ಧಾರವಾಡ

ಬಂದ್ರು..ತಿಂದ್ರು..ಸೆಲ್ಸ್ ಟ್ಯಾಕ್ಸ್ ಅಂದ್ರು ಹೋದ್ರು……

ಧಾರವಾಡ

ಧಾರವಾಡದ ಡಿಎಚ್ಓ ಕಚೇರಿ ಎದುರಗಡೆ ಇರುವ ಬೇಕರಿಯ ಮುಂದೆ ನಿನ್ನೆ ರಾತ್ರಿ‌ ಒಂದು ಘಟನೆ ನಡೆದಿದೆ.

ಈ ಘಟನೆ ತುಂಬಾನೇ ಇಂಟರೆಸ್ಟಿಂಗ್ ಆಗಿದೆ.
ಕೈ ತುಂಬಾ ಸಂಬಳ ಪಡೆಯುವ ಇಬ್ಬರು ಚಿಲ್ಲರೆ ಕಾಸಿಗಾಗಿ ಹೊಟ್ಟೆ ತುಂಬ ತಿಂದು ಹಣ ಕೊಡದೇ , ಮಾಲೀಕನಿಗೆ ಫೋನ್ ಮಾಡಿ ಕೊಡು ಮಾತಾಡತೇವೆ ಅಂತಾ ತಮಗೆ ನಿಲ್ಲಲು ಬಾರದೇ ತೇಲಾಡುತ್ತಾ, ಬೇಕರಿ ಅಂಗಡಿಯವನಿಗೆ ಅವಾಜ್ ಹಾಕ್ತಾರೆ.

ರಾತ್ರಿ ಸುಮಾರು 9 ಗಂಟೆ ವೇಳೆಗೆ ಬಂದಂತಹ ‌ಇಬ್ಬರು ಬೇಕಾಬಿಟ್ಟಿ ತಿಂದು, ರಂಪಾಟ – ಗಲಾಟೆ ಮಾಡಿದ್ದಾರೆ.

ಸಾಲದಕ್ಕೆ ನಾವು ಸೆಲ್ಸ್ ಟ್ಯಾಕ್ಸ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ.

ನಿಜವಾಗಿಯೂ ಇವರು ಆ ಇಲಾಖೆಯ ಅಧಿಕಾರಿಗಳು ಆಗಿದ್ದರೆ, ಇಷ್ಟು ಸಣ್ಣಮಟ್ಟಕ್ಕೆ ಇಳಿತಾರಾ ಎನ್ನುವುದು ಇದೀಗ ಎಲ್ಲೇಡೆ ಮನೆ ಮಾತಾಗಿದೆ.

Related Articles

Leave a Reply

Your email address will not be published. Required fields are marked *

Back to top button