ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಸ್ವಾಮಿ ವಿವೇಕಾನಂದರು ಎಂದರೆ ಯುವಕರ ಬದುಕಿಗೆ ದಾರಿ ದೀಪ!

powercity news:

ಸ್ವಾಮಿ ವಿವೇಕಾನಂದರ ಜನ್ಮದಿನದ ವಿಶೇಷ: ಬರೆದವರು ಕೊಟ್ರೇಶ.ಎಸ್.ಕೆ.9886506099

ಕೊಟ್ರೇಶ ಎಸ್.ಕೆ.

ಭಾರತೀಯ ಇತಿಹಾಸ ಪುಟಗಳಲ್ಲಿ ಹಲವಾರು ಶ್ರೇಷ್ಠ ಸಂತರು,ಹಿಂದು ರಾಷ್ಟ್ರನಿರ್ಮಿಸಲು ಶ್ರಮಿಸಿದ ರಾಜರುಗಳು, ವೀರ ಮಹಿಳೆಯರು, ಮೇಧಾವಿಗಳು ಅಖಂಡ ಭಾರತ ವನ್ನು ಆಳಿದ ದೊರೆಗಳು. ಸಾಧುಗಳು, ದಾರ್ಶನಿಕರು ಮಹಾನ್ ವ್ಯಕ್ತಿಗಳು ತಮ್ಮ ಕೊಡುಗೆಗಳೊಂದಿಗೆ ಭಾರತವನ್ನು ಸುಭದ್ರ ರಾಷ್ಟ್ರವನ್ನಾಗಿ ವಿಶ್ವದ ಅಧ್ಯಾತ್ಮ ಕೇಂದ್ರಬಿಂದುವಾಗಿ ಗುರುತಿಸಲು ಕಾರಣೀಭೂತರಾಗಿದ್ದಾರೆ. ಹೀಗೆ ತಮ್ಮೆಲ್ಲಾ ಜೀವನವನ್ನು ಮುಡಿಪಾಗಿಟ್ಟು ದುಡಿದಿದ್ದಾರೆ. ಅಂತಹ ಸಮಯದಲ್ಲಿ 1863 ಕೊಲ್ಕತ್ತಾದಲ್ಲಿ ಜನವರಿ 12 ಶುಭ ಸೋಮವಾರದಂದು ತಾಯಿ ಭುವನೇಶ್ವರಿ ತಂದೆ ವಿಶ್ವನಾಥ ದತ್ತ ಇವರ ಮಗುವಾಗಿ ನರೇಂದ್ರನಾಥ ಎಂಬ ಅನರ್ಘ್ಯ ರತ್ನವೊಂದನ್ನು ವಾರಣಾಸಿಯಲ್ಲಿ ಶಿವನು ಕರುಣಿಸುತ್ತಾನೆ.
ಅವರು ಮುಂದೆ ಭವ್ಯ ಭಾರತವನ್ನು ಇಡೀ ವಿಶ್ವವೇ ಆಧ್ಯಾತ್ಮಿಕವಾಗಿ ಹಿಂದಿರುಗಿ ನೋಡುವಂತೆ ಮಾಡಿದ ರಾಷ್ಟ್ರದ ಮಹಾನ್ ಸಂತ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಕೊಲ್ಕತ್ತಾದ ಶ್ರೀಮಂತ ಮನೆತನದ ನರೇಂದ್ರ ನಾಥರ ಶ್ರೇಷ್ಠ ಕುಟುಂಬದಲ್ಲಿ ತನ್ನ ಉತ್ತಮ ಜೀವನ ರೂಪಿಸಿಕೊಳ್ಳಲು ಬೇಕಾದಂತಹ ಎಲ್ಲಾ ಸೌಕರ್ಯಗಳು ಮನೆಯಲ್ಲಿ ಸಿಗುವಂತಾಯಿತು. ಗೌರವ ಪ್ರತಿಷ್ಠೆ ಪಾಂಡಿತ್ಯ ಹೊಂದಿದ್ದ ಮನೆತನ ಅದು. ತಾತನವರು ಪರ್ಷಿಯನ್ ಸಂಸ್ಕೃತ ಕಾನೂನಿನಲ್ಲಿ ದುರ್ಗಾ ಚರಣದಲ್ಲಿ ದತ್ತರು ಪರಿಣಿತರಾಗಿದ್ದರು. ತಂದೆ ವಿಶ್ವನಾಥದತ್ತರು ಸರ್ಕಾರಿ ವಕೀಲರಾಗಿದ್ದರು. ಅದೇ ರೀತಿ ಪರ್ಷಿಯನ್ ಹಾಗೂ ಇಂಗ್ಲಿಷ್ ಭಾಷೆಯ ಪಂಡಿತರಾಗಿದ್ದರು. ತಾಯಿ ಭುವನೇಶ್ವರಿ ಕೂಡ ರಾಜಕುಟುಂಬದ ಸುಸಂಸ್ಕೃತ ಹೆಣ್ಣಾಗಿದ್ದರು. ಗಂಡು ಮಗುವಿಗಾಗಿ ವಾರಣಾಸಿ ಶಿವನಲ್ಲಿ ಹರಕೆ ಹೊತ್ತ ಫಲವಾಗಿ ಸಾಕ್ಷಾತ್ ಶಿವನೇ ಕರುಣಿಸಿದ ಮಗುವೆ ನರೇಂದ್ರ.

