ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ”ಸೊಸೈಟಿ ಸೆಕ್ರೆಟರಿ”ಗಳ ನೇರ ಶಾಮೀಲು..!

POWER CITYNEWS:KALGHATAGI/ಕಲಘಟಗಿ: ಬಡ ಜನರ ಪಾಲಿಗೆ ಸೇರಬೇಕಿದ್ದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರುವ ಅಕ್ರಮ ದಂಧೆಯನ್ನ ಗ್ರಾಮಸ್ಥರೆ ಭೆಧಿಸಿರುವ ಘಟನೆ ಕಲಘಟಗಿ ತಾಲೂಕಿನ ಹಿರೆಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ: ಮಿಶ್ರೀಕೊಟಿ ಗ್ರಾಮದ ಸೊಸೈಟಿಯಲ್ಲಿನ ಅಂದಾಜು 70 ಚೀಲ ಪಡಿತರ ಅಕ್ಕಿ ಹಾಗೂ ಜೋಳವನ್ನು ಸೊಸೈಟಿ ಕಾರ್ಯನಿರ್ವಾಹಕ ಅಕ್ರಮವಾಗಿ ಹಿರೆಹೊನ್ನಳ್ಳಿಗ್ರಾಮದ ಸೊಸೈಟಿಗೆ ರಾತ್ರೋರಾತ್ರಿ ಸಾಗಾಟ ನಡೆಸುವ ವೇಳೆ ಸೊಸೈಟಿಯ ಸದಸ್ಯರು ಪಡಿತರ ಅಕ್ಕಿಯನ್ನು ಲಾರಿಯಲ್ಲಿನ ಅಕ್ಕಿ ಅನ್ಲೋಡ್ ಮಾಉವ ವೇಳೆಗೆ ಅಲ್ಲಿನ ಸೆಕ್ರೇಟರಿ ಗುರುಸಿದ್ದಪ್ಪ ಬಡಿಗೇರ ಎಂಬಾತನನ್ನು ಪ್ರಶ್ನಿಸಿದ್ದಾರೆ.

ಮರುದಿನ ಮಿಶ್ರೀಕೊಟಿ ಗ್ರಾಮಸ್ಥರು ಆಹಾರ ಇಲಾಖೆಯ ಅಧಿಕಾರಿಗಳಾದ ರವಿ ಬೆಂಗಳೂರಕರ ಹಾಗೂ ಅಂಗಡಿ ಎನ್ನುವ ಅಧಿಕಾರಿಗಳೊಂದಿಗೆ ತೆರಳಿ ಪರಿಸಿಲಿಸಿದ ವೇಳೆ ಅಕ್ರಮ ವೆಸಗಿರುವುದನ್ನ ಪ್ರಶ್ನಿಸಿ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡಿದ್ದಾರೆ. ಬಳಿಕ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲು ಏರಿದೆ. ಆದರೆ ಅಧಿಕಾರಿಗಳು ದೂರು ನೀಡಿದರೆ ಮಾತ್ರ ಕ್ರಮ ಕೈಗೊಳ್ಳೊದಾಗಿ ಕಲಘಟಗಿ ಪೊಲೀಸರು ಸ್ಪಷ್ಟವಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಇಬ್ಬರು ಅಧಿಕಾರಿಗಳು ನಾವು ಮುಂದಿನ ಕ್ರಮ ಜರುಗಿಸುತ್ತೇವೆ ನೀವು ನಿಶ್ಚಿಂತೆಯಾಗಿರಿ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೂ ಸಹ ಮಾಹಿತಿ ನೀಡದೆ ಪ್ರಕರಣ ಮುಚ್ಚಿಹಾಕುವ ಹುನ್ನಾರ ಸ್ವತಃ ಆಹಾರ ಇಲಾಖೆಯ ಅಧಿಕಾರಿಗಳು ಮಾಡಿರುವ ಮಸಲತ್ತು ಇದೀಗ ಗ್ರಾಮಸ್ಥರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ.
ಆದರೆ ಇವುಗಳ ನಡುವೆ ಪಡಿತರ ಅಕ್ಕಿ ಅವ್ಯವಹಾರ ಮಾಡಿರುವ ಹಿನ್ನೆಲೆಯಲ್ಲಿ ಮಿಶ್ರೀಕೊಟಿ ಗ್ರಾಮದ ಸೊಸೈಟಿ ಸಕ್ರೆಟರಿ ಸ್ಥಾನಕ್ಕೆ ಚಂದ್ರು ಎಂಬಾತ ರಾಜಿನಾಮೆ ನೀಡಿ ಸ್ಥಳದಿಂದ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.
ಆದ್ರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕಿದ್ದ ಆಹಾರ ಇಲಾಖೆ ಅಧಿಕಾರಿಗಳ ನಡೆ ತೀರ ಕುತೂಹಲ ಮೂಡಿಸಿದೆ.ಸಚಿವ ಸಂತೋಷ ಲಾಡ್ ಅವರು ಕ್ಷೇತ್ರದಲ್ಲಿ ಸದಾ ಆಕ್ಟೀವ್ ಇದ್ದರೂ ಸಹ ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಗಮನ ಹರಿಸದೆ ಇರುವುದೆ ವಿಪರ್ಯಾಸದ ಸಂಗತಿ.
