ಸ್ಥಳೀಯ ಸುದ್ದಿಹುಬ್ಬಳ್ಳಿ

ಪುಸ್ತಕದ ಜೊತೆಗೆ ಕರ್ತವ್ಯದಲ್ಲೂ ಮುಂಬಡ್ತಿ ಹೊಂದಿದ ಪೊಲಿಸ್ ಪೇದೆ: ರಾಜು ದರ್ಗಾದವರ !

ಪುಸ್ತಕದ ಜೊತೆಗೆ ಕರ್ತವ್ಯದಲ್ಲೂ ಮುಂಬಡ್ತಿ ಹೊಂದಿದ ಪೊಲಿಸ್ ಪೇದೆ: ರಾಜು ದರ್ಗಾದವರ

ಪೇದೆಯಾಗಿ ಸಿ ಎ ಆರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.
ಆರ್ ಎನ್ ದರ್ಗಾದವರ ರವರು ಈಗ ಪೇದೆಯಿಂದ ಮುಖ್ಯ ಪೇದೆಯಾಗಿ (ಹೆಡ್ ಕಾನ್ಸ್‌ಟೇಬಲ್) ಮುಂಬಡ್ತಿ ಹೊಂದಿದ್ದಾರೆ.ಈ ಕುರಿತು ಮಾನ್ಯ ಉಪ ಪೊಲೀಸ್ ಆಯುಕ್ತರು ಸಿ ಎ ಆರ್ ಘಟಕ ಹುಬ್ಬಳ್ಳಿ ಧಾರವಾಡ ರವರಲ್ಲಿ ಮುಖ್ಯ ಪೇದೆಯಾಗಿ ವರದಿಯನ್ನು ಮಾಡಿಕೊಂಡರು.

ಕರ್ತವ್ಯದ ಜೊತೆಗೆ ಸಾಹಿತ್ಯಕ್ಕೂ ಸೈ!

ಆರ್ ಎನ್ ದರ್ಗಾದವರ ರವರು ಕರ್ತವ್ಯದ ಜೊತೆ ಜೊತೆಯಲಿ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು. ಈಗಾಗಲೇ ಇವರು ಬರೆದ ಹಲವು ಪುಸ್ತಕ ಗಳಲ್ಲಿ “ಗಾಂಧಿ ನೇಯ್ದಿಟ್ಟ ಬಟ್ಟೆ” ಎಂಬ ಪುಸ್ತಕವನ್ನು ಕೂಡ ಹೊರ ತಂದಿದ್ದಾರೆ.ಈ ಪುಸ್ತಕವು ಕರ್ನಾಟಕ – ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ರವರಿಂದ ಧನ ಸಹಾಯ ಪಡೆದು ಕೊಂಡಿರುತ್ತದೆ. ಹೀಗೆ ಪೋಲಿಸ್ ಇಲಾಖೆಗೆ ಸೇವೆ ಸಲ್ಲಿಸುವ ಮೂಲಕ ಉತ್ತುಂಗದ ಗರಿ ಮೂಡಿಗೆರಸಿ ಕೊಳ್ಳಲಿ ಎನ್ನುವುದೆ. Power city Kannada news ನ ಹಾರೈಕೆ.

Related Articles

Leave a Reply

Your email address will not be published. Required fields are marked *

Back to top button