ಮನೆಯ ವಾತಾವರಣ ಆಚಾರ-ವಿಚಾರ, ತಾತನ ಪ್ರಭಾವ ತಂದೆಯ ಮಾರ್ಗದರ್ಶನ ಮತ್ತು ತಾಯಿ ಹೇಳಿ ಕೊಟ್ಟಂತಹ ರಾಮಾಯಣ-ಮಹಾಭಾರತ ಕಥೆಗಳು ನರೇಂದ್ರನಾಥನ ಮೇಲೆ ಬಾಲ್ಯದಲ್ಲಿಯೇ ಅಗಾಧ ದೇಶ ಭಕ್ತಿಯ ಪ್ರಭಾವ ಬೀರಿ ಶ್ರೇಷ್ಠ ವ್ಯಕ್ತಿತ್ವ ರೂಪ ತಾಳಿತು.
ಚಿಕ್ಕಂದಿನಲ್ಲಿಯೇ ಬಾಲಕ ನರೇಂದ್ರನು ತೀಕ್ಷ್ಣಬುದ್ಧಿಯವನು ಒಳ್ಳೆಯ ಕ್ರೀಡಾಪಟು, ತತ್ವಶಾಸ್ತ್ರ ಸಂಗೀತ ವಿದ್ಯೆಗಳಲ್ಲಿ ಪ್ರವೀಣನಾಗಿದ್ದನು. ತಾರುಣ್ಯದಲ್ಲಿ ನರೇಂದ್ರನಾಥನು ಸ್ಪುರದ್ರೂಪಿ ಯುವಕನಾಗಿದ್ದನು. ಬಾಲ್ಯದಲ್ಲಿಯೇ ರಾಮ ಸೀತೆ ಶಿವನ ವಿಗ್ರಹಗಳನ್ನು ಪೂಜಿಸುವದಾಗಲಿ ಧ್ಯಾನಿಸುವುದಾಗಲಿ ಇವನಿಗೊಂದು ದಿನಚರಿಯಾಗಿತ್ತು.

ಮತ್ತು ಸನ್ಯಾಸಿಗಳು ದೇಶಭಕ್ತರು ಬಡವರನ್ನು ಕಂಡರೆ ಅಪಾರ ಪ್ರೀತಿ ಇತ್ತು. ಮಹಾಭಾರತ ಹಾಗೂ ರಾಮಾಯಣದ ಕಥೆಗಳು ಇವರ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದ್ದವು. ವೀರ ಸನ್ಯಾಸಿಗೆ ಇರಬೇಕಾದಂತಹ ಎಲ್ಲಾ ಗುಣಲಕ್ಷಣಗಳು ಸ್ವಾಮಿ ವಿವೇಕಾನಂದರಲ್ಲಿ ಬಾಲ್ಯದಲ್ಲಿಯೇ ಗೋಚರಿಸಿದ್ದವು.

ಕಾಲೇಜು ದಿನಗಳಲ್ಲಿ ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ಚಿಂತನೆಯನ್ನು ಅಭ್ಯಸಿಸಿ ವಿಮರ್ಶಾತ್ಮಕ ಸ್ವಭಾವ ಇಮ್ಮಡಿಗೊಳಿಸಿ ಕೊಂಡರು. ಪ್ರಾಚೀನ ಧಾರ್ಮಿಕ ಸಂಪ್ರದಾಯಗಳಲ್ಲಿ ಗೌರವ ಮತ್ತೊಂದೆಡೆ ಬುದ್ಧಿಶಕ್ತಿಯೊಂದಿಗೆ ವಿಮರ್ಶೆ ಇವೆರಡು ಮನಸ್ಸಿನಲ್ಲಿ ಪರಸ್ಪರ ಸಂಘರ್ಷ ನಡೆಯುತ್ತಲೇ ಇತ್ತು.

