ರಾಜಕೀಯರಾಜ್ಯಸ್ಥಳೀಯ ಸುದ್ದಿ

ವಿಜಯಪುರದ ಸಮಾವೇಶದಲ್ಲಿ: AIMIMನ ಅಸಾದುದ್ದೀನ್ ಓವೈಸಿ ಹೇಳಿದ್ದೇನು!

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ AIMIM ಪಕ್ಷದ ನಾಲ್ವರು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಪಾಲಿಕೆ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಗುಮ್ಮಟನಗರಿ ವಿಜಯಪುರಕ್ಕೆ ಆಗಮಿಸಿದ್ದ ಎ ಅಯ್ ಎಮ್ ಆಯ್ ಎಮ್ ಪಕ್ಷದ ರಾಷ್ಟೀಯ ಅಧ್ಯಕ್ಷರು ಹಾಗೂ ಸಂಸದರಾದ ಬ್ಯಾರಿಸ್ಟರ್ ಅಸಾದುದ್ದಿನ ಓವೈಸಿ ಜೊತೆ ಪಾದಯಾತ್ರೆಯಲ್ಲಿ ರಾಜ್ಯದ ಹಲವು ಜಿಲ್ಲೆಯ ಕಾರ್ಯಕರ್ತರು ಸೆರಿದಂತೆ ಧಾರವಾಡ ಜಿಲ್ಲೆಯ AIMIMನ ವಿಜಯ್ ಗುಂಟ್ರಾಳ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ವಿಜಯಪುರ ದ ಮಹಾನಗರ ಪಾಲಿಕೆ ಚುನಾವಣಾ ಪ್ರಚಾರ ನಿಮಿತ್ತ ಬಾಗವಹಿಸಿ ಅಭ್ಯರ್ಥಿ ಗಳಿಗೆ ಸ್ಪೂರ್ತಿ ತುಂಬಿದರು.

ಸಂಸದ ಅಸಾದುದ್ದೀನ್ ಓವೈಸಿ

ಇನ್ನೂ ವಿಜಯಪುರದಲ್ಲಿ ಓವೈಸಿ ಅವರ ಭರವಸೆಯ ಹವಾ ಬೀಸುತ್ತಿದ್ದು, ಪಕ್ಷದ ಅಭ್ಯರ್ಥಿಗಳ ಗೆಲುವು ನಿಶ್ವಿತ ಎಂದು ಹೇಳಲಾಗುತ್ತಿದೆ.

Video

ಸಂಜೆ ವೇಳೆ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶವನ್ನು AIMIM ಪಕ್ಷದ ನಾಲ್ವರು ಅಭ್ಯರ್ಥಿಗಳ ಪರ ಕಾರ್ಯಕರ್ತರು ಭರ್ಜರಿ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದರು. ಎ ಅಯ್ ಎಮ್ ಆಯ್ ಎಮ್ ಪಕ್ಷದ ರಾಷ್ಟೀಯ ಅಧ್ಯಕ್ಷ ಹಾಗೂ ಸಂಸದರಾದ ಬ್ಯಾರಿಸ್ಟರ್ ಅಸಾದುದ್ದಿನ ಓವೈಸಿ ಯವರು ಪ್ರಚಾರ ಕುರಿತು ಬಹಿರಂಗ ಸಮಾವೇಶದಲ್ಲಿ ಮಾತನಾಡಿ ಅಭ್ಯರ್ಥಿಗಳನ್ನ ಹುರಿದುಂಬಿಸಿದರು .

ವೇದಿಕೆಯ ಮೇಲೆ ಪಕ್ಷದ ಕಾರವಾನ್ ಕ್ಷೇತ್ರದ ಶಾಸಕರಾದ ಕೌಸರ್ ಮೈಯುದ್ದಿನ್ ರಾಜ್ಯ ಉಸ್ತುವಾರಿಗಳಾದ ಮೊಹಮ್ಮದ್ ಸಲೀಮ್ ಸಹಾಬ್,ಹಾಗೂ ಮೊಹಮ್ಮದ್ ಮುಬೀನ್ ಸಹಾಬ್, ರಾಜ್ಯ ಅಧ್ಯಕ್ಷರಾದ ಉಸ್ಮಾನ್ ಗಣಿ ಉಮ್ನಾಬಾದ್ ರಾಜ್ಯ ಪ್ರಧಾನ ಕಾರ್ಯದರ್ಶಿ ಲತೀಫ್ ಖಾನ್ ಪಠಾಣ್, ಧಾರವಾಡ ಜಿಲ್ಲಾ ಜಂಟಿ ಕಾರ್ಯದರ್ಶಿ ಡಾ. ವಿಜಯ್ ಎಮ್ ಗುಂಟ್ರಾಳ್, ಮುಖಂಡರಾದ ಇಮ್ತಿಯಾಜ್ ಬಿಳೆಪಸರ್, ಫರೀದ ಪೆನಗೊಂಡ್, ಹಾಷಮ್ ಮಕಾನದಾರ್,ರೂಸ್ತುಮ್ ಶೇರ್ದಿ, ಅಲ್ಲಿ ಅಹ್ಮದ್ ಕಲ್ಬುರ್ಗಿ, ಫಯಾಜ್ ವಡ್ಡೋ, ವಿಜಯ್ ಮೂಲಿಮನಿ, ಬಸವರಾಜ್ ಮಾದರ್, ಸಲ್ಮಾ ಮುಲ್ಲಾ, ಆನಂದ್ ನಾಗಣ್ಣವರ, ಸಚಿನ್ ಗಬ್ಬೂರ, ನಾಗರತ್ನ ಪೆನಗೊಂಡ್, ಮರಿಯಪ್ಪ ಬುಕನಟ್ಟಿ, ಸೆರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button