ಹುಬ್ಬಳ್ಳಿ

ಮೊಬೈಲ್ ಕದಿಯಲು ಬಂದಿದ್ದ ಯುವಕರ ಛಳಿ ಬಿಡಿಸಿದ ಗ್ರಾಮಸ್ಥರು!

POWERCITY NEWS : Dharwad

ಧಾರವಾಡ: ಸಂತೆಯಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಎನ್ನಲಾದ ಒರ್ವ ಯುವಕನನ್ನು ಸಾರ್ವಜನಿಕರೇ ಹಿಡಿದು ತೆಂಗಿನ ಮರಕ್ಕೆ ಕಟ್ಟಿ ಧರ್ಮದೇಟು ನೀಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ.

ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಶನಿವಾರದ ಸಂತೆ ಇದ್ದ ಕಾರಣ ಮೊಬೈಲ್ ಕಳ್ಳತನ ಮಾಡಲೆಂದು ಮೂವರ ತಂಡ ಇಲ್ಲಿಗೆ ಬಂದಿತ್ತು. ಮೂವರ ಪೈಕಿ ಓರ್ವ ಮೊಬೈಲ್ ಕಳ್ಳತನ ಮಾಡುತ್ತಿದ್ದ ವೇಳೆಯೇ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇನ್ನುಳಿದ ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸೆರೆ ಸಿಕ್ಕ ಓರ್ವನನ್ನು ತೆಂಗಿನಮರಕ್ಕೆ ಕಟ್ಟಿ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ಧರ್ಮದೇಟು ಬೀಳುತ್ತಿದ್ದಂತೆ ಈತ ನಾನು ಕಾಲೇಜು ಕಲಿಯುತ್ತಿದ್ದೇನೆ. ನಾನು ಹುಬ್ಬಳ್ಳಿಯವನು ಇಬ್ಬರು ನನ್ನನ್ನು ಇಲ್ಲಿಗೆ ಬೇರೆ ಕೆಲಸಕ್ಕೆಂದು ಕರೆದುಕೊಂಡು ಬಂದಿದ್ದರು ಎಂದು ಸುಳ್ಳು ಹೇಳಿದ್ದಾನೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಆತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button