ನರೇಂದ್ರ ನಾಥರಿಗೆ ಪ್ರಖ್ಯಾತ ಧರ್ಮ ಪ್ರಚಾರಕರನ್ನು ಭೇಟಿಯಾದರು. ದೇವರ ಬಗ್ಗೆ ಇವರಿಗೆ ಅಸ್ತಿತ್ವದ ಪ್ರಶ್ನೆಗೆ ಸಮರ್ಪಕ ಉತ್ತರ ದೊರೆಯಲಿಲ್ಲ. ಇದು ಅವರಲ್ಲಿ ಆಧ್ಯಾತ್ಮಿಕ ಘರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿತು.1881ರಲ್ಲಿ ಎರಡು ಮಹಾನ್ ಚೇತನಗಳ ಮಿಲನಾರ್ಥಕವಾಗಿ ಸ್ವಾಮಿ ವಿವೇಕಾನಂದರಿಗೆ ಮಹಾನ್ ಸಂತರಾದ ದಾರ್ಶನಿಕ ಶ್ರೀರಾಮಕೃಷ್ಣ ಪರಮಹಂಸರು ದೊರಕಿದರು. ಗುರುಗಳಿಗೆ ಮೊದಲ ಪ್ರಶ್ನೆ ಎಂಬಂತೆ ಮಹಾಶಯ ನೀವು ದೇವರನ್ನು ನೋಡಿದ್ದೀರಾ? ರಾಮಕೃಷ್ಣರು ಹೌದು ನೋಡಿದ್ದೇನೆ! ಈಗ ನಿನ್ನಲ್ಲಿ ನೋಡುವುದಕ್ಕಿಂತ ಗಾಢವಾಗಿ ನೋಡಿದ್ದೇನೆ ಎಂಬ ಉತ್ತರ ಸಿಕ್ಕಿತು.

ಅಲ್ಲಿಗೆ ದೇವರ ಅಸ್ತಿತ್ವದ ಬಗ್ಗೆ ಅನುಭವದಿಂದ ನುಡಿಯುವ ಒಬ್ಬ ವ್ಯಕ್ತಿ ದೊರೆತು ಅವರ ಸಂದೇಹ ಪರಿಹಾರವಾಗಿ ಶಿಷ್ಯವೃತ್ತಿ ಪ್ರಾರಂಭವಾಯಿತು. ವೀರ ಸನ್ಯಾಸಿಯ ಲೋಕ ಸಂಚಾರ 1888 ಕೊನೆ ಭಾಗದಿಂದ ಸಣ್ಣಪುಟ್ಟ ಸಂಚಾರ ಗಳೊಂದಿಗೆ ಪ್ರಾರಂಭವಾಗಿ.

ಮುಂದೆ 1890ರಿಂದ ಭಾರತದ ಹಲವು ಭಾಗಗಳಲ್ಲಿ ಸಂಚರಿಸಿ ಇಡೀ ಭಾರತವನ್ನು ಅಮೂಲಗ್ರವಾಗಿ ಯಾತ್ರೆಯ ಮುಖಾಂತರ ಬಡವರ ದೀನರ ದಬ್ಬಾಳಿಕೆಗೆ ಒಳಗಾಗಿದ್ದ ಭಾರತವನ್ನು ಕಂಡರು.

ಇದು ಇವರಲ್ಲಿ ಭಾರತವನ್ನು ಎಲ್ಲಾ ಬಂಧನಗಳಿಂದ ಮುಕ್ತಿಗೊಳಿಸುವ ಸಂಕಲ್ಪ ದ್ವಿಗುಣಗೊಂಡಿತು. ಇವರು ಮೊದಲಿಗೆ ವಾರಣಾಸಿಗೆ ಭೇಟಿ ಕೊಟ್ಟು ನಂತರ ಲಕ್ನೋ, ಆಗ್ರಾ ವೃಂದಾವನ,ಹತ್ರಾಸ್, ಹೃಷಿಕೇಶ್, ಮುಂತಾದ ಕಡೆ ಸಂಚರಿಸಿ ಭಾರಾನಾ ಗೋರಿಗೆ ಹಿಂದಿರುಗಿದರು.

