ಧಾರವಾಡ ಜಿಲ್ಲೆಯ “ಕಾಂಗ್ರೆಸ್ ಟಿಕೆಟ್” ಕೆಲವರ ಹೆಸರು ಫೈನಲ್!
ಧಾರವಾಡ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಟಿಕೆಟ್ ಫೈನಲ್ ಮಾಡಿದ ಕಾಂಗ್ರೇಸ್: ಮೂರು ಕ್ಷೇತ್ರ ಕಗ್ಗಂಟು
ಹುಬ್ಬಳ್ಳಿ : ಎರಡು ದಿನಗಳ ಹಿಂದೆ ನಡೆದ ದೆಹಲಿ ಮಟ್ಟದ AICC ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರು, ಕಾರ್ಯಧ್ಯಕ್ಷರು ಮತ್ತು ಸ್ಕ್ರೀನಿಂಗ್ ಕಮಿಟಿ ಸಮಕ್ಷಮ ಹಲವು ಕ್ಷೇತ್ರಗಳ ಟಿಕೆಟ್ ಫೈನಲ್ ಮಾಡಲಾಗಿದೆ. ಇದೆ ವೇಳೆ ಧಾರವಾಡ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ನಿರೀಕ್ಷೆಯಂತೆ ಹಾಲಿ ಶಾಸಕ ಪ್ರಸಾದ್ ಅಬ್ಬಯ್ಯ ಹು -ಧಾ ಪೂರ್ವ ಮೀಸಲು ಕ್ಷೇತ್ರದಿಂದ ಮತ್ತೆ ಸ್ಪರ್ದಿಸುವುದು ಖಚಿತವಾಗಿದೆ. ಇನ್ನೂ ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಕಲಘಟಗಿ ಮತ ಕ್ಷೇತ್ರಕ್ಕೆ ಮತ್ತೆ ಸಂತೋಷ್ ಲಾಡ್ ಅವರನ್ನೇ ಫೈನಲ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಇದರ ಜೊತೆಗೆ ತೀವ್ರ ಸಂಚಲನ ಮೂಡಿಸಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ರಜತ್ ಉಳ್ಳಾಗಡ್ಡಿಮಠ ಅವರಿಗೆ ಮನೆ ಹಾಕಲಾಗಿದ್ದು, ಇನ್ನುಳಿದಂತೆ ನವಲಗುಂದ ಮತಕ್ಷೇತ್ರದಿಂದ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಬಂದಿದ್ದ N H ಕೋನರೆಡ್ಡಿ ಇದೀಗ “ಕೈ ಅಭ್ಯರ್ಥಿ” ಆಗಲಿದ್ದಾರೆ ಎನ್ನಲಾಗುತ್ತಿದೆ.
ಸಧ್ಯ ಟಿಕೆಟ್ ನಿರೀಕ್ಷೆಯಲ್ಲಿ ಭಾರಿ ಸರ್ಕಸ್ ನಡೆಸಿ ವಂಚಿತರಾಗಿರುವ ಕೆಲವು “ಕೈ” ನಾಯಕರು ಜೆಡಿಎಸ್ ಅಥವಾ ಇತರೆ ಪಾರ್ಟಿಯಿಂದ ಸ್ಪರ್ದಿಸುವ ಮನಸ್ಥಿತಿ ಹೊಂದಿದ್ದು ಕಲಘಟಗಿ, ನವಲಗುಂದ ಹಾಗೂ ಸೆಂಟ್ರಲ್ ಕ್ಷೇತ್ರದ ಆಕಾಂಕ್ಷಿಗಳು ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.ಭಿನ್ನಮತ ಸ್ಪೋಟಗೊಂಡರೆ ಯಾರು ಯಾವ ಪಕ್ಷದ ಬಾವುಟ ಹಿಡಿಯಲಿದ್ದಾರೆ ಅಥವಾ ಹೇಗೆ ತಮ್ಮ ಮುನಿಸಿಗೆ ಪರಿಹಾರ ಕಂಡು ಕೊಳ್ಳಲಿದ್ದಾರೆ ಎನ್ನುವುದು ಕೂಡ ಕುತೂಹಲವಾಗಿದೆ.
ಈಗಾಗಲೇ ಫೈನಲ್ ಮಾಡಿರುವ ಅಭ್ಯರ್ಥಿಗಳಿಗೆ ಚುನಾವಣಾ ತಯಾರಿ ನಡೆಸುವಂತೆ ಕೆಪಿಸಿಸಿ ಸೂಚನೆ ನೀಡಿದ್ದು ಬಿನ್ನಮತ ಶಮನಕ್ಕೆ ದಾರಿ ಕಂಡುಕೊಳ್ಳುವ ಮಾರ್ಗ ಕಂಡುಕೊಳ್ಳಿ ಎಂದು ಸಲಹೆ ನೀಡಿದೆ.
ಇನ್ನುಳಿದಿರುವ ಹುಬ್ಬಳ್ಳಿ ಧಾರವಾಡ ಪಶ್ಚಿಮ, ಕುಂದಗೋಳ, ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಟಿಕೆಟ್ ಬಿಕ್ಕಟ್ಟು ಇನ್ನು ಕಾದು ನೋಡುವ ತಂತ್ರಕ್ಕೆ ಕಾಂಗ್ರೇಸ್ ಹೈ ಕಮಾಂಡ್ ಮುಂದಾಗಿದ್ದಾರೆ.