳ ಪ್ರದರ್ಶನ!
powercity news:
26ನೇ ರಾಷ್ಟ್ರೀಯ ಯುವ ಜನೋತ್ಸವ
ಧಾರವಾಡ (ಕರ್ನಾಟಕ ವಾರ್ತೆ) ಜ 13: 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಯುವಜನರಿಗೆ ದೇಶಿ ಕ್ರೀಡೆಗಳ ಪ್ರದರ್ಶನ ಜನ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ದೇಶಿ ಕ್ರೀಡೆಗಳ ಪ್ರದರ್ಶನ ನಡೆದಿದ್ದು ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ. ಈ ದೇಶಿ ಕ್ರೀಡಾ ಪ್ರದರ್ಶನಕ್ಕೆ ಶಾಸಕ ಅಮೃತ ದೇಸಾಯಿ ಅವರು ಚಾಲನೆ ನೀಡಿ, ದೇಶದ ವಿವಿಧೆಡೆಯಿಂದ ಪ್ರದರ್ಶನ ನೀಡಲು ಆಗಮಿಸಿದ ಎಲ್ಲ ಯುವ ತಂಡಗಳಿಗೆ ಶುಭ ಕೋರಿ, ಆತ್ಮೀಯ ಧನ್ಯವಾದಗಳನ್ನು ಹೇಳಿದರು.
ಪಂಜಾಬ ರಾಜ್ಯದ ದೇಶಿ ಕ್ರೀಡೆಯಾದ ಮಾರ್ಷಲ್ ಆರ್ಟ್ಸ್ ಗಟ್ಕಾ ಪ್ರದರ್ಶನವು ಪಂಜಾಬಿ ಶೈಲಿಯದ್ದಾಗಿದ್ದು ಗಟ್ಕಾ ಕಲೆಯೊಂದು ಯುದ್ದ ಕಲೆ. ಜನಮನವನ್ನು ಆಕರ್ಷಿಸುವಲ್ಲಿ ಜಯ ಕಂಡಿತು.
ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದಿಂದ ಮಲ್ಲಕಂಬ, ತೆಲಂಗಾಣದ ಕಬ್ಬಡ್ಡಿ, ಮಣಿಪುರದ ಮುಕ್ನಾ ತಂಗ್ಯಾ, ಅಸ್ಸಾಂ ರಾಜ್ಯದ ಬೊಮ್ಲೆನೈ, ಆಂಧ್ರ ರಾಜ್ಯದಿಂದ ಕರ ಸಾನ ಹಾಗೂ ಕಟ್ಟಿ ಸಾಮ್, ತಮಿಳುನಾಡಿನ ಸಿಲಂಬನ್, ಜಮ್ಮು ಕಾಶ್ಮೀರ ರಾಜ್ಯದ ಕಬ್ಬಡ್ಡಿ, ಸೇರಿದಂತೆ ವಿವಿಧ ರಾಜ್ಯಗಳ ದೇಸಿ ಕ್ರೀಡೆ, ಲಗೋರಿ, ಚಿನ್ನಿದಾಂಡು, ಗೋಲಿ ಕ್ರೀಡೆಗಳ ಅನಾವರಣ ನಿಜಕ್ಕೂ ತುಂಬಾ ಅದ್ಬುತವಾಗಿ ಪ್ರದರ್ಶನ ಕಂಡವು.
ಈ ಸಂದರ್ಭದಲ್ಲಿ ಬಯಲು ಸೀಮೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.