ಮುಂದೆ ಇವರು ಸನ್ಯಾಸಿಗಳೊಂದಿಗೆ ಭಾರತದ ಎಲ್ಲ ರಾಜ್ಯಗಳನ್ನು ಪರ್ಯಟನ ಮಾಡಿದರು. ಸ್ವಾಮಿ ವಿವೇಕಾನಂದರು 1893ರಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದಂತ ಭಾಷಣ ಇಡೀ ಜಗತ್ತನ್ನೇ ಅವರೆಡೆಯತ್ತ ಹಾಗೂ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿತು.

ಅಮೆರಿಕದ ಪ್ರೀತಿಯ ಸಹೋದರ ಸಹೋದರಿಯರೇ ಎಂಬ ಅವರ ಭಾಷಣದ ಮೊದಲ ನುಡಿಗಳು ಅವರನ್ನು ಇಡೀ ಅಮೆರಿಕದ ಜನರು ಇಷ್ಟ ಪಡಲು ಕಾರಣವಾಯಿತು. ಸಮ್ಮೇಳನದಲ್ಲಿ ಮಾಡಿದ ಅವರ ಭಾಷಣ ಕೆಲವೇ ನಿಮಿಷಗಳಾದರೂ ನೆರೆದಿದ್ದ ಸಾವಿರಾರು ಜನರನ್ನು ಸೂಜಿಗಲ್ಲಿನಂತೆ ಸೆಳೆದುಬಿಟ್ಟರು. ಮತ್ತು ಸನಾತನ ಹಿಂದೂ ಧರ್ಮ ಆಧ್ಯಾತ್ಮಿಕದ ಒಳಹರಿವನ್ನು ಅತ್ಯಂತ ಸ್ಪಷ್ಟವಾಗಿ ಸ್ಫುಟವಾಗಿ ಮಂಡಿಸಿದರು.

ಹೀಗೆ ಸ್ವಾಮಿ ವಿವೇಕಾನಂದರು ವಿಶ್ವಮಟ್ಟದಲ್ಲಿ ವೀರ ಸನ್ಯಾಸಿಯಾಗಿ ವಿಜೃಂಭಿಸುತ್ತಾ, ಲಕ್ಷಾಂತರ ಮನಸುಗಳನ್ನು ಸೆಳೆದರು. ಇಂದಿಗೂ ಅವರ ವಿದ್ಯುತ್ ವಾಣಿಗಳು ಅವರು ತೋರಿದ ಮಾರ್ಗ ಅಚ್ಚಳಿಯದೆ ಉಳಿದು ಅವರ ಪರಂಪರೆ ಮುಂದುವರೆದಿದೆ.
ಸ್ವಾಮಿ ವಿವೇಕಾನಂದರು 04ಜುಲೈ 1902 ರಂದು ಬೇಲೂರು ಮಠ ಹೌರಾದಲ್ಲಿ ತಮ್ಮ 39ನೇ ಅತಿ ಸಣ್ಣ ವಯಸ್ಸಿನಲ್ಲೇ ನಮ್ಮನ್ನಗಲಿದರು.

ಸ್ವಾಮಿ ವಿವೇಕಾನಂದರು ರಾಷ್ಟ್ರವನ್ನು, ಹಿಂದುತ್ವವನ್ನು ಉತ್ತುಂಗಕ್ಕೇರಿಸಿ ಮಹಾನ್ ಸಂತ ಭಾರತದ ಹೆಮ್ಮೆಯ ಪುತ್ರ ವೀರಸನ್ಯಾಸಿ ಬಗ್ಗೆ ಅದೆಷ್ಟು ಬರೆದರೂ ಕಡಿಮೆಯೇ. ಅವರ ಜನ್ಮದಿನದ ಅಂಗವಾಗಿ ನನ್ನ ಈ ನುಡಿನಮನ. ಮೂಲ ರಾಷ್ಟ್ರಕವಿ ಕುವೆಂಪು ಬರೆದ ಸ್ವಾಮಿ ವಿವೇಕಾನಂದ ಪುಸ್ತಕ, ಹಾಗೂ ಶ್ರೀರಾಮಕೃಷ್ಣ ಆಶ್ರಮದ ಪುಸ್ತಕದಿಂದ ಆಯ್ದುಕೊಂಡ ಜ್ಞಾನ.
ಬರಹ
ಎಸ್.ಕೆ.ಕೊಟ್ರೇಶ.
ಹುಬ್ಬಳ್ಳಿ.
.

Related Articles

Leave a Reply

Your email address will not be published. Required fields are marked *

Back to top button