ಪ್ರಚೋದನ ಕಾರಿ ಪೊಸ್ಟ್ ಉದ್ರಿಕ್ತರಿಂದ: ಪೊಲಿಸರ ಮೇಲೆ ಕಲ್ಲೂ ತೂರಾಟ
ಹುಬ್ಬಳ್ಳಿ
ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಹಳೆಹುಬ್ಬಳ್ಳಿಯ ಆನಂದನಗರದ ಘೊಡ್ಕೆ ಪ್ಲಾಟಿನ ಯುವಕ ಮೆಕ್ಕಾದ ಮೇಲೆ ಕೇಸರಿ ಧ್ವಜ ಹಾರಿಸಿರುವ ಎಡಿಟ್ ಮಾಡಿದ ಪೋಸ್ಟ್ ಹರಿಬಿಟ್ಟಿದ್ದ. ಆದರೆ ಹಳೆಹುಬ್ಬಳ್ಳಿ ಪೊಲಿಸರು ಅದಾಗಲೇ ಕೃತ್ಯವೆಸಗಿದ್ದ ಯುವಕನನ್ನು ಅರೆಸ್ಟ್ ಕೂಡ ಮಾಡಿದ್ದರು. ಆದರೆ ಹಳೆ ಹುಬ್ಬಳ್ಳಿ ಪೊಲಿಸ್ ಠಾಣೆ ಎದುರು ಜಮಾವಣೆಗೊಂಡ ಇಸ್ಲಾಂ ಸಮುದಾಯದ ಯುವಕರು ವಿವಾದಾತ್ಮಕ ಪೊಸ್ಟ್ ಹಾಕಿದ ಆರೋಪಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ ಘಟನೆ ಹಳೆ ಹುಬ್ಬಳ್ಳಿಯ ಪೊಲಿಸ್ ಠಾಣೆಯ ಬಳಿ ನಡೆದಿದೆ.
ವಾರದ ಹಿಂದೆಯಷ್ಟೆ ಧಾರವಾಡದ ನುಗ್ಗಿಕೇರಿಯಲ್ಲಿನ ಕಲ್ಲಂಗಡಿ ವ್ಯಾಪಾರಿಯ ಮೇಲಿನ ದಾಳಿ ನಡೆದಿದ್ದ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಕೊಮು ಸೌಹಾರ್ದತೆ ಕದಡುವ ಪೊಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರಿಂದ ಒಂದು ಕೋಮಿನ ಜನ ಹಳೆ ಹುಬ್ಬಳ್ಳಿಯ ಪೊಲಿಸ್ ಠಾಣೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಗೊಂಡಿದ್ದರಿಂದ ಪರಿಸ್ಥಿತಿ ಉದ್ವಿಗ್ನ ಗೊಂಡಿದೆ.
ಆದ್ರೆ ರಂಜಾನ ತಿಂಗಳ ಉಪವಾಸದ ದಿನಗಳ ಹಿನ್ನೆಲೆಯಲ್ಲಿ ಫತೇಶಾ ದರ್ಗಾ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾವಣೆ ಯಾಗಿದ್ದರಿಂದ .ವಿಷಯ ತಿಳಿಯುತ್ತಿದ್ದಂತೆ ಹಳೆಹುಬ್ಬಳ್ಳಿ ಪೊಲಿಸ್ ಠಾಣೆಗೆ ಆಗಮಿಸಿದ್ದ ಪೊಲಿಸ್ ಆಯುಕ್ತರಾದ ಲಾಬೂರಾಮ್ ಅವರು ಅಲ್ಲಿನ ಸಮುದಾಯದ ಮುಖಂಡರೊಂದಿಗೆ ಚರ್ಚಿಸುತ್ತಿದ್ದ ವೇಳೆ ಹುಬ್ಬಳ್ಳಿ – ಧಾರವಾಡ ಪೊಲಿಸ್ ಆಯುಕ್ತರ ಕಾರಿಗೆ ಕಲ್ಲು ಎಸೆಯಲಾರಂಭಿಸಿದ್ದಾರೆ. ದುಷ್ಕರ್ಮಿಗಳನ್ನು ತಡೆಯಲು ಮುಂದಾದ ವೇಳೆ ಗುಂಪು ಚದುರದಿದ್ದಾಗ ಲಘು ಲಾಠಿ ಪ್ರಹಾರ ನಡೆಸುದ್ದಾರೆ.
ಮತ್ತೊಂದೆಡೆ ಸಮೀಪದ ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿದ ಉದ್ರಿಕ್ತರ ಗುಂಪೊಂದು ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್ ಕಾಡದೇವರ ಮಠ ವಾಹನದ ಮೇಲೆ ಕಲ್ಲು ತೂರಿದ್ದರಿಂದ ಗಂಭೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯಲ್ಲಿ ಪೊಲಿಸ್ ವಾಹನಗಳು ಸೇರಿದಂತೆ ಬಸ್ ಗಳ ಮೇಲೂ ಕಲ್ಲೂ ತೂರಾಟ ನಡೆಸಿ ಜೀಪ್ ಗಳನ್ನ ನೆಲಕ್ಕುರುಳಿಸಲಾಗಿದೆ.
ಎಕಾ ಏಕಿ ನಡೆದ ಈ ಘಟನೆಯಲ್ಲಿ ಕೆಲವು ಪೊಲಿಸರು ಗಾಯಗೊಂಡಿದ್ದರ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ 144ಕಲಂ ಜಾರಿಗೊಳಿಸಲಾಗಿದೆ.