ಧಾರವಾಡ

ಪುನೀತ್ ಅವರ ಅಪ್ಪಟ ಅಭಿಮಾನಿ‌ ಬಾಳು ಹುನಸಿಕಟ್ಟಿ

Click to Translate

ಧಾರವಾಡ

ಕಾಲೇಜು ದಿನಗಳಿಂದ ಪುನೀತ್ ಅವರನ್ನು ನೋಡಿಕೊಂಡು ಅವರ ಸಿನಿಮಾ ಡೈಲಾಗಳನ್ನು ಹೇಳುತ್ತಾ ಬೆಳೆದವರು ಈ‌ ವಿಶೇಷ ಅಭಿಮಾನಿ.

2002 ರಲ್ಲಿ ಅಪ್ಪು ಸಿನಿಮಾ ನೋಡಿದ ನಂತರ ಇದುವರೆಗೂ ಯಾವುದೇ ಪುನೀತ ರಾಜಕುಮಾರ ಸಿನಿಮಾವನ್ನು ಥೇಟರನಲ್ಲಿ ಹೋಗಿ ಫಸ್ಟ ಡೇ ಫಸ್ಟ್ ಶೋ ನೋಡುವುದನ್ನು ಬಿಟ್ಟಿಲ್ಲಾ ಈ ಅಭಿಮಾನಿ

ಇವರು ಬೇರೆ ಯಾರೂ ಅಲ್ಲಾ ನಮ್ಮ ಗಂಡು ಮೆಟ್ಟಿದ ನಾಡಿನ ವಿದ್ಯಾಕಾಶಿ ‌ಧಾರವಾಡ ಜಿಲ್ಲೆಯ ಮುಳಮುತ್ತಲ ಗ್ರಾಮದ ಯುವಕ ಬಾಳು ಹುನಶಿಕಟ್ಟಿ.

ಪುನೀತ್ ಅವರ ಅಭಿಮಾನದಿಂದ ತನ್ನ ಎರಡು‌ ಕಣ್ಣನ್ನು ಡೊನೇಟ್ ಮಾಡಿದ್ದಾರೆ.

ಖಾಸಗಿ‌ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವ ಈ ಅಭಿಮಾನಿಗೆ‌ ಪುನೀತ್ ಅಗಲಿಕೆ ಸಾಕಷ್ಟು ಆಘಾತ ತಂದಿದೆ.

ಧಾರವಾಡ- ಹುಬ್ಬಳ್ಳಿಯಲ್ಲಿ ಬಹುತೇಕ ಚಿತ್ರೀಕರಣ ಆದ ಯುವರತ್ನ ಸಿನಿಮಾವನ್ನು ಬಾಳು ನೋಡಿದ್ದು ಪುನೀತ್ ಅವರ ಕೊನೆಯ ಚಿತ್ರ. ‌

ಪುನೀತ್ ಅವರ ಸಮಾಧಿವರೆಗೂ ಹೋಗಿ ಬಂದಿರುವ ಈ ಅಭಿಮಾನಿ ಪುನೀತ್ ಭಾವಚಿತ್ರ ಇರುವ ಟೀ ಶರ್ಟ್ ಹಾಕಿ ಅಭಿಮಾನ ಮೆರೆದಿದ್ದಾರೆ.

ಪುನೀತ ಅವರು ಯಾವತ್ತಿಗೂ ನಮ್ಮ ಜೋತೆಗೆ ಇರ್ತಾರೆ. ಜೋತೆಗಿರದ ಜೀವ ಯಾವತ್ತಿಗೂ ಜೀವಂತ ಎನ್ನುವ ಅಭಿಮಾನದಲ್ಲಿ ಪುನೀತ ನೆನೆದು ಕಾಲ ಕಳೆಯುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button